HOME » NEWS » District » MINISTER CT RAVI TALK AGAINST CONGRESS LEADERS AND SIDDARAMAIAH VCTV MAK

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನವರಿಗೆ ಸುಳ್ಳೇ ಮನೆ ದೇವರು; ಸಚಿವ ಸಿ.ಟಿ. ರವಿ ಲೇವಡಿ

ಮೋದಿ, ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪ ಪ್ರಚಾರ ಮಾಡುತ್ತಿದೆ. ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲೀಂರನ್ನು ಬೀದಿಗೆ ಇಳಿಸಿದ್ದು ಇದೇ ಕಾಂಗ್ರೆಸ್. ಅಲ್ದೆ ಕೇಂದ್ರದ ನೂತನ ಕೃಷಿ ಕಾಯ್ದೆಯ ಬಗ್ಗೆಯೂ ಕಾಂಗ್ರೆಸ್ ಅಪ ಪ್ರಚಾರ ಮಾಡುತ್ತಿದೆ ಎಂದು ಸಚಿವ ಸಿಟಿ ರವಿ ಕಿಡಿಕಾರಿದ್ದಾರೆ.

news18-kannada
Updated:November 30, 2020, 9:10 PM IST
ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನವರಿಗೆ ಸುಳ್ಳೇ ಮನೆ ದೇವರು; ಸಚಿವ ಸಿ.ಟಿ. ರವಿ ಲೇವಡಿ
ಸಚಿವ ಸಿ.ಟಿ. ರವಿ.
  • Share this:
ಚಿಕ್ಕಮಗಳೂರು : ಸತ್ಯವನ್ನು ನಂಬದೇ ಇರುವವರಿಗೆ ಸತ್ಯವೆಲ್ಲಾ ಸುಳ್ಳಾಗಿ ಕಾಣುತ್ತದೆ, ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್ ನವರಿಗೆ ಇಲ್ಲ. ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಮತ್ಯಾರು ಇಲ್ಲ. ಇನ್ನೂ ಸುಳ್ಳೆ ಅವರ ಮನೆ ದೇವರು, ಕಾಂಗ್ರೆಸ್​ ಪಕ್ಷಕ್ಕೆ ಹೋದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಸುಳ್ಳೇ ಮನೆ ದೇವರು  ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಚಿವ ಸಿ.ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು "ಕಾಂಗ್ರೆಸ್ ಗೆ ಸುಳ್ಳೇ ಮನೆ ದೇವರು, ಆ ಕಾಂಗ್ರೆಸ್ ಗೆ ಹೋದ ಸಿದ್ದರಾಮಯ್ಯ ಸಹ ಸುಳ್ಳನ್ನೆ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ಇರುವ ಪಟ್ಟವನ್ನು ಇನ್ಯಾರು ಕಿತ್ತುಕೊಳ್ಳಲು ಆಗುವುದಿಲ್ಲ, ಕಾಂಗ್ರೆಸ್ ಗೆ ಬಂದ ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಪಾಠವನ್ನೇ ಕಲಿಯುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಕುರಿತು ಟೀಕಾಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿರುವ ಸಿ.ಟಿ. ರವಿ, "ಮೋದಿ, ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪ ಪ್ರಚಾರ ಮಾಡುತ್ತಿದೆ. ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲೀಂರನ್ನು ಬೀದಿಗೆ ಇಳಿಸಿದ್ದು ಇದೇ ಕಾಂಗ್ರೆಸ್. ಅಲ್ದೆ ಕೇಂದ್ರದ ನೂತನ ಕೃಷಿ ಕಾಯ್ದೆಯ ಬಗ್ಗೆಯೂ ಕಾಂಗ್ರೆಸ್ ಅಪ ಪ್ರಚಾರ ಮಾಡುತ್ತಿದೆ. ನೂತನ ಕೃಷಿ ಕಾಯ್ದೆ ರೈತರ ಬದುಕನ್ನು ಕಿತ್ತುಕೊಳ್ಳುತ್ತದೆ ಅಂತಾ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ" ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ಕುರಿತು ಮಾತನಾಡಿರುವ ಅವರು, ಕೋವಿಡ್ ಭೀತಿ ಇರುವ ಕಾರಣ ಗ್ರಾಮ ಪಂಚಾಯತಿ ಚುನಾವಣೆಯನ್ನ ಮೈ ಮರಿಯದೇ ಎದುರಿಸಬೇಕು. ಊರಿನ ಸಮಸ್ಯೆ ಬಗೆಹರಿಸುವಂತಹ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಮತದಾರರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದ್ದಾರೆ. ಪಕ್ಷಾತೀತ ಚುನಾವಣೆ ಆದ್ದರಿಂದ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ಪಕ್ಷದ ಚಿಹ್ನೆ ಇರುವುದಿಲ್ಲ. ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ತೊಡಗಿದ್ದು ಈಗಾಗಲೇ ಬಿಜೆಪಿ ಗ್ರಾಮ ಸ್ವರಾಜ್ ಯಾತ್ರೆಯ ಮೂಲಕ ಚುನಾವಣೆ ಸಿದ್ಧತೆ ನಡೆಸಲಾಗುತ್ತಿದ್ದು ಪಕ್ಷದ ಕಾರ್ಯರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರೈತ ವಿರೋಧಿಗಳಿಂದ ಆತಂಕ ಸೃಷ್ಟಿಸುವ ಕೆಲಸ; ಕೇಂದ್ರ ಕೃಷಿ ಮಸೂದೆ ಸಮರ್ಥಿಸಿಕೊಂಡ ಪ್ರಧಾನಿ

ನಟ ರಜನಿಕಾಂತ್ ರಾಜಕೀಯ ಪ್ರವೇಶ ವಿಚಾರ ಪ್ರತಿಕ್ರಿಯಿಸಿದ ಅವರು, "ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋದು ಹತ್ತು ವರ್ಷದಿಂದ ಕೇಳಿ ಬರುತ್ತಿರುವ ಮಾತು. ಅವರು ನಿರ್ಣಯ ಮಾಡದೇ ನಾವು ಪ್ರತಿಕ್ರಿಯೆ ನೀಡೋದು ಸೂಕ್ತವಲ್ಲ. ರಾಜಕೀಯಕ್ಕೆ ಬರುವ ಬಗ್ಗೆ ರಜನಿಕಾಂತ್ ನಿರ್ಣಯ ಮಾಡಲಿ. ನಿರ್ಣಯ ಮಾಡಿದ ಮೇಲೆ ಸನ್ನಿವೇಶ, ಸಂದರ್ಭ ನೋಡಿ ಮುಂದಿನ ತೀರ್ಮಾನ ಅವರು ಕೈಗೊಳ್ಳಲಿ. ನಾವು ಪ್ರತಿಕ್ರಿಯೆ ಕೊಡ್ತೀನಿ ನಾನು ವೈಯಕ್ತಿಕವಾಗಿ ಅವರ ಜೊತೆ ಮಾತಾನಾಡಿಲ್ಲ" ಎಂದಿದ್ದಾರೆ.
ಇನ್ನು ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರವಾಗಿ ಮಾತಾನಾಡಿದ ಅವರು ಡಿ 4 ನೇ ತಾರೀಖು ಕೋರ್ ಕಮಿಟಿ ಸಭೆ ಇದೆ, ಕೆಲವು ಸಂಗತಿಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಬೇಕಾಗಿದೆ, ಆಯ್ಕೆಯ ಮಾನದಂಡ ಹಾಗೂ ಆಯ್ಕೆಯ ಪ್ರಕಿಯೇ ಬಗ್ಗೆ ಪಕ್ಷದ ವೇದಿಕೆ ಯಲ್ಲಿ ಚರ್ಚೆ ಮಾಡ್ತೀವಿ, ಇನ್ನು ವ್ಯಕ್ತಿಗಳನ್ನ ತೃಪ್ತಿಪಡಿಸೋಕೆ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Published by: MAshok Kumar
First published: November 30, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories