• Home
  • »
  • News
  • »
  • district
  • »
  • ಸಿದ್ದರಾಮಯ್ಯ ಓರ್ವ ಡಕೋಟ ರಾಜಕಾರಣಿ, ಜಾತಿ ವಿಷ ಬೀಜ ಬಿತ್ತಿ ಕುರುಬರ ಮತ ಪಡೆದಿದ್ದಾರೆ; ಈಶ್ವರಪ್ಪ ಕಿಡಿ

ಸಿದ್ದರಾಮಯ್ಯ ಓರ್ವ ಡಕೋಟ ರಾಜಕಾರಣಿ, ಜಾತಿ ವಿಷ ಬೀಜ ಬಿತ್ತಿ ಕುರುಬರ ಮತ ಪಡೆದಿದ್ದಾರೆ; ಈಶ್ವರಪ್ಪ ಕಿಡಿ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ಜೆಪಿ ಸರ್ಕಾರ ಡಕೋಟ ಎಕ್ಸ್‌ಪ್ರೆಸ್ ಅನ್ನೋ ಮಾಜಿ ಸಿಎಂ ಸಿದ್ದರಾಮಯ್ಯ ಡಕೋಟ ರಾಜಕಾರಣಿ ಆಗಿದ್ದಾರೆ, ಈ ಕಾರಣಕ್ಕೆ ಜನ ಕಾಂಗ್ರೆಸ್ ಸರ್ಕಾರವನ್ನು ತೆಗೆದ್ರು. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಿದರು ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

  • Share this:

ಚಿತ್ರದುರ್ಗ: ನಮ್ಮ ಬಿಜೆಪಿ ಸರ್ಕಾರ ಡಕೋಟಾ ಎಕ್ಸಪ್ರೇಸ್ ಅಲ್ಲ, ಪಾಸ್ಟ್ ಎಕ್ಸಪ್ರೇಸ್. ಜನ ಸಾಮಾನ್ಯರ ಕೆಲಸ ಪಾಸ್ಟ್ ಆಗಿ ಮಾಡುವ ಪಾಸ್ಟ್ ಎಕ್ಸಪ್ರೇಸ್ ಸರ್ಕಾರ. ಮಾಜಿ ಸಿಎಂ ಸಿದ್ದರಾಮಯ್ಯ ಡಕೋಟ ರಾಜಕಾರಣಿ ಆಗಿದ್ದಾರೆ. ಜಾತಿಯ ವಿಷ ಬೀಜ ಬಿತ್ತಿ ಕುರುಬರ ಮತ ಪಡೆದು, ಏನು ಮಾಡಿದ್ದಾರೆ. ಡಕೋಟ ರಾಜಕಾರಣಿಗಳಿಗೆ ಒಳ್ಳೆ ಕೆಲಸ ಕಾಣಲ್ಲ ಅಂತ ಚಿತ್ರದುರ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ಶಿವಮೊಗ್ಗದಿಂದ ಚಿತ್ರದುರ್ಗ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಈಶ್ವರಪ್ಪ ಚಿತ್ರದುರ್ಗದ ಖಾಸಗಿ ಹೋಟೆಲ್​ನಲ್ಲಿ ಉಪಹಾರ, ಚಹಾ, ಸೇವಿಸಿದ್ರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಸರ್ಕಾರ ಜನಪರ ಅನ್ನುವುದಕ್ಕೆ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿದ್ದೇವೆ. ನಮ್ಮ ಸರ್ಕಾರ ಡಕೋಟಾ ಎಕ್ಸಪ್ರೇಸ್ ಅಲ್ಲ, ಪಾಸ್ಟ್ ಎಕ್ಸಪ್ರೇಸ್. ಜನ ಸಾಮಾನ್ಯರ ಕೆಲಸ ಪಾಸ್ಟ್ ಆಗಿ ಮಾಡುವ ಪಾಸ್ಟ್ ಎಕ್ಸಪ್ರೇಸ್ ಸರ್ಕಾರ" ಎಂದು ಈಶ್ವರಪ್ಪ ತಿಳಿಸಿದ್ದಾರೆ.


ಅಲ್ಲದೆ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಈಶ್ವರಪ್ಪ "ಬಿಜೆಪಿ ಸರ್ಕಾರ ಡಕೋಟ ಎಕ್ಸ್‌ಪ್ರೆಸ್ ಅನ್ನೋ ಮಾಜಿ ಸಿಎಂ ಸಿದ್ದರಾಮಯ್ಯ ಡಕೋಟ ರಾಜಕಾರಣಿ ಆಗಿದ್ದಾರೆ, ಈ ಕಾರಣಕ್ಕೆ ಜನ ಕಾಂಗ್ರೆಸ್ ಸರ್ಕಾರವನ್ನು ತೆಗೆದ್ರು. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಡಕೋಟಾ ರಾಜಕಾರಣಿಗೆ ಒಳ್ಳೆಯ ಕೆಲಸ ಕಾಣಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.


ಇನ್ನೂ ಬಿಜೆಪಿಗೆ ಜನಾಶಿರ್ವಾದ ಇದೆ,ಯಾವುದೇ ಚುನಾವಣೆ ನಡೆದರು ಗೆಲ್ಲುತ್ತೇವೆ. ಸರ್ಕಾರವನ್ನ ಡಕೋಟಾ ಎಂದು ಡಕೋಟಾ ರಾಜಕಾರಣಿಗಳು ಕರೆಯುತ್ತಾರೆ. ಅಂತ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿ ನಾನೇ ಸಿಎಂ ಎಂದು ಹೇಳುತ್ತಿದ್ದರು. ಈಗ ಸಿದ್ದರಾಮಯ್ಯ ಹೇಳಿಕೆ ವ್ಯತ್ಯಾಸವಾಗಿದ್ದು, ಸಿದ್ದರಾಮಯ್ಯ ಹೇಳಿಕೆಯೇ ಡಕೋಟಾ ಹೇಳಿಕೆಯಾಗಿದೆ ಎಂದಿದ್ದಾರೆ. ಬಿಜೆಪಿ ಡಕೋಟಾ ಸರ್ಕಾರ ಎಂದು ಕರೆಯುತ್ತಿರುವುದು ರಾಜ್ಯದ ಜನರಿಗೆ ನೋವಾಗಿದೆ.ಯಾರ ಸರ್ಟಿಫಿಕೇಟ್ ಯಾರಿಗೂ ಕೂಡಾ ಬೇಕಿಲ್ಲ. ಸಿದ್ದರಾಮಯ್ಯ ಹಿಂದುಳಿದ-ದಲಿತ ನಾಯಕ ನಾನೇ ಎಂಬ ಅಹಂಕಾರದಲ್ಲಿದ್ದಾರೆ. ಇದರಿಂದ ನಾನು ಕೇಳಿದ್ದೇನೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟು ಪ್ರದರ್ಶನ; ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ


ನಮ್ಮ ಸರ್ಕಾರ ಹಿಂದುಳಿದ-ದಲಿತ ಮಠಗಳಿಗೆ ಕೋಟ್ಯಾಂತರ ಹಣ ನೀಡಿದೆ‌. ಸಿದ್ದರಾಮಯ್ಯ ಏನು ಮಾಡಿದ್ದಾರೆಂದು ಹೇಳಲಿ, ಜಾತಿಯ ವಿಷ ಬೀಜ ಬಿತ್ತಿ ಕುರುಬರ ಮತ ಪಡೆದು, ಏನು ಮಾಡಿದ್ದಾರೆ. ಪಾದಯಾತ್ರೆ ನೀವು ಮಾಡಿ ಬೆಂಬಲ ಇದೆ ಎಂದು ಸ್ವಾಮೀಜಿಗಳಿಗೆ  ಹೇಳಿ ದಿನಲೂ ಒಂದು ಹೇಳಿಕೆ ಕೊಟ್ಟರು. ಕುರುಬ ಸಮಾವೇಶ ಆರ್.ಎಸ್.ಎಸ್ ದುಡ್ಡಿನಲ್ಲಿ ಆಯ್ತು ಎಂದು ಹೇಳಿದ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.


ಬಸನ ಗೌಡ ಯತ್ನಾಳ್ ಗೆ ಬಿಜೆಪಿ ಹೈ ಕಮಾಂಡ್ ನೂಟೀಸ್ ಹಿನ್ನಲೆ ಪ್ರತಿಕ್ರಿಯಿಸಿ, ಯತ್ನಾಳ್ ಹೇಳಿಕೆ ಕೊಡುವುದನ್ನ ನಿಲ್ಲಿಸಿದ್ರೆ ಒಳ್ಳೆ ಕಾರ್ಯಕರ್ತ, ಹಿಂದುತ್ವದ ವಿಚಾರದಲ್ಲಿ ಕಟೋರವಾದ ವ್ಯಕ್ತಿತ್ವ ಇರುವಂತವರು. ಅವರ ಬಗ್ಗೆ ನಿಜಕ್ಕೂ ಹೆಮ್ಮೆ ಪಡುತ್ತೇನೆ. ಪ್ರಶಂಸೆ ಇದೆ ಆದರೇ, ಪಕ್ಷ, ನಾಯಕರ ಬಗ್ಗೆ ಬಹಿರಂಗ ಹೇಳಿಕೆಗೆ ನೋವಿದೆ. ಆತ ನನ್ನ ಆತ್ಮೀಯ ಸ್ನೇಹಿತ, ಈ ರೀತಿ ಹೇಳಿಕೆ ಕೊಡದಂತೆ ಮಾತನಾಡಿದ್ದೆನೆ. ಬಿಜೆಪಿಯಲ್ಲಿ ಚರ್ಚಿಸಲು ನೋವು ತೋಡಿಕೊಳ್ಳಲು ಅವಕಾಶವಿತ್ತು. ಅದನ್ನ ಬಿಟ್ಟು‌ಬಹಿರಂಗ ಹೇಳಿಕೆ ವಿಚಾರ ನೋವಾಗಿತ್ತು, ಈಗ ಕೇಂದ್ರ ನೋಟೀಸ್ ನೀಡಿದೆ ಈಗ ಅವರು ತಿದ್ದಿಕೊಳ್ಳಲಿ ಎಂದು ಹೇಳಿದ್ದಾರೆ.

Published by:MAshok Kumar
First published: