ದೇವಾಲಯಗಳಲ್ಲಿ ಕರ್ಪೂರ, ಪುಷ್ಪಾರ್ಚನೆಗೆ ಸಂಬಂಧಿಸಿದಂತೆ ನಾಲ್ಕು ದಿನದಲ್ಲಿ ನಿರ್ಧಾರ; ಶ್ರೀನಿವಾಸ ಪೂಜಾರಿ

ಈಗ ಭಕ್ತರು ಶುಚಿತ್ವ ಕಾಪಾಡಿಕೊಂಡು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಮುಂದಿನ ನಾಲ್ಕು ದಿನಗಳಲ್ಲಿ ಲಾಕ್‌ಡೌನ್ ಸಡಿಲವಾದರೆ ಭಕ್ತರಿಗೆ ಕರ್ಪೂರಾರ್ಚನೆ, ಪುಷ್ಪಾರ್ಚನೆಗೆ ಅವಕಾಶ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ.

  • Share this:
ವಿಜಯಪುರ (ಜೂ 17); ದೇವಸ್ಥಾನಗಳಲ್ಲಿ ಭಕ್ತರಿಗೆ ಕರ್ಪೂರ ಮತ್ತು ಪುಷ್ಪಾರ್ಚನೆ ಮಾಡಲು ಅವಕಾಶ ನೀಡುವ ಕುರಿತು ನಾಲ್ಕು ದಿನಗಳಲ್ಲಿ ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿರುವ ಅವರು, "ಲಾಕ್‌ಡೌನ್ ಈಗ ಸಡಿಲಿಕೆಯಾಗುತ್ತಿದೆ. ನಾಲ್ಕು ದಿನಗಳಲ್ಲಿ ಮತ್ತಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದೆ.  ಈಗ ಭಕ್ತರು ಶುಚಿತ್ವ ಕಾಪಾಡಿಕೊಂಡು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಮುಂದಿನ ನಾಲ್ಕು ದಿನಗಳಲ್ಲಿ ಲಾಕ್‌ಡೌನ್ ಸಡಿಲವಾದರೆ ಭಕ್ತರಿಗೆ ಕರ್ಪೂರಾರ್ಚನೆ, ಪುಷ್ಪಾರ್ಚನೆಗೆ ಅವಕಾಶ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Corona Virus: ತಮಿಳುನಾಡಿನಲ್ಲಿ 50,000 ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಮಹಾರಾಷ್ಟ್ರ, ದೆಹಲಿ ಸಾಲಿನಲ್ಲಿ ನಿಂತ ನೆರೆ ರಾಜ್ಯ

ಇದೇ ಸಂದರ್ಭದಲ್ಲಿ ಚೀನಾ ಭಾರತದ ಗಡಿಯನ್ನು ಅತೀಕ್ರಮಮಿಸಿದ ಕುರಿತು ಕೇಂದ್ರ ಸರಕಾರ ಯಾವುದೇ ಕ್ರಮವಹಿಸದೆ ಮೌನ ವಹಿಸಿರುವುದು ದೇಶದ್ರೋಹಕ್ಕೆ ಸಮಾನ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕೋಟಾ ಶ್ರೀನಿವಾಸ ಪೂಜಾರಿ, "ಮಾಜಿ ಸಿಎಂ ಸಿದ್ದರಾಮಯ್ಯ ಯೋಚಿಸಿ ಮಾತನಾಡಬೇಕು" ಎಂದು ಕಿವಿಮಾತು ಹೇಳಿದ್ದಾರೆ.
First published: