ಸಚಿವ ಸಿ.ಟಿ.ರವಿಗೂ ವಕ್ಕರಿಸಿದ ಸೋಂಕು ; ಸಚಿವರೊಂದಿಗೆ ಸುತ್ತಾಡಿದ ನೂರಾರು ಜನರಿಗೆ ಕೊರೋನಾ ಭೀತಿ

ಕಳೆದ ವಾರ ಸಂಡೇ ಲಾಕ್ ಡೌನ್ ಉಲ್ಲಂಘಿಸಿ ಓಡಾಡಿದ ಸಚಿವರೊಂದಿಗೆ ಸುತ್ತಾಡಿದ ನೂರಾರು ಕಾರ್ಯಕರ್ತರು ಪರೀಕ್ಷೆಯನ್ನೇ ಮಾಡಿಸಿಕೊಂಡಿಲ್ಲ, ಇದು ಹಲವರ ಆತಂಕಕ್ಕೆ ಕಾರಣವಾಗಿದೆ.

news18-kannada
Updated:July 12, 2020, 9:53 PM IST
ಸಚಿವ ಸಿ.ಟಿ.ರವಿಗೂ ವಕ್ಕರಿಸಿದ ಸೋಂಕು ; ಸಚಿವರೊಂದಿಗೆ ಸುತ್ತಾಡಿದ ನೂರಾರು ಜನರಿಗೆ ಕೊರೋನಾ ಭೀತಿ
ಸಿ.ಟಿ. ರವಿ
  • Share this:
ಚಿಕ್ಕಮಗಳೂರು(ಜುಲೈ.12): ಕಾಫಿನಾಡಲ್ಲಿ ಕೊರೋನಾ ಜನ ಪ್ರತಿನಿಧಿಗಳನ್ನ ಬಿಟ್ಟುಬಿಡದೇ ಕಾಡುತ್ತಿದೆ. ಒಬ್ಬರಲ್ಲ, ಇಬ್ಬರಲ್ಲ ನೂರಾರು ಜನರಿಗೆ ಟೆನ್ಷನ್ ಕೊಡುತ್ತಿದೆ. ಅದರಲ್ಲೂ ಎಂಎಲ್ಸಿ, ಎಂಎಲ್ಎ ಗಳಿಗೆ ಸುತ್ತಿಕೊಂಡಿದ್ದ ಹೆಮ್ಮಾರಿ ಇದೀಗ ಪ್ರವಾಸೋದ್ಯಮ ಸಚಿವ ಸಿ.ಟಿ ರವಿಗೂ ತಗುಲಿದೆ. ಕಳೆದ ವಾರ ಸಂಡೇ ಲಾಕ್ ಡೌನ್ ಉಲ್ಲಂಘಿಸಿ ಓಡಾಡಿದ ಸಚಿವರೊಂದಿಗೆ ಸುತ್ತಾಡಿದ ನೂರಾರು ಜನರಿಗೂ ಇದೀಗ ಪೀಕಲಾಟ ಶುರುವಾಗಿದೆ.

ಪ್ರವಾಸೋದ್ಯಮ ಸಚಿವರಿಗೆ ಕೊರೋನಾ ಬಂದಿರುವುದು ದೊಡ್ಡ ವಿಚಾರವಲ್ಲ, ಈ ಹೆಮ್ಮಾರಿ ಯಾರಂದ್ರೆ ಯಾರನ್ನೂ ಬಿಡುತ್ತಿಲ್ಲ. ಇವತ್ತು ಅವರನ್ನ ಕಾಡಿರುವ ಸೋಂಕು, ನಾಳೆ ನಮ್ಮನ್ನ ಕಾಡದೇ ಇರದು. ಸಚಿವ ಸಿ.ಟಿ.ರವಿಗೆ ಕೊರೋನಾ ಸೋಂಕು ತಗುಲಿದೆ ಅಂತಾ ವೈದ್ಯಕೀಯ ಸಚಿವ ಸುಧಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಆದರೆ, ಸುಧಾಕರ್ ಮಾಹಿತಿಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ಕೊರೋನಾ ಸೋಂಕು ತಗುಲಿರುವುದನ್ನ ಮೊದಲು ಒಪ್ಪಿಕೊಳ್ಳಲಿಲ್ಲ, ನಾನು ಹೋಂ ಕ್ವಾರಂಟೈನ್ನಲ್ಲಿದ್ದೇನೆ. ನನಗೆ ಯಾವುದೇ ಕೊರೋನಾ ಲಕ್ಷಣಗಳಿಲ್ಲ ಅಂತಾ ಟ್ವೀಟ್ ಮಾಡಿ ಕೊರೋನಾ ಸೋಂಕು ತಗುಲಿದೆ ಎನ್ನುವುದನ್ನು ನಿರಾಕರಿಸುವ ಪ್ರಯತ್ನ ಮಾಡಿದರು. ಆದರೆ ವೈದ್ಯಕೀಯ ಸಚಿವರೇ ಸರ್ಟಿಫಿಕೇಟ್ ನೀಡಿದಮೇಲೆ ಸಚಿವರು ಸುಮ್ಮನಾದರು.

ಇಲ್ಲಿ ಸಚಿವ ಸಿ.ಟಿ ರವಿಗೆ ಕೊರೋನಾ ಬಂದಿದೆ ಎನ್ನುವುದು ಸುದ್ದಿಯಲ್ಲ. ಗೊತ್ತಿದ್ದೂ ಗೊತ್ತಿದ್ದೂ ಮಾಡುವ ಎಡವಟ್ಟು, ಬೇಜವಾಬ್ದಾರಿತನ ಇದೀಗ ಜನರಲ್ಲಿ ದಿಗಿಲು ಹುಟ್ಟಿಸಿದೆ. ಕಳೆದ ವಾರ ಸಚಿವರೇ ಸಂಡೆ ಲಾಕ್ ಡೌನ್ ಅನ್ನ ಉಲ್ಲಂಘಿಸಿ ಜಿಲ್ಲೆಯ ಹಲವೆಡೆ ಪ್ರವಾಸ ಮಾಡಿದರು. ಹೀಗೆ ಪ್ರವಾಸ ಮಾಡುವ ವೇಳೆಯಲ್ಲಿ ಪ್ರತ್ಯಕ್ಷವಾಗಿರುವ, ಪರೋಕ್ಷವಾಗಿ ನೂರಾರು ಜನರನ್ನ ಸೇರಿಸಿದರು. ಸಚಿವರೇ, ಸರ್ಕಾರವೇ ಸಂಡೇ ಲಾಕ್ ಡೌನ್ ಘೋಷಣೆ ಮಾಡಿ, ನೀವೇ ಲಾಕ್ ಡೌನ್ ಉಲ್ಲಂಘನೆ ಮಾಡುವುದು ಸರಿನಾ ಅಂತಾ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ :  ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 71 ಸಾವು, 2,627 ಜನರಿಗೆ ಸೋಂಕು ದೃಢ

ಇದೀಗ ಸಚಿವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಸಚಿವರೇನೋ ಹೋಂ ಐಶೋಲೆಷನ್ ಮಾಡಿಕೊಂಡು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ  ವೈದ್ಯರೂ ಮನೆಗೇ ಹೋಗಿ ಸಚಿವರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ, ಸಚಿವರ ಜೊತೆ ಸಂಪರ್ಕ ಹೊಂದಿದ್ದ ನೂರಾರು ಕಾರ್ಯಕರ್ತರು, ಮುಖಂಡರು, ಜನಸಾಮಾನ್ಯರ ಪಾಡೇನು.? ಸಚಿವರ ಜೊತೆ ಸಂಪರ್ಕದಲ್ಲಿದ್ದ ಹಲವರು ಪರೀಕ್ಷೆಯನ್ನೇ ಮಾಡಿಸಿಕೊಂಡಿಲ್ಲ, ಇದು ಹಲವರ ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ ಮತ್ತೆ ಟ್ವೀಟ್ ಮಾಡಿರುವ ಸಚಿವರು ನನಗೆ ಒಮ್ಮೆ ನೆಗೆಟಿವ್ ಬಂದಿದ್ದು, ಮತ್ತೊಮ್ಮೆ ಪಾಸಿಟಿವ್ ಬಂದಿದೆ, ಸದ್ಯ ಮೂರನೇ ಬಾರಿ ಟೆಸ್ಟ್ ಗೆ ಮುಂದಾಗಿದ್ದು, ಥರ್ಡ್ ಅಂಪೈರ್ ರಿಸಲ್ಟ್ ಬರಬೇಕಷ್ಟೇ ಅಂದಿರುವುದು ಅಚ್ಚರಿಗೆ ಕಾರಣವಾಗಿದೆ.
Published by: G Hareeshkumar
First published: July 12, 2020, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading