ಜಾಡಿಸಿ ಒದ್ದರೆ ಎಲ್ಲಿಗೋಗ್ತಿಯಾ ಗೊತ್ತಾ? ರಾಸ್ಕಲ್; ಅಧಿಕಾರಿ ವಿರುದ್ಧ ಸಚಿವ ಮಾಧುಸ್ವಾಮಿ ಕೆಂಡಾಮಂಡಲ

ಲೋಕೋಪಯೋಗಿ ಇಲಾಖೆಯ ಇಇ ಇಂಜಿನಿಯರ್ ಸಂಜೀವ್ ರಾಜ್ ಅವರಿಗೆ ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ನೀಡುವ ಸಂದರ್ಭದಲ್ಲಿ ತಿಪಟೂರಿನ ಶಾಸಕ ಬಿ.ಸಿ. ನಾಗೇಶ್ ಅವರು ಇವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಮಧುಗಿರಿ ಇಇ ಸೇರಿದಂತೆ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು, ನೀವುಗಳು ಈ ಜಿಲ್ಲೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಜೆಸಿ ಮಾಧುಸ್ವಾಮಿ

ಸಚಿವ ಜೆಸಿ ಮಾಧುಸ್ವಾಮಿ

  • Share this:
ತುಮಕೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರ ಅಸಮರ್ಪಕ ಉತ್ತರದಿಂದ ಕೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಯನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ತಮ್ಮ ಸೂಚನೆಯನ್ನು ನಿರ್ಲಕ್ಷಿಸಿ ಕರ್ತವ್ಯ ಲೋಪ ಎಸಗಿದ ಗುಬ್ಬಿ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಂಗಸ್ವಾಮಿ ವಿರುದ್ಧ ಸಚಿವ ಮಾಧುಸ್ವಾಮಿ ಕೆಂಡಾಮಂಡಲರಾದರು.

ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಜ. 4 ರಂದು ನಾನು ಸೂಚನೆ ನೀಡಿದ್ದೆ, ಆದರೂ ಏಕೆ ನೀನು ಗುತ್ತಿಗೆದಾರನ ಕರೆಸಿ ಕೆಲಸ ಒಪ್ಪಿಸಲಿಲ್ಲ. ಜಾಡಿಸಿ ಒದ್ದರೆ ಎಲ್ಲಿಗೋಗ್ತಿಯಾ ಗೊತ್ತಾ, ರಾಸ್ಕಲ್, ಕತ್ತೆ ಕಾಯೋಕೆ ಬಂದಿದ್ದೀಯಾ ಇಲ್ಲಿಗೆ ಎಂದು ಗರಂ ಆದರು. ಇಂತಹ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡ್ರಿ ಎಂದು ಸಭೆಯಲ್ಲಿದ್ದ ಜಿ.ಪಂ. ಸಿಇಓಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕೆಲಸ-ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಬಹುತೇಕ ಎಲ್ಲಾ ಇಲಾಖೆಗಳ ಬಹಳಷ್ಟು ಅನುದಾನ ಖರ್ಚೇ ಆಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅವರು ಕೆಲವು ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಸಭೆಯಿಂದ ಹೊರಗೆ ಕಳುಹಿಸಿದ ಪ್ರಸಂಗವೂ ನಡೆಯಿತು.

ನೀತಿ ಸಂಹಿತೆಯಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ. ಆದರೂ, ಎಸ್‌ಇಪಿ, ಟಿಎಸ್‌ಪಿ, ಲಿಂಕ್ ಡಾಕ್ಯುಮೆಂಟ್ ಅನುದಾನ ಖರ್ಚಾಗಿಲ್ಲ ಎಂದು ಕಿಡಿಕಾರಿದರು. ತುಮಕೂರು ತಾಲೂಕಿನಲ್ಲಿ 55 ಕಾಮಗಾರಿ ಎಸ್ಟಿಮೆಂಟ್ ಆಗಿದೆ. ಅದರಲ್ಲಿ 4 ವರ್ಕ್ ಆರ್ಡರ್ ಅಗಿದೆ ಎಂದು ಜಿಲ್ಲಾ ಪಂಚಾಯತ್ ವಿಭಾಗದ ಇಇ ಹರೀಶ್ ಬಾಬು ಸಭೆಗೆ ತಿಳಿಸಿದರು. ತುಮಕೂರು ಉಪವಿಭಾಗದಲ್ಲಿ 296 ಕೋಟಿ ರೂ. ಖರ್ಚು ಮಾಡುವ ಬದಲು ಕೇವಲ 86 ಲಕ್ಷ ರೂ. ಖರ್ಚು ಮಾಡಲಾಗಿದೆ. ಉಳಿದ 228‌ ಕೋಟಿ ಖರ್ಚು ಮಾಡಿಲ್ಲ. ಇದು ಸರಿಯಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ  ಹಿನ್ನಡೆಯಾಗುತ್ತಿದೆ. ಮಾಧ್ಯಮದಲ್ಲಿ ನಮ್ಮ ಮಾನ ಹರಾಜು ಹಾಕುತ್ತಿದ್ದಾರೆ  ಎಂದು ಮಾಧುಸ್ವಾಮಿ ಅಧಿಕಾರಿಗಳು ವಿರುದ್ಧ ಗುಡುಗಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಮಾಧುಸ್ವಾಮಿ ಅವರು, ಇರುವ ಹಾಗಿದ್ದರೆ ಇರೀ, ಇಲ್ಲಾ ಜಾಗ ಖಾಲಿ ಮಾಡಿ. ಈಡಿಯಟ್.. ರಾಸ್ಕಲ್ ಎಂದು ಅಧಿಕಾರಿಗಳನ್ನು ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ವ್ಯವಸ್ಥೆ  ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳಿಗೆ, ಎಂಜಿನಿಯರ್‌ಗಳಿಗೆ ಕೆರೆಗಳ ಹೆಸರೆ ಗೊತ್ತಿಲ್ಲ. ಇಡೀ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕಾಮಗಾರಿಯೂ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿನ ಬಹುತೇಕ ಇಲಾಖೆಗಳ ಕಾಮಗಾರಿಗಳು ಆರಂಭವೇ ಆಗಿಲ್ಲ. ಸಿಇಒ ಮಾತಿಗೆ ಅಧಿಕಾರಿಗಳು ಬೆಲೆಯನ್ನೇ ಕೊಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಕೆಲಸ ಮಾಡಕಾಗಲ್ಲ ಅಂದ ಮೇಲೆ ಏಕೆ ಇರಬೇಕು. ಮನುಷ್ಯತ್ವ ಬೇಕು, ನಿಮ್ಮಿಂದ ಜಿಲ್ಲೆಯ ಜೀವವನ್ನೇಕೆ ತಿನ್ನುತ್ತಿದ್ದೀರಾ ಎಂದು ಜಿಲ್ಲಾ ಪಂಚಾಯತ್ ವಿಭಾಗದ ಇಇ ಹರೀಶ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಇದನ್ನು ಓದಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಆಯ್ಕೆ ಅಧಿಕೃತ; ಜ.20ರಂದು ಪ್ರಮಾಣವಚನ

ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಯಾವುದೇ ಕಾಮಗಾರಿ‌ ಮಾಡದೆ ಜಿಲ್ಲೆಯನ್ನೇ ಮುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಜಿಲ್ಲೆಗೆ ಹಿಡಿದಿರುವ ಗ್ರಹಣ ಯಾವಾಗ ಮುಗಿಯುತ್ತದೆ. ನೀವು ಯಾವಾಗ ಕೆಲಸ ಮುಗಿಸುತ್ತೀರಾ, ಒಂದು ವೇಳೆ ಕೆಲಸ‌ ಮಾಡದಿದ್ದರೆ ಪರ್ಮನೆಂಟ್ ರಜೆ ಕೊಡಿಸುತ್ತೇನೆ ಎಂದು ಹರೀಶ್ ಅವರಿಗೆ ಎಚ್ಚರಿಕೆ ನೀಡಿದರು. ನಂತರ ಲೋಕೋಪಯೋಗಿ ಇಲಾಖೆಯ ಇಇ ಇಂಜಿನಿಯರ್ ಸಂಜೀವ್ ರಾಜ್ ಅವರಿಗೆ ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ನೀಡುವ ಸಂದರ್ಭದಲ್ಲಿ ತಿಪಟೂರಿನ ಶಾಸಕ ಬಿ.ಸಿ. ನಾಗೇಶ್ ಅವರು ಇವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಮಧುಗಿರಿ ಇಇ ಸೇರಿದಂತೆ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು, ನೀವುಗಳು ಈ ಜಿಲ್ಲೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜು, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರುಗಳಾದ ಬಿ.ಸಿ. ನಾಗೇಶ್, ಮಸಾಲೆ ಜಯರಾಮ್, ಡಾ. ರಂಗನಾಥ್, ಡಾ. ರಾಜೇಶ್‌ಗೌಡ, ಚಿದಾನಂದಗೌಡ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಸಿಇಓ ಶುಭಕಲ್ಯಾಣ್ ಸೇರಿದಂತೆ ವಿವಿಧ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published by:HR Ramesh
First published: