• Home
  • »
  • News
  • »
  • district
  • »
  • ರಮೇಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದವರು ಯಾರಂತ ಗೊತ್ತಿಲ್ಲ, ಅವರನ್ನೇ ಕೇಳಿ ಎಂದ ಭೈರತಿ ಬಸವರಾಜ್..!

ರಮೇಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದವರು ಯಾರಂತ ಗೊತ್ತಿಲ್ಲ, ಅವರನ್ನೇ ಕೇಳಿ ಎಂದ ಭೈರತಿ ಬಸವರಾಜ್..!

ಸಚಿವ ಭೈರತಿ ಬಸವರಾಜ್​

ಸಚಿವ ಭೈರತಿ ಬಸವರಾಜ್​

ದುಡುಕಿನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದರು. ಯಾವುದೋ ಉದ್ದೇಶದಿಂದ ಅವರು ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಆದರೆ ಅವರ ಸಹೋದರರು ಮನವೊಲಿಕೆ ಮಾಡಿದ್ದಾರೆ ಎಂದರು.

  • Share this:

ಹುಬ್ಬಳ್ಳಿ (ಜು.01): ರಮೇಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದವರು ಯಾರಂತ ಗೊತ್ತಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದಾರೆಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದವರು ಯಾರಂತ ಗೊತ್ತಿಲ್ಲ. ಅದರ ಬಗ್ಗೆ ಅವರನ್ನೇ ಕೇಳಿ ಎಂದು ಖಾರವಾಗಿ ನುಡಿದರು.


ರಮೇಶ್ ಜಾರಕಿಹೊಳಿ ಬಾಂಬೆ ಟೂರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಭೈರತಿ, ಹಿಂದೆ ಸರ್ಕಾರ ಬದಲಾಯಿಸಿದಂತೆ ಈಗಲೂ ಬದಲಾಯಿಸೋ ಯಾವುದೇ ಲಕ್ಷಣಗಳಿಲ್ಲ. ದುಡುಕಿನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದರು. ಯಾವುದೋ ಉದ್ದೇಶದಿಂದ ಅವರು ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಆದರೆ ಅವರ ಸಹೋದರರು ಮನವೊಲಿಕೆ ಮಾಡಿದ್ದಾರೆ ಎಂದರು.


ಇದನ್ನೂ ಓದಿ:ಹೋಮ್ ಐಸೋಲೇಷನ್ ಸಾವು ತಡೆಗಟ್ಟಲು ಪಾಲಿಕೆ ಮೆಗಾ ಪ್ಲ್ಯಾನ್; ಕೊರೋನಾ ಸೋಂಕಿತರ ಮನೆ ಬಾಗಿಲಿಗೆ ಬಿಬಿಎಂಪಿಯ MTU ಟೀಂ.!!


ರಮೇಶ್ ಜಾರಕಿಹೊಳಿ ಮೇಲೆ ಪ್ರಕರಣವೊಂದಿದೆ. ಆ ಪ್ರಕರಣ ಇತ್ಯರ್ಥ ಆಗುತ್ತಿದ್ದಂತೆಯೇ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುತ್ತೆ. ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ತಾರೆ. ರಮೇಶ್ ಜಾರಕಿಹೊಳಿ ಸದ್ಯ ಸಮಾಧಾನಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಜೊತೆ ನಾವಿದ್ದೇವೆ. ನಮ್ಮ ಅವರ ಸ್ನೇಹಕ್ಕೆ ಧಕ್ಕೆಯಿಲ್ಲ. ಸಣ್ಣ ಪುಟ್ಟ ತೊಂದರೆಗಳು ಆಗಿದೆ. ಅವೆಲ್ಲವೂ ಬಗೆಹರಿಯಲಿದೆ ಎಂದು ಭೈರತಿ ಬಸವರಾಜ ತಿಳಿಸಿದ್ದಾರೆ.


ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಕ್ಕೆ ಭೈರತಿ ಡೆಡ್ ಲೈನ್!


ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಹುಬ್ಬಳ್ಳಿಯಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಹುಬ್ಬಳ್ಳಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರೋ ಕಾಮಗಾರಿಗಳ ವೀಕ್ಷಣೆ ಮಾಡಿದರು. ತೋಳನಕೆರೆ, ಗೋಪನಕೊಪ್ಪ ಮಾರುಕಟ್ಟೆ, ಬೆಂಗೇರಿ ಮಾರುಕಟ್ಟೆ, ಮೀನಿನ ಮಾರುಕಟ್ಟೆ, ಜನತಾ ಬಜಾರ್, ಇಂದಿರಾ ಗ್ಲಾಸ್ ಹೌಸ್ ಗಳಿಗೆ ಭೇಟಿ ನೀಡಿದರು. ರಾಜೀವ ಗಾಂಧಿನಗರ ಸೇರಿದಂತೆ ಹಲವು ಪ್ರದೇಶಗಳ ವೀಕ್ಷಣೆ ಮಾಡಿದರು. ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ಇದನ್ನೂ ಓದಿ:National Doctors Day 2021: ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವುದೇಕೆ?


ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭೈರತಿ ಬಸವರಾಜ್, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿರೋದಾಗಿ ತಿಳಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ. ಆದರೆ ಮತ್ತೆ ಮತ್ತೆ ವಿಳಂಬ ಮಾಡದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ.


ನಾನು 6 ನೆಯ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಬರುತ್ತಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡ ಕಾಮಗಾರಿ ಪೈಕಿ ಶೇ. 25 ರಿಂದ 30 ರಷ್ಟು ಕಾಮಗಾರಿ ಬಾಕಿ ಇದೆ. ಈಗಾಗಲೇ ಅಧಿಕಾರಿಗಳಿಗೆ ಒಂದು ತಿಂಗಳ ಗಡವು ನೀಡಿದ್ದೇನೆ. ಎಲ್ಲೆಲ್ಲಿ ಕೆಲಸ ನಿಧಾನ ಗತಿಯಲ್ಲಿ ಸಾಗುತ್ತಿದೆ ಅಲ್ಲಿ ಹೆಚ್ಚು ಕಾರ್ಮಿಕರ ಬಳಕೆಗೆ ಸೂಚಿಸಿದ್ದೇನೆ. ಪಾಲಿಕೆಯಿಂದ 240 ಕೋಟಿ ರೂ ಪ್ರಸ್ತಾವನೆ ಸಹ ಈಗಾಗಲೇ ಕೊಟ್ಟಿದ್ದಾರೆ. ನಾನು ಇದನ್ನ ಸಿಎಂ ಜೊತೆ ಚರ್ಚೆ ಮಾಡಿ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳು ರಾಜ್ಯದ ಅತ್ಯುತ್ತಮ ನಗರಗಳಾಗಿ ಹೊರಹೊಮ್ಮಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು