'ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಅಲ್ಲ': ಸಿಡಿ ಪ್ರಕರಣದ ಬಗ್ಗೆ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದೇನು? 

ತನಿಖೆಯಲ್ಲಿ ರಮೇಶ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅವರನ್ನು ಬಂಧನ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಹಾವೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಏನಲ್ಲ. ಈ ಹಿಂದೆ ಮಾಜಿ ಸಚಿವ ಹೆಚ್.ವೈ. ಮೇಟಿಯವರ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟಾಗ್ಲೂ ಎಫ್ಐಆರ್ ಆಗಿರ್ಲಿಲ್ಲ.ಆದ್ರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ನಮ್ಮ ಸರಕಾರ ಎಸ್ಐಟಿ ತನಿಖೆಗೆ ಸೂಚನೆ ಕೊಟ್ಟಿದೆ. ಆಮೇಲೆ ಸಂತ್ರಸ್ತೆ ಬಂದ್ಮೇಲೆ ಪ್ರಕರಣ ಕೂಡ ದಾಖಲಿಸಿದ್ದಾರೆ‌. ಅವಶ್ಯಕತೆ ಕಂಡುಬಂದ್ರೆ, ತನಿಖೆಯಲ್ಲಿ ರಮೇಶ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅವರನ್ನು ಬಂಧನ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 28 ದಿನಗಳ ಕಾಲ ನಾಪತ್ತೆಯಾಗಿದ್ದ ಯುವತಿ ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ.

ಕಳೆದ ನಾಲ್ಕು ದಿನಗಳಿಂದ ಯುವತಿಯನ್ನ ವಿಚಾರಣೆಗೆ ಒಳಪಡಿಸಿದ ಎಸ್​ಐಟಿ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಯುವತಿಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಶುಕ್ರವಾರ ವಿಚಾರಣೆಗೆ ಹಾಜರಾಗಬೇಕಿದ್ದ ರಮೇಶ್ ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದಾರೆ. ಇತ್ತ ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ಎಸ್​ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: Farmers Protest: ಹರಿಯಾಣ ಸಿಎಂ ವಿರುದ್ಧ ಪ್ರತಿಭಟಿಸಿದ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಚ್​

ಇನ್ನು ಸಿಡಿ ವಿಚಾರದಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ನಿನ್ನೆ ಸಿಡಿ ಯುವತಿಯ ವಿಚಾರಣೆ ವೇಳೆ ಹಲವು ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ಕಾಂಗ್ರೆಸ್ ನ ಮಾಜಿ ಸಚಿವ ಡಿ. ಸುಧಾಕರ್​ ಹೆಸರು ತಳುಕು ಹಾಕಿಕೊಂಡಿದೆ. ಯುವತಿಯ ಜೊತೆಗೆ ಮಾಜಿ ಸಚಿವ ಡಿ. ಸುಧಾಕರ ಫೋನ್ ಸಂಪರ್ಕ ಹೊಂದಿದ್ದು ಹಣದ ವ್ಯವಹಾರಗಳು ನಡೆದಿದೆ ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿದ ಸುಧಾಕರ್ "ಇದಕ್ಕೂ ನನಗೂ ಸಂಬಂಧ ಇಲ್ಲ. ಯುವತಿಗೆ ಹಣ ನೀಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತ ಎಸ್ ಐ ಟಿ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸುಧಾಕರಗೆ ನೋಟಿಸ್ ನೀಡಿದ್ದಾರೆ. ಇನ್ನು ಮುಂದಿನ ತನಿಖೆ ವೇಳೆ ಏನಲ್ಲ ಸತ್ಯಾಂಶ ಹೊರಬರುತ್ತೋ ಸಿಡಿ ಪ್ರಕರಣದಲ್ಲಿ ಯಾರ ಯಾರ ಹೆಸರು ತಳುಕು ಹಾಕಿಕೊಳ್ಳುತ್ತೋ, ಪ್ರಕರಣ ಯಾರಿಗೆ ಉರುಳಾಗುತ್ತೋ ಎನ್ನೋ ಕುತೂಹಲ ಮೂಡಿಸಿದೆ.
Published by:MAshok Kumar
First published: