ಜೈಲಿನಲ್ಲಿದ್ದು ಬಂದ ಡಿಕೆಶಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ; ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತ್ರತ್ವದಲ್ಲಿ ಸರ್ಕಾರ ಸುಭದ್ರವಾಗಿ, ಒಳ್ಳೆಯ ಕೆಲಸ ಮಾಡುತ್ತಿದೆ. ಸರ್ಕಾರದ ಯಶಸ್ಸು ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

ಸಚಿವ ಜಗದೀಶ್ ಶೆಟ್ಟರ್

  • Share this:
ಹುಬ್ಬಳ್ಳಿ(ಆಗಸ್ಟ್​. 23): ಜೈಲಿನಲ್ಲಿದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್​ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರ ಮೇಲಿನ ಯಾವುದೇ ಕೇಸ್‌ಗಳು ಮುಗಿದಿಲ್ಲ‌. ಅವರದ್ದೇ ಶಾಸಕರ ಮನೆ ಮೇಲೆ ದಾಳಿ ಆಗಿದೆ. ಕಾಂಗ್ರೆಸ್‌ನ ಯಾವುದೇ ನಾಯಕರು ಘಟನೆಯನ್ನು ಖಂಡಿಸಿಲ್ಲ. ತುಷ್ಟೀಕರಣ ರಾಜಕೀಯದಿಂದ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಮೊದಲು ಬೆಂಗಳೂರು ಗಲಭೆ ಘಟನೆಯನ್ನು ಖಂಡಿಸುವ ಕೆಲಸ ಮಾಡಲಿ. ಗೂಂಡಾಗಳ ಬೆನ್ನಿಗೆ ನಿಂತು‌ ಪೊಲೀಸ್ ಆಯುಕ್ತರಿಗೆ ಬೆದರಿಕೆ ಹಾಕಿದ್ದಾರೆ.‌ ಕನಕಪುರದ ಗೂಂಡಾಗಿರಿ ಅಲ್ಲಿಗೇ ಮುಗಿದಿದೆ, ಬೆಂಗಳೂರಲ್ಲಿ ನಡೆಯುವುದಿಲ್ಲ ಎಂದು ಡಿ ಕೆ ಶಿವಕುಮಾರ್ ವಿರುದ್ದ ಸಚಿವ ಜಗದೀಶ್ ಶೆಟ್ಟರ್​ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತ್ರತ್ವದಲ್ಲಿ ಸರ್ಕಾರ ಸುಭದ್ರವಾಗಿ, ಒಳ್ಳೆಯ ಕೆಲಸ ಮಾಡುತ್ತಿದೆ. ಸರ್ಕಾರದ ಯಶಸ್ಸು ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ‌ಪೊಲೀಸ್ ಆಯುಕ್ತರಿಗೆ ಬೆದರಿಕೆ ಕೊಟ್ಟು ಗೂಂಡಾಗಳನ್ನು ಬೆಂಬಲಿಸುತ್ತಿದ್ದಾರೆ. ‌ಗಲಭೆಕೋರರಿಗೆ ಶಾಸಕ ಜಮೀರ್ ಅಹಮದ್ ​ ಪರಿಹಾರ ಧನ ನೀಡಿದ್ದಾರೆ. ಜಮೀರ್ ಅಹಮದ್ ಅವರ ನಡೆಯ ಬಗ್ಗೆ ಕಾಂಗ್ರೆಸ್ ನಿಲುವೇನು ಎಂದು ತಿಳಿಸಲಿ ಎಂದವರು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ‌

ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ ರಾಷ್ಟ್ರಿಯ ನಾಯಕರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಈಗ ಅವರೆಲ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು ಎಂದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಕಿದ್ದಾರೆ.

ಇದನ್ನೂ ಓದಿ : ಚುನಾವಣೆ ದೂರವಿದೆ ಎಂಬ ತಾತ್ಸಾರ ಬೇಡ, ಪಕ್ಷ ಸಂಘಟನೆಗೆ ಒತ್ತು ನೀಡಿ; ವಿವಿಧ ಮೋರ್ಚಾ ಅಧ್ಯಕ್ಷರಿಗೆ ಬಿ.ಎಲ್.ಸಂತೋಷ್ ಸೂಚನೆ

ಬಿಜೆಪಿ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ.‌ ಕಾಂಗ್ರೆಸ್‌ನವರು ಓಟ್‌ ಬ್ಯಾಂಕ್‌ಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ದಕ್ಷ ಪೊಲೀಸ್ ಆಧಿಕಾರಿಗೆ ನೋಡಿಕೊಳ್ಳುತ್ತೇನೆ ಅಂತಾ ಬೆದರಿಕೆ ಹಾಕಿದ್ದಾರೆ.ಕಾಂಗ್ರೆಸ್ ನಡೆ ಅತ್ಯಂತ ದುರ್ದೈವದ ಸಂಗತಿ ಎಂದರು.

ಕಾಂಗ್ರೆಸ್ ಗೂಂಡಾವರ್ತನೆ, ಕುತಂತ್ರದಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ. ಡಿ.ಕೆ. ಶಿವಕುಮಾರ್  ಅವರೇ ನಿಮ್ಮ ಮನೆಯಲ್ಲಿ ಕೋಟ್ಯಾಂತರ ಹಣ ಸಿಕ್ಕು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದೀರಿ. ಜಾಮೀನಿನ‌ ಮೇಲೆ ಹೊರಗಿದ್ದೀರಿ ಎನ್ನುವುದನ್ನು ಮೊಲದು ನೆನಪಿಟ್ಟುಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
Published by:G Hareeshkumar
First published: