• Home
  • »
  • News
  • »
  • district
  • »
  • ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತರನ್ನು ಹಿಡಿದ ಸಿದ್ಧರಾಮಯ್ಯ ; ಸಚಿವ ಈಶ್ವರಪ್ಪ ಲೇವಡಿ

ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತರನ್ನು ಹಿಡಿದ ಸಿದ್ಧರಾಮಯ್ಯ ; ಸಚಿವ ಈಶ್ವರಪ್ಪ ಲೇವಡಿ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ರಾಜ್ಯದಲ್ಲಿ ಒಂದು ಲೋಕಸಭಾ ಸ್ಥಾನ ಗೆದ್ದು ರಾಜ್ಯದಲ್ಲಿ ಸರ್ಕಾರವನ್ನು ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಗೆ ಹತಾಶೆ ಸ್ಥಿತಿ ಬಂದಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತ ಸಂಘಟನೆಗಳನ್ನ ಹಿಡಿದಿದೆ.

  • Share this:

ಚಿತ್ರದುರ್ಗ(ಜುಲೈ.24): ರೈತರ ಜೊತೆ ಹೋರಾಟಕ್ಕೆ ಇಳಿಯುತ್ತೇವೆ ಎನ್ನುವುದು ಕರ್ನಾಟಕದಲ್ಲಿ ಕಾಂಗ್ರೆಸ್ ಶಕ್ತಿ ಹೀನವಾಗಿದೆ ಎಂದರ್ಥ, ಸಿದ್ದರಾಮಯ್ಯ ಜೀವಂತ ಇದ್ದಾರೆ ಎಂಬುದನ್ನ ತೋರಿಸಿಕೊಳ್ಳಲು, ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ಸಿದ್ದರಾಮಯ್ಯ ರೈತರನ್ನ ಹಿಡಿದಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.


ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ 79 ಎಬಿ, ಕೇಂದ್ರ ಸರ್ಕಾರದ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತರ ಜೊತೆ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿರುವ ಸಚಿವರು, ಕಾಂಗ್ರೆಸ್  ನಾಯಕರು ರೈತರ ಜೊತೆ ಸೇರಿ ಹೋರಾಟಕ್ಕೆ ಇಳಿಯುವುದರ ಅರ್ಥ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಹೀನವಾಗಿದೆ ಎಂದರ್ಥ. ಆ ಪಕ್ಷಕ್ಕೆ ಸ್ಚತಂತ್ರವಾಗಿ ಹೋರಾಡುವ ಶಕ್ತಿ ಇದ್ದಿದ್ದರೆ ರೈತರನ್ನ ಯಾಕೆ ಸೇರಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.


ಇನ್ನೂ ರಾಜ್ಯದಲ್ಲಿ ಒಂದು ಲೋಕಸಭಾ ಸ್ಥಾನ ಗೆದ್ದು ರಾಜ್ಯದಲ್ಲಿ ಸರ್ಕಾರವನ್ನು ಕಳೆದು ಕೊಂಡಿದ್ದರಿಂದ ಕಾಂಗ್ರೆಸ್ ಗೆ ಹತಾಶೆ ಸ್ಥಿತಿ ಬಂದಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತ ಸಂಘಟನೆಗಳನ್ನ ಹಿಡಿದಿದೆ. ಎಂದಿದ್ದಾರೆ.


ಇನ್ನೂ ಕೊರೋನಾ ಸಲಕರಣೆ ಖರೀದಿ ಸುಳ್ಳು ಲೆಕ್ಕ ಕೊಟ್ಟಿದ್ದಾರೆಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಪೈಪೋಟಿ ಇದೆ. ಇಬ್ಬರಿಗೂ ನಾನು ಲೀಡರ್ ಆಗಬೇಕೆಂಬ ಪೈಪೋಟಿ ಇದೆ. ಹಾಗಾಗಿ ಸರ್ಕಾರದ ಮೇಲೆ ಏನಾದರು ಆಪಾದನೆ ಮಾಡಿದರೆ ಲೀಡರ್ ಆಗುತ್ತೇನೆಂಬ ಭಾವನೆ ಇದೆ. ಜೊತೆಗೆ ಸೋನಿಯಾ ಗಾಂಧಿಯವರನ್ನು ತೃಪ್ತಿ ಪಡಿಸಲು ಸಿದ್ದಾರಾಮಯ್ಯ ಜೀವಂತ ಇದ್ದೇನೆ ಎಂದು ತೊರಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ವಿರೋಧ ಪಕ್ಷದವರು ಪಕ್ಷ ಬೇದ, ಮರೆತು  ಸರ್ಕಾರದ ಜೊತೆ ಕೈ ಜೋಡಿಸಿದರೆ ನಾವೆಲ್ಲ ಅವರನ್ನು ಮೆಚ್ಚುತ್ತಿದ್ದೆವು. ಅವರು ಪ್ರತಿಯೊಂದರಲ್ಲು ಹುಳುಕು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.


ಇನ್ನೂ ರಾಜ್ಯದಲ್ಲಿ ಹೆಚ್ಚುತ್ತಿರು ಕೊರೋನಾ ತಡೆ ಕುರಿತು ಪ್ರತಿ ಕ್ರಿಯಿಸಿರುವ ಸಚಿವರು, ಕೆಲವು ರಾಜ್ಯಗಳಲ್ಲಿ ಮಾಸ್ಕ್ ದರಿಸಲೇ ಬೇಡಿ ಎಂದು ಹೇಳುತ್ತಿದ್ದಾರೆ. ಕೆಲವು ಕಡೆ ಲಾಕ್ ಡೌನ್ ಉಪಯೋಗ ಇಲ್ಲವೆಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ತಜ್ಞರ ಸಲಹೆಯಂತೆ ಸಿಎಂ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ದರಾಗಿರುತ್ತೇವೆ  ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : ಚಾಮರಾಜನಗರ : ಚನ್ನಪ್ಪನಪುರ ವೀರಭದ್ರೇಶ್ವರನ ಕಳಸದ ಮೇಲೆ ರೈಸ್ ಪುಲ್ಲಿಂಗ್ ಖದೀಮರ ಕಣ್ಣು!


ಬಿಜೆಪಿ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂದೆ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಅನುಭವದ ಮೇಲೆ ಆ ಮಾತು ಹೇಳಿರಬಹುದು, ರೇವಣ್ಣ ದಂದೆ ಕೋರ, ವರ್ಗಾವಣೆಯಲ್ಲಿ ಎಕ್ಸ್ ಪರ್ಟ್, ತಾನು ಮಾಡಿದ ಕ್ರಿಯೆಯನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.


ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಚುನಾವಣೆ ಆಯೋಗ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆ ಮಾಡಿದರೆ ನಾವು ಸಿದ್ದವಿದ್ದೇವೆ. ಕೊರೋನಾದ ಈ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಆಗಲಿಕ್ಕಿಲ್ಲ, ಭಗವಂತನ ದಯೆಯಿಂದ ಕೊರೋನಾ ಹೋಗಿ ಚುನಾವಣೆ ಆಗುವ ಪರಿಸ್ಥಿತಿ ಬಂದರೆ ಸ್ವಾಗತಿಸುತ್ತೇವೆ ಎಂದಿದರು.

Published by:G Hareeshkumar
First published: