ಜೆಡಿಎಸ್ ಭದ್ರಕೋಟೆ ಹಾಸನ‌ ಜಿಲ್ಲೆಯ ಉಸ್ತುವಾರಿಯಾಗಿ ಸಚಿವ ಕೆ.ಗೋಪಾಲಯ್ಯ ನೇಮಕ

ಈಗಾಗಲೇ ಸಚಿವ ನಾರಾಯಣಗೌಡ ಅವರಿಗೆ ಮಂಡ್ಯ ಉಸ್ತುವಾರಿ ನೀಡಲಾಗಿದೆ. ಈಗ ಗೋಪಾಲಯ್ಯನವರಿಗೆ ಹಾಸನ ಉಸ್ತುವಾರಿ ವಹಿಸಲಾಗಿದೆ. ಇವರಿಬ್ಬರು ಮೂಲ ಜೆಡಿಎಸ್ ನಿಂದಲೇ ಬಂದಂತವರು. ಅಲ್ಲದೆ, ಪ್ರಸ್ತುತ ಜೆಡಿಎಸ್ ಭದ್ರಕೋಟೆಯ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಸಚಿವ ಕೆ. ಗೋಪಾಲಯ್ಯ.

ಸಚಿವ ಕೆ. ಗೋಪಾಲಯ್ಯ.

  • Share this:
ಬೆಂಗಳೂರು (ಜೂನ್‌ 02); ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಅವರನ್ನು ಹಾಸನ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಆದರೆ, ಬೆಂಗಳೂರು ಭಾಗದ ಶಾಸಕರಾಗಿರುವ ಕೆ.ಗೋಪಾಲಯ್ಯರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಜೊತೆಗೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ತವರು ಜಿಲ್ಲೆ. ಹೀಗಾಗಿ ಅತಿ ಹೆಚ್ಚು ಜೆಡಿಎಸ್ ಶಾಸಕರಿರುವ ಕ್ಷೇತ್ರಕ್ಕೆ ಕೆ.ಗೋಪಾಲಯ್ಯ ರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಗೋಪಾಲಯ್ಯ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದವರು. ನಂತರ ಬಿಜೆಪಿಯ ಆಪರೇಷನ್ ಕಮಲದಿಂದ ಜೆಡಿಎಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.‌ ನಂತರ ಉಪ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಗೆದ್ದು ಇದೀಗ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಈಗಾಗಲೇ ಸಚಿವ ನಾರಾಯಣಗೌಡ ಅವರಿಗೆ ಮಂಡ್ಯ ಉಸ್ತುವಾರಿ ನೀಡಲಾಗಿದೆ. ಈಗ ಗೋಪಾಲಯ್ಯನವರಿಗೆ ಹಾಸನ ಉಸ್ತುವಾರಿ ವಹಿಸಲಾಗಿದೆ. ಇವರಿಬ್ಬರು ಮೂಲ ಜೆಡಿಎಸ್ ನಿಂದಲೇ ಬಂದಂತವರು. ಅಲ್ಲದೆ, ಪ್ರಸ್ತುತ ಜೆಡಿಎಸ್ ಭದ್ರಕೋಟೆಯ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಇವರಿಂದ ಅವರದ್ದೆ ಪಕ್ಷದ ನಾಯಕರಿಗೆ ಟಕ್ಕರ್ ಕೊಟ್ಟು, ಅಲ್ಲಿ ಬಿಜೆಪಿ  ಪಕ್ಷವನ್ನು ಬಲ ಪಡಿಸುವುದು ಸಿಎಂ ಯಡಿಯೂರಪ್ಪರ ಪ್ಲಾನ್.

ಅದಕ್ಕಾಗಿಯೇ ಈಗ ಜೆಡಿಎಸ್ ಭದ್ರಕೋಟೆಗಳಲ್ಲಿ ಅವರದ್ದೆ ಪಕ್ಷದಿಂದ ಬಂದಂತವರಿಗೇ  ಉಸ್ತುವಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಮಾಸ್ಟರ್‌ ಪ್ಲ್ಯಾನ್‌ ಮುಂದಿನ ದಿನಗಳಲ್ಲಿ ಯಾವ ರೀತಿ ಬಿಜೆಪಿ ಕೈ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಪೊಲೀಸ್‌ ಠಾಣೆಯಿಂದಲೇ 50 ಸಜೀವ ಗುಂಡುಗಳ ನಾಪತ್ತೆ; ಮೈಸೂರಿನ ಟಿ.ನರಸೀಪುರ ಪೊಲೀಸ್‌ ಠಾಣೆಯಲ್ಲಿ ಘಟನೆ
First published: