ಕ್ಷೇತ್ರದ 4 ಲಕ್ಷ ಜನರಿಗೆ ಉಚಿತವಾಗಿ ಆಯುರ್ವೇದ ಔಷಧ ವಿತರಣೆಗೆ ಮುಂದಾದ ಸಚಿವ ಈಶ್ವರಪ್ಪ

85 ಸಾವಿರ ಮನೆಗಳಿಗೆ 4 ಲಕ್ಷ ಕಿಟ್ ವಿತರಣೆಗೆ ಇಂದು ಚಾಲನೆ ನೀಡಲಾಗುತ್ತಿದೆ. ಈಗ ಸುಮಾರು 60 ಸಾವಿರ ಆಯುರ್ವೇದಿಕ್ ಕಿಟ್ ರೆಡಿಯಾಗಿದೆ. 3 ಹಂತದಲ್ಲಿ ಈ ಕಿಟ್ ವಿತರಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ

news18-kannada
Updated:July 29, 2020, 9:57 AM IST
ಕ್ಷೇತ್ರದ 4 ಲಕ್ಷ ಜನರಿಗೆ ಉಚಿತವಾಗಿ ಆಯುರ್ವೇದ ಔಷಧ ವಿತರಣೆಗೆ ಮುಂದಾದ ಸಚಿವ ಈಶ್ವರಪ್ಪ
ಆಯುರ್ವೇದ ಔಷಧ
  • Share this:
ಶಿವಮೊಗ್ಗ(ಜುಲೈ.29): ಕೊರೋನಾ ಸಂಕಷ್ಟದ ಸಮಯದಲ್ಲಿ ಹಲವು ಜನ ಪ್ರತಿನಿಧಿಗಳು ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಸಹಕಾರ ಮಾಡುತ್ತಿದ್ದಾರೆ. ಅದೇ ರೀತಿ ಸಚಿವ ಈಶ್ವರಪ್ಪ ತಾನು ಪ್ರತಿನಿಧಿಸುವ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮುಂದಾಗಿದ್ದಾರೆ. ಕೊರೋನಾ ಕಾಲದಲ್ಲಿ ಸಾರ್ವಜನಿಕರಿಗೆ ಇಮ್ಯುನಿಟಿ ಬೂಸ್ಟರ್ ಕಿಟ್ ನೀಡಲು ಮುಂದಾಗಿದ್ದಾರೆ. 4 ಲಕ್ಷ ಆಯುರ್ವೇದಿಕ್ ಕಿಟ್ ವಿತರಣೆಗೆ ಸಜ್ಜಾಗಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. 

ಕೊರೋನಾ ಮಹಾಮಾರಿಯಿಂದ ದೇಶ ಸೇರಿದಂತೆ ವಿಶ್ವವೇ ಇಂದು ಸಂಕಷ್ಟ ಅನುಭವಿಸುತ್ತಿದೆ. ಲಕ್ಷಾಂತರ ಜನರನ್ನು ಈ ಮಹಾಮಾರಿ ಬಲಿ ಪಡೆದಿದೆ. ಪ್ರಪಂಚದ ಜನರಲ್ಲಿ ಭಯ ಸೃಷ್ಟಿಸಿದೆ. ಈ ಕೊರೋನಾದಿಂದ ಪರಾಗಲು ಜನರು ನೂರಾರು ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕೊರೋನಾದ ಸಂಕಷ್ಟದ ಕಾಲದಲ್ಲಿ ಸಾರ್ವಜನಿಕರಿಗೆ ಜನ ಪ್ರತಿನಿಧಿಗಳು, ಶಾಸಕರು, ಸಚಿವರು ಸಹ ತಮ್ಮ ಕೈಯಲ್ಲಿ ಆದ ಸಹಾಯ ಮಾಡುತ್ತಿದ್ದಾರೆ. ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ. ಅದರೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಈಗ ತಮ್ಮ ಕ್ಷೇತ್ರದ ಜನರಿಗೆ ವಿನೂತನವಾದ ಕಿಟ್ ನೀಡಲು ಮುಂದಾಗಿದ್ದಾರೆ.

ಕೊರೋನಾ ಬರದಂತೆ ತಡೆಯಲು ಕ್ಷೇತ್ರದ ಜನರಿಗೆ ಇಮ್ಯುನಿಟಿ ಬೂಸ್ಟರ್ ನೀಡಲು ಸಜ್ಜುಗೊಂಡಿದ್ದಾರೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದಿಕ್ ಕಿಟ್ ವಿತರಣೆ ಮಾಡಲಿದ್ದಾರೆ. ಕೋವಿಡ್ ರಕ್ಷಣಾ ಪಡೆ ಎಂಬ ತಂಡವನ್ನು ಸ್ಥಾಪಿಸಿ ಈ ಮೂಲಕ ಜನರಿಗೆ ಆಯುರ್ವೇದಿಕ್ ಕಿಟ್ ವಿತರಣೆ ಮಾಡಲು ಸಿದ್ಧಗೊಂಡಿದ್ದಾರೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಗರದ ಕ್ಷೇತ್ರದ 4 ಲಕ್ಷ ಜನರಿಗೆ ಕಿಟ್ ವಿತರಣೆಗೆ ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಸಚಿವ ಈಶ್ವರಪ್ಪ, ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಿ, ಈ ಕಾರ್ಯ ಮಾಡುತ್ತಿದ್ದಾರೆ.

85 ಸಾವಿರ ಮನೆಗಳಿಗೆ 4 ಲಕ್ಷ ಕಿಟ್ ವಿತರಣೆಗೆ ಇಂದು ಚಾಲನೆ ನೀಡಲಾಗುತ್ತಿದೆ. ಈಗ ಸುಮಾರು 60 ಸಾವಿರ ಆಯುರ್ವೇದಿಕ್ ಕಿಟ್ ರೆಡಿಯಾಗಿದೆ. 3 ಹಂತದಲ್ಲಿ ಈ ಕಿಟ್ ವಿತರಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಿಟ್ ನಲ್ಲಿ 3 ವಿವಿಧ ಔಷಧ ನೀಡಲಾಗುತ್ತಿದೆ. ಕಷಾಯ ಚೂರ್ಣ, ಸಂಶಮನಿ ವಟಿ, ಅಸನಿಕ್ ಆಲ್ಬಂ ಔಷಧಿಗಳನ್ನು ಹೊಂದಿರುವ ಕಿಟ್ ರೆಡಿ ಮಾಡಲಾಗಿದೆ.

ಇದನ್ನೂ ಓದಿ : ನೀರಾವರಿ ನಿಗಮದ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ : ಮಹದಾಯಿ ಮಾದರಿ ಹೋರಾಟದ ಎಚ್ಚರಿಕೆ

ಕಷಾಯ ಚೂರ್ಣದಿಂದ ಜೀರ್ಣ ಶಕ್ತಿ ಹೆಚ್ಚಾಗಿ ಪೋಷಕಾಂಶಗಳು ನಮ್ಮ ದೇಹಕ್ಕೆ ತಲುಪಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ. ಸಂಶಮನಿ ವಟಿ  ರಕ್ತದಲ್ಲಿರುವ ಆಕ್ಸಿಜನ್ ಅಂಶ ಹೆಚ್ಚು ಮಾಡಲಿದೆ. ಈಶ್ವರಪ್ಪನವರ ಈ ಕಾರ್ಯಕ್ಕೆ  ಸಾರ್ವಜನಿಕರು ಸೇರಿದಂತೆ ಎಲ್ಲರೂ ಪ್ರಂಶಸೆ ವ್ಯಕ್ತವಾಗುತ್ತಿದೆ.
ಇಂತಹ ಕಾರ್ಯದ ಮೂಲಕ ಸಚಿವ ಈಶ್ವರಪ್ಪ, ತಮ್ಮ  ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ. ಸಾರ್ವಜನಿಕರವಾಗಿ ಈ ಒಂದು ಕಾರ್ಯ ಶ್ಲಾಘನೀಯವಾಗಿದೆ. ಮನೆ ಮನೆ ಬಾಗಿಲಿಗೆ ತಂಡದ ಸದಸ್ಯರು ಹೋಗಿ ಕಿಟ್ ವಿತರಣೆ ಮಾಡಲಿದ್ದಾರೆ. ಆಧಾರ್ ಕಾರ್ಡ್ ತೊರಿಸಿದರೇ ಸಾಕು, ಕಿಟ್ ನೀಡಲಾಗುತ್ತದೆ.
Published by: G Hareeshkumar
First published: July 29, 2020, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading