ಸಿರಿಧಾನ್ಯದ ಬಿಸಿಯೂಟ ನೀಡುವ ಬಗ್ಗೆ ಬಜೆಟ್‌ನಲ್ಲಿ ಸೇರಿಸಲು ಸಿಎಂಗೆ ಒತ್ತಾಯ ಮಾಡಿದ್ದೇನೆ; ಬಿ.ಸಿ. ಪಾಟೀಲ್

ಕೃಷಿ ಸಚಿವ ಬಿ‌‌.ಸಿ. ಪಾಟೀಲರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಿನ್ನೆಲೆ ನವಲಗುಂದ ತಾಲೂಕಿನ ಹೊಲ ಗದ್ದೆಗಳಲ್ಲಿ ಕೃಷಿ ಸಚಿವ ಸಂಚಾರ ನಡೆಸಿದರು. ರೈತರ ಆಯ್ದ ಜಮೀನುಗಳಿಗೆ ಭೇಟಿ ನೀಡಿದ ಸಚಿವ ಪಾಟೀಲ್ ಖುದ್ದು ಹತ್ತಿ ಕಟಾವ್ ಮಾಡಿದರು.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಧಾರವಾಡ : ಕೃಷಿ ಮಿತ್ರ ನೇಮಕಾತಿಯನ್ನು ಬಜೆಟ್‌ನಲ್ಲಿ ಘೋಷಣೆ ಆಗಲಿದೆ. ಶಾಲಾ‌ ಮಕ್ಕಳಿಗೆ ವಾರದಲ್ಲಿ ಇಂದು ದಿನ ಸಿರಿಧಾನ್ಯದ ಬಿಸಿಯೂಟ ನೀಡುವ ಬಗ್ಗೆ ಈಗಾಗಲೇ ಬಜೆಟ್‌ನಲ್ಲಿ ಸೇರಿಸಲು ಸಿಎಂಗೆ ಒತ್ತಾಯ ಮಾಡಿದ್ದೇನೆ. ಇದರಿಂದ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡಲು ಈ ಕ್ರಮ ಕೈಗೋಳ್ಳಲಾಗುತ್ತಿದೆ. ಅಲ್ಲದೇ ಕೃಷಿ ವಿವಿ ಹಾಸ್ಟೇಲ್ ಸಿರಿಧಾನ್ಯ ಬಳಕೆ ಮಾಡಲು ಈಗಾಗಲೇ ಆದೇಶ ನೀಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ತಿಳಿಸಿದರು. ಕೃಷಿ ಸಚಿವರ ರೈತರೊಂದಿಗಿನ ಒಂದು ದಿನ ಕಾರ್ಯಕ್ರಮ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ, ಶಿರಕೋಳ, ಜಾವೂರ, ಅಳಗವಾಡಿ ಗ್ರಾಮಗಳಲ್ಲಿ ಸಂಚಾರ ಮಾಡಿದರು. ಇದೇ ಸಮಯದಲ್ಲಿ ಮೊರಬ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಯಂತ್ರದ‌ ಮೇಲೆ ಹತ್ತಿದ ಸಚಿವರು ರೋಡ್ ಷೋ‌ ಮೂಲಕ ಆಗಮಿಸಿದರು.

ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಮಾಡುತ್ತಿದ್ದ ಹಿನ್ನೆಲೆ  ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದರು. ಈ ಸಮಯದಲ್ಲಿ ರೈತರೊಂದಿಗೆ ಸಂವಾದ ಮಾಡಿ ಸಮಸ್ಯೆ ಆಲಿಸಿದರು. ಈ ಸಲ ಖರೀದಿ ಕೇಂದ್ರಗಳಿಂದ ರೈತರಿಗೆ ಬೇಗ ಹಣ ಸಂದಾಯ ಮಾಡಲು ಎಲ್ಲ ರೀತಿ ಸಿದ್ಧತೆ ಮಾಡಲಾಗಿದೆ. ರಜಿಸ್ಟರ್ ಜೊತೆಗೆ ಖರೀದಿ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಕೃಷಿ ಸಚಿವ ಬಿ‌‌.ಸಿ. ಪಾಟೀಲರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಿನ್ನೆಲೆ ನವಲಗುಂದ ತಾಲೂಕಿನ ಹೊಲ ಗದ್ದೆಗಳಲ್ಲಿ ಕೃಷಿ ಸಚಿವ ಸಂಚಾರ ನಡೆಸಿದರು. ರೈತರ ಆಯ್ದ ಜಮೀನುಗಳಿಗೆ ಭೇಟಿ ನೀಡಿದ ಸಚಿವ ಪಾಟೀಲ್ ಖುದ್ದು ಹತ್ತಿ ಕಟಾವ್ ಮಾಡಿದರು. ಬಳಿಕ ಕಬ್ಬಿನ ರವದಿ ಸಂಸ್ಕರಣೆ, ಗೋಕೃಪಾಮೃತ ತಯಾರಿ ವೀಕ್ಷಣೆ ಮಾಡಿದರು.

ಈ ಕಾರ್ಯಕ್ರಮಕ್ಕೆ ತೆರಳುವ‌ ಮಾರ್ಗ ಮಧ್ಯದಲ್ಲಿ ಜಾವೂರ ಗ್ರಾಮದಲ್ಲಿನ ಕಾಂಗ್ರೆಸ್‌ನ ಮಾಜಿ ಸಚಿವ ಬಿ‌‌. ಆರ್. ಯಾವಗಲ್ ನಿವಾಸಕ್ಕೆ ಸಚಿವ ಬಿ.ಸಿ. ಪಾಟೀಲ ಭೇಟಿ ಮಾಡಿದರು. ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿರೋ ಯಾವಗಲ್ ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿತ್ತು. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಬಿ.ಆರ್ ಯಾವಗಲ್.

ಯಾವಗಲ್ಲ ಅವರ ಮನೆಗೆ ಭೇಟಿ‌ನೀಡಿದ ವೇಳೆ, ಮಂಡಕ್ಕಿ ಹಾಗೂ ಯಾವಗಲ್ ಅವರ ತೋಟದ ಸೀಬೆ ಹಣ್ಣು, ಚಿಕ್ಕು ತಿಂದರು. ಅವರೊಂದಿಗೆ ನವಲಗುಂದ ಶಾಸಕ ಶಂಕರಪಟೀಲ‌ ಮುನೇಕೊಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸಾಥ್‌ ನೀಡಿದರು.
ನಂತರ ಯಾವಗಲ್ ಅವರ ಮನೆ ಭೇಟಿ ಬಗ್ಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ, ನಾನು ಪೊಲೀಸ್ ಅಧಿಕಾರಿಯಾಗಿದ್ದಾಗಿನ ಯಾವಗಲ್ ಅವರಮದಿಗೆ ಸ್ನೇಹ ಇತ್ತು. 1983 ರಿಂದ ನಮ್ಮದು ಮತ್ತು ಅವರದು ಸ್ನೇಹ ಇದೆ.‌

ಅದಕ್ಕಾಗಿ ನವಲಗುಂದ ತಾಲೂಕಿಗೆ ಬರ್ತೇನಿ ಎಂದು ಅವರಿಗೆ ಹೇಳಿದಾಗ ಅಂದಾಗ ಮನೆಗೆ ಬರಲು ಹೇಳಿದ್ದರು. ಚಹಾ ಕುಡಿಯೋಕೆ ಮಾತ್ರ ಬಂದಿದ್ದೆ ಹೊರತು ಬೇರೆ ಏನೂ ಇಲ್ಲ, ಅಲ್ಲದೇ‌ ಯಾವುದೇ ರಾಜಕೀಯ ಇಲ್ಲ. ಯಾವಗಲ್ ಅವರು ಬಹಳ ಹಿರಿಯರು,‌ಅದಕ್ಕಾಗಿ ಹಿರಿಯರಿಗೆ ಗೌರವ ಕೊಟ್ಟು ಅವರ ಮನೆಗೆ ಬಂದಿದ್ದೆನೆ ಎಂದರು.

ಇದನ್ನೂ ಓದಿ: Crime News: ಪೂಜೆ ಮಾಡೋ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಅಂದರ್

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ಬಗ್ಗೆ ಕೃಷಿ ಸಚಿವ ಬಿ‌.ಸಿ‌. ಪಾಟೀ ಲ‌ಮಾತನಾಡಿ, ಉತ್ತರ ಕರ್ನಾಟಕಕ್ಕೆ ಸರ್ಕಾರದಲ್ಲಿ ಹೆಚ್ಚು ಆದ್ಯತೆ ಕೊಡಬೇಕು.. ಹಳೇ ಮೈಸೂರಿನಲ್ಲಿ ಆದಷ್ಟು ರಸ್ತೆಗಳು ನಮ್ಮಲ್ಲಿ ಆಗಿಲ್ಲ, ಆ ಭಾಗಕ್ಕೆ ಹೋಲಿಸಿದರೆ ನಾವು ಹಿಂದೆ ಉಳಿದಿದ್ದೇವೆ. ನಮ್ಮ ಉತ್ತರ ಕರ್ನಾಟಕಕ್ಕೆ ಸರ್ಕಾರದಲ್ಲಿ ಹೆಚ್ಚಿನ ಅನುದಾನ ಕೊಡಬೇಕು.

ಈಗ ಮಾತ್ರ ಅಲ್ಲ ಯಾವಾಗಲೂ ಉತ್ತರ ಕರ್ನಾಟಕ ಹೀಗೆ ಅನಿಸುತ್ತದೆ. ಉತ್ತರ ಕರ್ನಾಟಕಕ್ಕೆ ಒತ್ತು ಕೊಡಬೇಕು ಅಂತಾ ಹೇಳುತ್ತಲೇ ಬಂದಿದ್ದೇವೆ. ಈ ನಿರ್ಲಕ್ಷ್ಯ ಯಾಕೆ ಅಂತಾ ಹಿಂದಿನವರನ್ನೇ ಕೇಳಬೇಕು. ನಾವು ಈಗ ರಾಜಕೀಯಕ್ಕೆ ಬಂದವರು‌ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ವ್ಯಂಗ್ಯ ಮಾಡಿದರು.
Published by:MAshok Kumar
First published: