ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಕಾಂಗ್ರೆಸ್ ವಿರುದ್ಧ ಸಚಿವ ಸಿ ಟಿ ರವಿ ಕಿಡಿ

ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ವೈಭವಿಕರಿಸಿ ಆಚರಿಸುತ್ತದೆ, ಕಾಂಗ್ರೆಸ್ ಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ, ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಎಂದು ಕಾಂಗ್ರೆಸ್ ಪಕ್ಷಕ್ಕೆ ಸಿ.ಟಿ.ರವಿ ಪ್ರಶ್ನೆ ಮಾಡಿದರು.

news18-kannada
Updated:September 17, 2020, 7:20 PM IST
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಕಾಂಗ್ರೆಸ್ ವಿರುದ್ಧ ಸಚಿವ ಸಿ ಟಿ ರವಿ ಕಿಡಿ
ಸಚಿವ ಸಿ ಟಿ ರವಿ
  • Share this:
ಚಿಕ್ಕಮಗಳೂರು(ಸೆಪ್ಟೆಂಬರ್​. 17): ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕಟಿ ಬದ್ಧವಾಗಿದ್ದು, ಯಾವುದೇ ರೀತಿಯ ಅನುಮಾನ, ಅಳುಕು ಬೇಡ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ದಾಸ್ಯದ ನೆನಪನ್ನ ಅಳಿಸುವುದಕ್ಕೆ ಕಾಂಗ್ರೆಸ್​ನವರು ಹೈದರಾಬಾದ್ ಕರ್ನಾಟಕ ಎಂದೇ ಹೇಳುತ್ತಿದ್ದರು. ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರ ಬಂದಿರಲಿಲ್ಲ. ಹಾಗಾಗಿ ಬಿಜೆಪಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದೆ ಎಂದರು. ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ, ಹಿಂದೂ ದಿವಸ್​​ಗೆ ವಿರೋಧ ಮಾಡುತ್ತಾರೆ. ಇದು ನಾಟಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿಕಾರಿದರು. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ವೈಭವಿಕರಿಸಿ ಆಚರಿಸುತ್ತದೆ, ಕಾಂಗ್ರೆಸ್ ಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ, ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಎಂದು ಕಾಂಗ್ರೆಸ್ ಪಕ್ಷಕ್ಕೆ ಸಿ.ಟಿ.ರವಿ ಪ್ರಶ್ನೆ ಮಾಡಿದರು.

ಹಿಂದಿ ದ್ವೇಷಕ್ಕೆ ಎನ್ನುವುದಾದರೇ ನಮ್ಮ ಬೆಂಬಲವಿಲ್ಲ. ಹಿಂದಿ ಕಾರಣಕ್ಕೆ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಬಂದ್ ಆಗಿಲ್ಲ. ಆದರೆ, ಸಾವಿರ ಉದಾಹರಣೆ ಕೊಡುತ್ತೇನೆ, ಇಂಗ್ಲಿಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ. ಇಂಗ್ಲಿಷ್ ಓಕೆ, ಹಿಂದಿ ದ್ವೇಷಿ ನಿಮ್ಮ ಉದ್ದೇಶವಾ, ಹಿಂದಿಯನ್ನು ವಿರೋಧಿಸುವವರು ಸಂವಿಧಾನ, ಅಂಬೇಡ್ಕರ್​ ಅವರನ್ನು ವಿರೋಧ ಮಾಡುತ್ತಾರೆ. ಅವತ್ತು ಒಪ್ಪಿಕೊಂಡ ಕಾಂಗ್ರೆಸ್ ಇವತ್ತು ಬಣ್ಣ ಬದಲಿಸಿದೆ ಅಂದರೇ ಅದು ಗೋಸುಂಬೆತನ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದರು, ಇದೇ ವೇಳೆ ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ ಎಂದರು.

ಇನ್ನು ಇದೇ ವೇಳೆ ಜಸ್ಟಿಸ್ ನಾಗಮೋಹನ್ ದಾಸ್ ವಿರುದ್ದ ಕಿಡಿಕಾರಿದ ಸಚಿವರು, ಸಾಮಾಜಿಕ ಜಾಲತಾಣಗಳಲ್ಲಿ ಬಂತೆಂದು ಊರಿಗೆ ಬೆಂಕಿಹಾಕುವುದನ್ನ ಸತ್ಯ ಶೋಧನ ಸಮಿತಿ ಒಪ್ಪಿಕೊಳ್ಳುತ್ತಾ, ಇದು ಸತ್ಯಶೋಧನ ಸಮಿತಿಯಲ್ಲ, ಸುಳ್ಳನ್ನ ಸತ್ಯ ಎಂದು ಬಿಂಬಿಸಲು ಹೋರಟ ಷಡ್ಯಂತ್ರದ ಸಮಿತಿ ಎಂದು ಜಸ್ಟಿಸ್ ನಾಗಮೋಹನ್ ದಾಸ್ ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ದೆಹಲಿ‌ ಭೇಟಿ‌ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ; ಸಚಿವ ಜಗದೀಶ್ ಶೆಟ್ಟರ್

ದತ್ತ ಪೀಠಕ್ಕೆ ಅನ್ಯಾಯ ಮಾಡಿದ ಜಸ್ಟಿಸ್ ನಾಗಮೋಹನ್ ದಾಸ್ ಅವರು ದತ್ತ ಪೀಠಕ್ಕೆ ಇಂಜಸ್ಟೀಸ್ ಕೊಟ್ಟವರು, ಇವತ್ತು ದಾಖಲೆ ಹೇಳುತ್ತೆ, ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ ಅಂತಾ, ಆದರು ನ್ಯಾಯಾಧೀಶ ಎಂಬ ಪದಕ್ಕೆ ಕಳಂಕ ಬರುವ ರೀತಿ ವರದಿ ಕೊಟ್ಟವರು ಅವರು, ಪೂರ್ವಾಗ್ರಹ ಪೀಡಿತರಾಗಿ ವರದಿ ತಯಾರಿಸಿಕೊಂಡು ಸಮೀಕ್ಷೆಗೆ ಬಂದವರು ಎಂದು ಜಸ್ಟಿಸ್ ನಾಗಮೋಹನ್ ದಾಸ್ ವಿರುದ್ದ ವಾಗ್ದಾಳಿ ನಡೆಸಿದರು.

ಸಂವಿಧಾನ ಹಾಗೂ ನೆಲದ ಕಾನೂನಿನ ಬಗ್ಗೆ ಗೌರವ ಇಲ್ಲದವರು ಬೆಂಕಿ ಹಾಕುತ್ತಾರೆ.  ನವೀನ್​​ ಎಂಬ ವ್ಯಕ್ತಿ ಹಾಕಿದ ಪೋಸ್ಟರ್​​ನಲ್ಲಿದ್ದ ಕಾಮೆಂಟ್​ ಬಗ್ಗೆ ಸಮಿತಿ ಯಾಕೆ ಸತ್ಯ ಹೇಳಿಲ್ಲ ಎಂದು ಪ್ರಶ್ನೆ ಮಾಡಿದರು.
ಉಳಿದವರು ಹಿಂದು ಧರ್ಮವನ್ನ ಅಪಮಾನಿಸಿದರೆ ಜಸ್ಟಿಸ್ ನಾಗಮೋಹನ್ ದಾಸ್​ ಅವರಿಗೆ ಏನು ಅನಿಸುವುದಿಲ್ಲ. ಅವರು ಜಸ್ಟಿಸ್ ಅಲ್ಲ, ಇಂಜಸ್ಟೀಸ್ ನಾಗಮೋಹನ್ ದಾಸ್. ಕಮ್ಯುನಿಸ್ಟ್ ಅಜೆಂಡಾವನ್ನ ಒಡಕಿನ ಬೀಜವನ್ನ ಬಿತ್ತುವುದಕ್ಕೆ ಕೆಲವರನ್ನ ಮುಂಚೂಣೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆ ಮುಂಚೂಣಿಯಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಕೂಡ ಒಬ್ಬರು ಎಂದರು. ಇನ್ನು ನಾನು ಯಾವ ಧರ್ಮವನ್ನ ಅಪಮಾನಿಸುವುದನ್ನು ಒಪ್ಪುವುದಿಲ್ಲ ಎಂದರು.
Published by: G Hareeshkumar
First published: September 17, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading