ಕಾಂಗ್ರೆಸ್​ ನಾಯಕರಿಂದಲೇ ಹಾಡಿ ಹೊಗಳಿಸಿಕೊಂಡಿದ್ದ ಮುನಿರತ್ನ ಈಗ ಹೇಗೆ ಬದಲಾಗ್ತಾರೆ?; ಸಿ.ಟಿ. ರವಿ

ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ತೆರವಾಗಿದ್ದ ಆರ್ ಆರ್ ನಗರ ಕ್ಷೇತ್ರಕ್ಕೆ ಇದೀಗ ಚುನಾವಣೆ ನಿಗದಿಯಾಗಿದೆ. ನವೆಂಬರ್ 3ಕ್ಕೆ ಚುನಾವಣೆ ನಡೆಯಲಿದ್ದು, 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಸಿಟಿ ರವಿ

ಸಿಟಿ ರವಿ

  • Share this:
ಚಿಕ್ಕಮಗಳೂರು (ಅಕ್ಟೋಬರ್​29): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಕೆಲಸಗಾರ, ಇಂದ್ರ, ಚಂದ್ರ, ದೇವೇಂದ್ರ ಎಂದೆಲ್ಲಾ ಬಣ್ಣಿಸಿದ್ದರು. ಆದರೆ, ಈಗ ಪಕ್ಷ ಬಿಟ್ಟ ಕೂಡಲೇ ಅವರು ಬದಲಾಗ್ತಾರಾ? ಎಂದು ಸಚಿವ ಸಿ.ಟಿ.ರವಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ನಿನ್ನೆ ಸಿದ್ದರಾಮಯ್ಯ ಮುನಿರತ್ನ ಕ್ರಿಮಿನಲ್ ಹಿನ್ನೆಲೆಯವರು ಎಂದಿದ್ದಾರೆ. ಎರಡು ಬಾರಿ ಟಿಕೆಟ್ ಕೊಟ್ಟು ಎಂ.ಎಲ್.ಎ ಮಾಡಿದ್ದು ಯಾವ ಪಾರ್ಟಿ ಎಂದು ಮಾಜಿ ಸಿಎಂ ಸಿದ್ದು ವಿರುದ್ಧ ರವಿ ವ್ಯಂಗ್ಯವಾಡಿದ್ದಾರೆ. ಅವರ ಪಕ್ಷದಲ್ಲಿ ಇದ್ದರೆ ಸಂಭಾವಿತ, ಪಾರ್ಟಿ ಬಿಟ್ಟ ಕೂಡಲೇ ಕ್ರಿಮಿನಲ್ಲಾ" ಎಂದು ಪ್ರಶ್ನಿಸಿದ್ದಾರೆ.

"ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ಅವರು ಮುನಿರತ್ನ ಪರ ಮಾಡಿರೋ ಪ್ರಚಾರದ ಹಳೇ ಕ್ಯಾಸೆಟ್‍ಗಳನ್ನ ತೆಗೆದು ನೋಡಿ ನೀವು. ಡಿ.ಕೆ.ಶಿವಕುಮಾರ್ ಬಾಂಬೆಗೆ ಹೋಗಿದ್ರಲ್ಲಾ ಏನುಕ್ಕೆ ಹೋಗಿದ್ರು. ಅವರ ಮನವೋಲಿಸಿ ಕರೆ ತರ್ತೀನಿ ಅಂತ ತಾನೇ ಹೈಡ್ರಾಮ ಮಾಡಿ ಬಾಂಬೆಯಲ್ಲಿ ನಿಂತಿದ್ದು. ಇವರೆಲ್ಲಾ ಸರಿ ಇಲ್ಲಾ ಅನ್ನೋದಾದ್ರೆ ಕರೆತರಲು ಯಾಕೆ ಹೋಗಿದ್ರು.

ಇದನ್ನೂ ಓದಿ : ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ?; ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ

ಎಲ್ಲರೂ ಒಪ್ಪಿದ್ದಾರೆ ನಿಮ್ಮನ್ನೆ ಮಂತ್ರಿ ಮಾಡ್ತೀವಿ ಬನ್ನಿ ಎಂದು ಸಿದ್ದರಾಮಯ್ಯನವರು ಯಾಕೆ ಹೇಳಿದ್ರು. ತಮ್ಮ ಟಿಆರ್​​ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ತೆರವಾಗಿದ್ದ ಆರ್ ಆರ್ ನಗರ ಕ್ಷೇತ್ರಕ್ಕೆ ಇದೀಗ ಚುನಾವಣೆ ನಿಗದಿಯಾಗಿದೆ. ನವೆಂಬರ್ 3ಕ್ಕೆ ಚುನಾವಣೆ ನಡೆಯಲಿದ್ದು, 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್​ನಿಂದ ಗೆದ್ದಿದ್ದ ಮುನಿರತ್ನ ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆಗಿಳಿಸಿದ್ದಾರೆ. ಕಾಂಗ್ರೆಸ್​ನಿಂದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ನಿಂತಿದ್ದಾರೆ. ಜೆಡಿಎಸ್​ನಿಂದ ಸ್ಥಳೀಯ ಕಾರ್ಯಕರ್ತ ವಿ. ಕೃಷ್ಣಮೂರ್ತಿ ಕಣಕ್ಕಿಳಿದಿದ್ದಾರೆ.
Published by:MAshok Kumar
First published: