ಯತ್ನಾಳ್  ಹಿಂದುತ್ವವಾದಿ ಎಂಬುದಕ್ಕೆ ಖುಷಿ ಇದೆ, ಆದರೂ ಪಕ್ಷದ  ಶಿಸ್ತಿನ ಒಳಗೆ ಇದ್ದರೆ ಒಳ್ಳೆಯದು; ಈಶ್ವರಪ್ಪ

ಕೆಲವರು ಎಸ್​ಸಿ, ಕೆಲವರು ಎಸ್​ಟಿ‌, ಇನ್ನು ಕೆಲವರು ಒಬಿಸಿ, 2 ಎ ಬೇಕು ಅಂತ ಕೇಳುತ್ತಿದ್ದಾರೆ. ಯಾವ ಸಮಾಜಕ್ಕೆ ಮೀಸಲಾತಿಯ ಅರ್ಹತೆ ಇದೆ ಅವರಿಗೆ ನೀಡಬೇಕು ಎಂಬುದು ಅಂಬೇಡ್ಕರ್​​ ಅವರ ಆಶಯವಾಗಿದೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ತಿಳಿಸಿದ್ದಾರೆ.

ಕೆಎಸ್ ಈಶ್ವರಪ್ಪ.

ಕೆಎಸ್ ಈಶ್ವರಪ್ಪ.

  • Share this:
ಶಿವಮೊಗ್ಗ (ಫೆಬ್ರವರಿ 23); ಇತ್ತೀಚಿನ ದಿನಗಳಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಸಿಎಂ ಯಡಿಯೂರಪ್ಪ  ವಿರುದ್ದ ಒಂದರ ಹಿಂದೊಂದರಂತೆ ಹೇಳಿಕೆ ನೀಡುತ್ತಲೇ ಇದ್ದಾರೆ. ಇದರಿಂದ ಪಕ್ಷದ ಒಳಗೆ ಮುಜುಗರದ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಬಿಜೆಪಿ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ, ಶಾಸಕ ಯತ್ನಾಳ್​ಗೆ ನೊಟೀಸ್​ ಸಹ ಜಾರಿ ಮಾಡಿದ್ದಾರೆ. ಈ ಕುರಿತು ಇಂದು ಶಿವಮೊಗ್ಗ ದಲ್ಲಿ ಮಾತನಾಡಿರುವ ಸಚಿವ ಕೆ.ಎಸ್​. ಈಶ್ವರಪ್ಪ, "ಯತ್ನಾಳ್ ಅವರು ಸಿಎಂ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದಕ್ಕೆ ನಾನು ಒಪ್ಪಲ್ಲ‌. ಅವರು ಒಂದು ಪ್ರಕಾರದ ಹಿಂದೂತ್ವವಾದಿ, ಅದಕ್ಕೆ‌ ನಾನು ಖುಷಿ ಪಡುತ್ತೇನೆ. ಆದರೆ, ಅವರು  ಪಕ್ಷದ ಶಿಸ್ತಿನ ಒಳಗೆ ಇದ್ದರೆ ಒಳ್ಳೆಯದು" ಎಂದು ಸಲಹೆ ನೀಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್​ ಮತ್ತು ಬಿ.ಎಸ್.​ ಯಡಿಯೂರಪ್ಪ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಸಚಿವ ಈಶ್ವರಪ್ಪ, "ಯತ್ನಾಳ್ ಬಗ್ಗೆ ಏನು ಕ್ರಮ ತೆಗೆದು ಕೊಳ್ಳಬೇಕು? ಎಂಬ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕಳುಹಿಸಿ ಕೊಡಲಾಗಿದೆ. ಕೇಂದ್ರದ ನಾಯಕರು ಅವರಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಯತ್ನಾಳ್ ಉತ್ತರ ಸಹ ನೀಡಿದ್ದಾರೆ. ಕೇಂದ್ರದ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳ ಮೀಸಲಾತಿ ಹೋರಾಟದ ಕುರಿತು ಮಾತನಾಡಿರುವ ಈಶ್ವರಪ್ಪ, "ರಾಜ್ಯದಲ್ಲಿ  ಹಲವು ಸಮಾಜದವರು ಅವರ ಸಮಾಜಕ್ಕೆ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಆದರೆ ಅರ್ಹತೆ ತಕ್ಕಂತೆ ಮೀಸಲಾತಿ ಸಿಗಬೇಕು ಎಂಬುದು ನನ್ನ ಆಶಯವಾಗಿದೆ. ಆದರೆ, ಒತ್ತಾಯ ಮಾಡಿದವರಿಗೆ ಮೀಸಲಾತಿ ನೀಡುವುದಕ್ಕೆ ನಾನು ವಿರೋಧಿಸುತ್ತೇನೆ. ರಾಜ್ಯದಲ್ಲಿ ಅನೇಕ ಸಮಾಜದವರು ತಮಗೆ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ.

ಇದನ್ನೂ ಓದಿ: ದುಬೈನ ಭಾರತೀಯ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ..! ಇದರ ಬೆಲೆ ಎಷ್ಟು ಗೊತ್ತಾ..?

ಕೆಲವರು ಎಸ್​ಸಿ, ಕೆಲವರು ಎಸ್​ಟಿ‌, ಇನ್ನು ಕೆಲವರು ಒಬಿಸಿ, 2 ಎ ಬೇಕು ಅಂತ ಕೇಳುತ್ತಿದ್ದಾರೆ. ಯಾವ ಸಮಾಜಕ್ಕೆ ಮೀಸಲಾತಿಯ ಅರ್ಹತೆ ಇದೆ ಅವರಿಗೆ ನೀಡಬೇಕು ಎಂಬುದು ಅಂಬೇಡ್ಕರ್​​ ಅವರ ಆಶಯವಾಗಿದೆ. ಆದರೆ ಇಷ್ಟು ವರ್ಷ ಹಿಂದುಳಿದವರಿಗೆ, ದಲಿತರಿಗೆ ಧ್ವನಿಯೇ ಇರಲಿಲ್ಲ. ಈಗ ಸ್ವಾಮೀಜಿಗಳು‌ ಮೀಸಲಾತಿಗಾಗಿ ಮುಂದೆ ಬಂದಿರುವುದಕ್ಕೆ ನಾನು ಸ್ವಾಗತ ಮಾಡುತ್ತೇನೆ. ಆದರೆ, ಅರ್ಹತೆ ತಕ್ಕಂತೆ ಮೀಸಲಾತಿ ಸಿಗಬೇಕು ಎಂಬುದು ನನ್ನ ಆಶಯವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

"ಇನ್ನು  ಮೀಸಲಾತಿ ವಿಚಾರವಾಗಿ ನಿವೃತ್ತ ಹೈಕೋರ್ಟ್  ನ್ಯಾಯಾಧೀಶರ  ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದು‌ ಕೊಂಡಿದ್ದೇವೆ‌. ಮೀಸಲಾತಿ ಕುರಿತು ನಿವೃತ್ತ ನ್ಯಾಯಾಧೀಶರು  ವರದಿ ಕೊಡುತ್ತಾರೆ. ಅದರ ಪ್ರಕಾರ ಕ್ರಮ ತೆಗೆದು ಕೊಳ್ಳಲಾಗುತ್ತದೆ. ಹಿಂದುಳಿದ ವರ್ಗದ ಆಯೋಗ, ಸಮಿತಿ ಯಾರಿಗೆ ಏನು  ನೀಡಬೇಕು ಎಂದು ಶಿಫಾರಸು ಮಾಡುತ್ತಾರೋ ಅದನ್ನು ಗಮನಿಸಿ ಮೀಸಲಾತಿ ನೀಡುತ್ತೇವೆ" ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಮಾಹಿತಿ ನೀಡಿದ್ದಾರೆ.
Published by:MAshok Kumar
First published: