HOME » NEWS » District » MINISTER BC PATIL TALK AGAINST H VISHWANATH NCHM MAK

ಯಾರನ್ನು ಯಾರೂ ಲೀಡ್ ಮಾಡಿಲ್ಲ: ಹಳ್ಳಿ ಹಕ್ಕಿ ವಿಶ್ವನಾಥ್​ಗೆ ಸಚಿವ ಬಿ.ಸಿ. ಪಾಟೀಲ್ ಟಾಂಗ್

ವಿಶ್ವನಾಥ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಕಾನೂನು ತೊಡಕಿದೆ.  ಸುಪ್ರೀಂ ಕೋರ್ಟ್ ಆದೇಶ ಕೂಡ ಅವರ ವಿರುದ್ದ ಇದೆ. ಅವರು ಜನರಿಂದ ಆಯ್ಕೆಯಾಗಿಲ್ಲ. ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡವರು ಎಂದು ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

news18-kannada
Updated:January 24, 2021, 11:57 AM IST
ಯಾರನ್ನು ಯಾರೂ ಲೀಡ್ ಮಾಡಿಲ್ಲ: ಹಳ್ಳಿ ಹಕ್ಕಿ ವಿಶ್ವನಾಥ್​ಗೆ ಸಚಿವ ಬಿ.ಸಿ. ಪಾಟೀಲ್ ಟಾಂಗ್
ಬಿ.ಸಿ. ಪಾಟೀಲ್.
  • Share this:
ಚಾಮರಾಜನಗರ (ಜನವರಿ.24); ಯಾರನ್ನೂ ಯಾರೂ ಲೀಡ್ ಮಾಡಿಲ್ಲ, ಯಾರಿಗೆ ಯಾರೂ ಲೀಡರ್ ಆಗಲು ಆಗುವುದಿಲ್ಲ‍ ಅವರಷ್ಟಕ್ಕೆ ಅವರೇ ಲೀಡರ್ ಎಂದು ಎಚ್. ವಿಶ್ವನಾಥ್ ಗೆ  ಕೃಷಿ ಸಚಿವ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.  ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿರುವ ಅವರು ಚಾಮರಾಜನಗರ ತಾಲೂಕು ಕೊತ್ತಲವಾಡಿಯಲ್ಲಿ ಪಾರ್ವತಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬಿ.ಸಿ. ಪಾಟೀಲ್, "ವಿಶ್ವನಾಥ್ ಒಬ್ಬಂಟಿಯಾಗಿಲ್ಲ ಅವರು ಗಟ್ಟಿಯಾಗಿದ್ದಾರೆ, ಅವರ ಜೊತೆ ಎಲ್ಲರೂ ಇದ್ದಾರೆ" ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ಹೆಚ್​. ವಿಶ್ವನಾಥ್​, "ನಾನು ಹದಿನೇಳು ಜನರ ಟೀಂ ಕಟ್ಟಿ ಮುನ್ನಡೆಸಿದ್ದೆ, ಸ್ನೇಹಿತರು ನನ್ನನ್ನು ಒಬ್ಬಂಟಿಯಾಗಿ ಮಾಡಿದ್ದಾರೆ" ಎಂದು ಅಲವತ್ತುಕೊಂಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿ.ಸಿ. ಪಾಟೀಲ್, "ನಾನು ಸಣ್ಣವನು, ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು  ದೊಡ್ಡವನಲ್ಲ ನಾವೆಲ್ಲಾ ವಿಶ್ವನಾಥ್ ಹಿಂದೆ ಇದ್ದೇವೆ ಆಯ್ತಾ?" ಎಂದು  ವ್ಯಂಗವಾಗಿ ನುಡಿದಿದ್ದಾರೆ.

"ವಿಶ್ವನಾಥ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಕಾನೂನು ತೊಡಕಿದೆ.  ಸುಪ್ರೀಂ ಕೋರ್ಟ್ ಆದೇಶ ಕೂಡ ಅವರ ವಿರುದ್ದ ಇದೆ. ಅವರು ಜನರಿಂದ ಆಯ್ಕೆಯಾಗಿಲ್ಲ. ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡವರು. ಉಳಿದ ಎಂಎಲ್ಸಿಗಳು ಜನಪ್ರತಿನಿಧಿಗಳಿಂದ ಆಯ್ಕೆಯಾದವರು ಹಾಗಾಗಿ ಅವರಿಗೆ ಮಂತ್ರಿ ಸ್ಥಾನ ನೀಡಲು ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ವಿಶ್ವನಾಥ್ ನಾಮ ನಿರ್ದೇಶನಗೊಂಡಿರುವುದರಿಂದ ಮಂತ್ರಿ ಸ್ಥಾನ ದೊರೆತಿಲ್ಲ"  ಎಂದು ತಿಳಿಸಿದ್ದಾರೆ.

ಬಾಂಬೆ ಟೀಂ ನ ಕೆಲವರು ನಿನ್ನೆ ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಸೇರಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು  "ಅಲ್ಲಿಗೆ ಯಾರು ಹೋಗಿದ್ದಾರೋ ನನಗೆ ಗೊತ್ತಿಲ್ಲ, ನಾನು ಹೋಗಿಲ್ಲ, ರೆಸಾರ್ಟ್ ರಾಜಕೀಯ ನನಗೆ ಗೊತ್ತಿಲ್ಲ. ನಾನು ನಿನ್ನೆಯಿಂದ  ಚಾಮರಾಜನಗರ ಜಿಲ್ಲೆಯಲ್ಲಿ ದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: Farmers Protest: ದೆಹಲಿ ರೈತ ಹೋರಾಟಕ್ಕೆ ಭಾರೀ ಬೆಂಬಲ; ಜ.26 ರಂದು ಬೆಂಗಳೂರಲ್ಲೂ ನಡೆಯಲಿದೆ ಟ್ರ್ಯಾಕ್ಟರ್​ ಪೆರೇಡ್

ಸಚಿವ ಸಂಪುಟದಲ್ಲಿ ಒಕ್ಕಲಿಗರನ್ನು ಕಡೆಗಣಿಸಿಲ್ಲ ಎಂದು ಸಮರ್ಥಿಸಿಕೊಂಡ ಅವರು "ಎಸ್.ಟಿ. ಸೋಮಶೇಖರ್ ಗೆ ಸಹಕಾರ ಹಾಗೂ ಎಪಿಎಂಸಿ ಖಾತೆ, ಆರ್ ಅಶೋಕ್ ಗೆ ಕಂದಾಯ, ಸುಧಾಕರ್ ಗೆ ಆರೋಗ್ಯ, ಗೋಪಾಲಯ್ಯಗೆ ಅಬಕಾರಿ, ನಾರಾಯಣಗೌಡರಿಗೆ ಯುವಸಬಲೀಕರಣ ಹಾಗು ಕ್ರೀಡೆ,  ಸಿ.ಪಿ.ಯೋಗೀಶ್ವರ್ ಗೆ ಸಣ್ಣನೀರಾವರಿ ಹೀಗೆ ದೊಡ್ಡ ಹಾಗೂ ಪ್ರಮುಖ ಖಾತೆಗಳನ್ನೇ ನೀಡಲಾಗಿದೆ ಅದ್ಹೇಗೆ ಸಣ್ಣಖಾತೆಗಳಾಗುತ್ತವೆ.
Youtube Video
ಒಕ್ಕಲಿಗರನ್ನು ಕಡೆಗಣಿಸಲಾಗಿದೆ ಎಂಬುದನ್ನು  ಬೇರೆಯುವರು ಸೃಷ್ಟಿಸಿದ್ದಾರೆಯೇ ಹೊರತು ಜಾತಿ ಆಧಾರದ ಮೇಲೆ ಖಾತೆ ಹಂಚಿಕೆ ಆಗಿಲ್ಲ. ಜಾತಿ ಮನೋಭಾವನೆ ಇಟ್ಟಕೊಂಡು ಖಾತೆ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Published by: MAshok Kumar
First published: January 24, 2021, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories