ಅವರನ್ನು ಕರ್ಕೊಂಡು ಬಾ ,ದುಡ್ಡು ಕೊಡು.. ಇದೇ ಆಗೋಯ್ತು: Operation Kamalaದ ಬಗ್ಗೆ ಬಾಯ್ಬಿಟ್ಟ ಸಚಿವ Eshwarappa

Minister Eshwarappa on Operation Kamala: ರಾಜ್ಯದಲ್ಲಿ ನಾಲ್ಕು ಬಾರಿ Yediyurappa ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ನಮ್ಮ ಗ್ರಹಚಾರ ಸರಿ ಇಲ್ಲ, ನಾಲ್ಕೂ ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ. ನಾಲ್ಕ ಸಲನೂ ಅವನ್ಯಾವನೋ ಕರಕೊಂಡು ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಬಿಟ್ಟರು.

ಸಚಿವ ಈಶ್ವರಪ್ಪ

ಸಚಿವ ಈಶ್ವರಪ್ಪ

  • Share this:
ಕೊಪ್ಪಳ: ಅವನ್ಯಾವನೋ ಕರ್ಕೊಂಡು ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎನ್ನುವ ಮೂಲಕ ಆಪರೇಷನ್​ ಕಮಲಕ್ಕೆ (Operation Kamala) ಹಣ (Money) ಕೊಡಬೇಕಾಯಿತು ಎಂಬುವುದನ್ನು ಸಚಿವ ಕೆ.ಎಸ್​.ಈಶ್ವರಪ್ಪ (Minister K. S. Eshwarappa) ಒಪ್ಪಿಕೊಂಡಿದ್ದಾರೆ. ಪರಿಷತ್​ ಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ತೊಡಗಿರುವ ಸಚಿವ ಈಶ್ವರಪ್ಪ ಮಾತಿನ ಮಧ್ಯೆ ಆಪರೇಷನ್​ ಕಮಲದ ಬಗ್ಗೆ ಸ್ಫೋಟಕ ಹೇಳಿಕೆಯನ್ನು ಕೊಟ್ಟಿರುವುದು ಈಗ ಎಲ್ಲರ ಹುಬ್ಬೇರಿಸಿದೆ. ಅವರ ಮಾತಿನ ವರಸೆ ಹೀಗಿತ್ತು. ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ನಮ್ಮ ಗ್ರಹಚಾರ ಸರಿ ಇಲ್ಲ, ನಾಲ್ಕೂ ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ. 4 ಸಾಲನೂ ನಮ್ಮ ಗ್ರಹಚಾರ ಹಾಗೆ ಇತ್ತು. ನಾಲ್ಕ ಬಾರಿನೂ ಅವನ್ಯಾವನೋ ಕರಕೊಂಡು ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಬಿಟ್ಟರು.

ಆಪರೇಷನ್​ ಕಮಲಕ್ಕೆ ದುಡ್ಡು ಕೊಟ್ಟ ಬಗ್ಗೆ ಬೇಸರ

ಅಲ್ಲಿಗೆ ಆಪರೇಷನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ‌ ಈಶ್ವರಪ್ಪ ಬಹಿರಂಗವಾಗಿಯೇ ಒಪ್ಪಿಕೊಂಡಂತಾಯಿತು. ಭಾಷಣದಲ್ಲಿ ಪರೋಕ್ಷವಾಗಿ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಆದ್ರೆ ಈ ಬಾರಿ ಹಾಗಾಗಲ್ಲ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಅನೇಕ ಕಡೆ ಓಡಾಡಿದ್ದೇನೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳಿಲ್ಲ, ಬಿಜೆಪಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಪರೇಷನ್​ ಕಮಲದ ಬಗ್ಗೆ ಸಚಿವರು ಆಡಿದ ಮಾತು ಈಗ ಎಲ್ಲೆಡೆಯೂ ಚರ್ಚೆಗೆ ಗ್ರಾಸವಾಗಿದೆ.

ಸರಣಿ ಎಡವಟ್ಟು ಹೇಳಿಕೆಗಳು.. ನಂತರ ಯು ಟರ್ನ್​​

ನಿನ್ನೆಯ ಪ್ರಚಾರ ಭಾಷಣದಲ್ಲೂ ಈಶ್ವರಪ್ಪ ಯಡವಟ್ಟು ಮಾಡಿಕೊಂಡಿದ್ದರು. ಅದಕ್ಕೆ ಇಂದು ಸಮರ್ಥನೆ ನೀಡಿದ ಬಳಿಕ, ಮತ್ತೆ ಹೊಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಸಚಿವ ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ (Chief Minister) ಆಗ್ತಾರೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿಕೆಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈಶ್ವರಪ್ಪ ತಮ್ಮ ಹೇಳಿಕೆಯಿಂದ ಯು ಟರ್ನ್​​ (U Turn) ತೆಗೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಚುನಾವಣೆ ಬರೋವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ನಾನು ಬದಲಾಗಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು. ನಿನ್ನೆ  ಬೀಳಗಿ ಪಟ್ಟಣದಲ್ಲಿ ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿ ಸಭೆಯ ಭಾಷಣದ ವೇಳೆ ಈಶ್ವರಪ್ಪ, ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ, ಅವರಿಗೆ ಶಕ್ತಿ ಇದೆ ಎಂದಿದ್ದರು. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ವೇದಿಕೆ ಮೇಲೆಯೇ ನಿರಾಣಿಗೆ ಪ್ರಶ್ನೆ ಮಾಡಿದ್ದರು. ಈಶ್ವರಪ್ಪ ಮಾತಿಗೆ ಸಂಸತ ವ್ಯಕ್ತಪಡಿಸಿದ ನಿರಾಣಿ ಸಕ್ಸಸ್ ಗುರುತು ತೋರಿ ನಕ್ಕಿದ್ದರು.

ಇದನ್ನೂ ಓದಿ: MLC Electionನಿಂದ ಅಂತರ ಕಾಯ್ದುಕೊಂಡ ಅನಂತ್​​ಕುಮಾರ್​​ ಹೆಗಡೆ; BJPಯಲ್ಲಿ ಎಲ್ಲವೂ ಸರಿ ಇಲ್ಲ!?

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಚಾರ ನಡೆಸಿದರು. ಮುಂದೆ ಮುರುಗೇಶ್​ ನಿರಾಣಿ ಸಿಎಂ ಆಗ್ತಾರೆ ಅನ್ನೋ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್​ವೈ, ಈಶ್ವರಪ್ಪ ತಮಾಷೆ ಮಾಡಿದ್ದಾರೆ ಎನ್ನುವ ಮೂಲಕ ತೆರೆ ಎಳೆದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯಿಂದ ಸಚಿವ ಈಶ್ವರಪ್ಪ ಹಿಂದೆ ಸರಿದು, ಹೊಸ ಚರ್ಚೆಗೆ ಅಂತ್ಯ ಹಾಡಲು ಯತ್ನಿಸಿದರು.
Published by:Kavya V
First published: