ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಎಷ್ಟು ಜನ ದಲಿತರನ್ನು ಸಿಎಂ ಮಾಡಿದೆ?; ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಪ್ರಶ್ನೆ
ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಸಿಎಂ ಎಂದು ಕೂಗಿಸುತ್ತಾರೆ. ಒಂದು ಕಡೆ ಡಿಕೆಶಿ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಚಿತ್ರದುರ್ಗ(ಜು.24): ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಕರ್ನಾಟಕದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಎಷ್ಟು ಜನ ದಲಿತರನ್ನ ಸಿಎಂ ಮಾಡಿದೆ. ಮುಂದೆಯೂ ನಾನೇ ಸಿಎಂ ಎಂದು ಹೇಳುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ, ಬಿಜೆಪಿ ಕರ್ನಾಟಕದಲ್ಲಿ ದಲಿತರನ್ನ ಸಿಎಂ ಮಾಡಲಿ ಎಂದು ಹೇಳುವ ಯೋಗ್ಯತೆ ಇಲ್ಲ, ಸ್ವತಂತ್ರ ಬಂದು ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ನವರು ಎಷ್ಟು ಜನ ದಲಿತರನ್ನ ಸಿಎಂ ಮಾಡಿದ್ದಾರೆ? ಮುಂದೆಯೂ ನಾನೇ ಸಿಎಂ ಎಂದು ಹೇಳುವ ಸಿದ್ದರಾಮಯ್ಯಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ಸಿಎಂ ಸಿದ್ದರಾಮಯ್ಯ, ಡಿಕೆಶಿ ಎಂದು ಬೆಂಬಲಿಗರ ಮೂಲಕ ಕೂಗಿಸುವ ಇವರು ಅಯೋಗ್ಯರು. ದೇಶದಲ್ಲಿ ದಲಿತ ರಾಷ್ಟ್ರಪತಿ ಮಾಡಿದ್ದು ನಾವು ಎಂದು ಸಚಿವ ಕೆಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಕಟೀಲ್ ದಲಿತರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಮಂದಿ ದಲಿತರನ್ನ ಸಿಎಂ ಮಾಡಿದ್ದಾರೆ? ಸ್ವತಂತ್ರ ಬಂದು ಇಷ್ಟು ವರ್ಷ ಆಡಳಿತ ನಡೆಸಿದ್ದಾರೆ. ಯೋಗ್ಯತೆ ಇಲ್ಲದ ಸಿದ್ದರಾಮಯ್ಯಗೆ ಬಿಜೆಪಿಗೆ ಸವಾಲ್ ಹಾಕುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನವರು ದಲಿತರನ್ನ ಸಿಎಂ ಮಾಡಲು ಆಗಿಲ್ಲ, ತುಳಿದಿದ್ದೇವೆ ಎಂದು ಸಿದ್ದರಾಮಯ್ಯ ಒಪ್ಪಿಕೊಳ್ಳಲಿ. ನಾವು ತುಳಿದಿದ್ದೇವೆ, ನೀವು ಉದ್ದಾರ ಮಾಡಿ ಎಂದರೆ ಅದಕ್ಕೆ ಬೆಲೆ ಇದೆ. ಅದನ್ನ ಬಿಟ್ಟು ಮುಂದೆಯೂ ನಾನೇ ಸಿಎಂ ಎಂದು ಹೇಳುವ ನಿಮಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಅವರು ದಲಿತರನ್ನ ಸಿಎಂ ಮಾಡಲ್ಲ, ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಸಿಎಂ ಎಂದು ಕೂಗಿಸುತ್ತಾರೆ. ಒಂದು ಕಡೆ ಡಿಕೆಶಿ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದೆಯಾ? ಇವರು ಅಯೋಗ್ಯರು. ದಲಿತ ರಾಷ್ಟ್ರ ಪತಿ ಮಾಡಿದ್ದು ನಾವು. ದಲಿತರನ್ನ ರಾಷ್ಟ್ರದಲ್ಲಿ ಎಷ್ಟು ಮಂದಿ ನಾವು CM ಮಾಡಿದ್ದೇವೆ. ರಾಜ್ಯದಲ್ಲಿರುವ ರಾಜ್ಯಪಾಲರು ಯಾರು? ಅವರು ದಲಿತರು. BJP ರಾಷ್ಟ್ರ ಭಕ್ತಿ ಇರುವವರನ್ನ ಮಾಡುತ್ತೇವೆ. ಜಾತಿ ನೋಡಿ ಅಲ್ಲ ಎಂದರು.
ಸಾಮಾಜಿಕ ನ್ಯಾಯ ಎಂದು ಧರ್ಮಸಿಂಗ್ ಅವರನ್ನ ಉದ್ದಾರ ಆಗಲು ಬಿಡಲಿಲ್ಲ. ಡಾ.ಜಿ. ಪರಮೇಶ್ವರ ಅವರನ್ನ ಸಿದ್ದರಾಮಯ್ಯ ಸೋಲಿಸಿದರು, ಈಗ BJP ಅಧ್ಯಕ್ಷರಿಗೆ ಸವಾಲ್ ಹಾಕುವ ನೈತಿಕತೆ ಇಲ್ಲವೇ ಇಲ್ಲ ಬಿಡಿ ಎಂದು ಕಿಡಿಕಾರಿದರು.
ಮುಂದೆ ಬಿಜೆಪಿಯಲ್ಲಿ ಯಾರೇ CM ಆದರೂ ಭ್ರಷ್ಟರೇ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ಭ್ರಷ್ಟರ ಬಾಯಲ್ಲಿ ಎಂಥ ಮಾತು ಬರುತ್ತೆ. ಭ್ರಷ್ಟರಲ್ಲದ CM ಯಾಕೆ ಸರ್ಕಾರ ಕೆಡವಿಕೊಂಡರು. ಸಿದ್ದರಾಮಯ್ಯ ಯಾಕೆ ಚಾಮುಂಡೇಶ್ವರಿಯಲ್ಲಿ ಸೋತರು, ಕಾಂಗ್ರೆಸ್ ಸರ್ಕಾರ ಯಾಕೆ ರಾಜ್ಯದಲ್ಲಿ ಹೋಯ್ತು. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹೋಗಿದೆ. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ