ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಕಾಂಗ್ರೆಸ್ ಮುಂದಾಗಿದೆ ; ಸಚಿವ ಬಿ. ಸಿ. ಪಾಟೀಲ್

ಈಗಾಗಲೇ ಸರಕಾರದ ಐವರು ಸಚಿವರು ಸಮಗ್ರ ಲೆಕ್ಕ ನೀಡಿದರೂ, ಇನ್ನೂ ಲೆಕ್ಕ ಲೆಕ್ಕ ಅಂತ ಕೇಳುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ, ಬಿಜೆಪಿ ಮತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

news18-kannada
Updated:July 27, 2020, 3:40 PM IST
ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಕಾಂಗ್ರೆಸ್ ಮುಂದಾಗಿದೆ ; ಸಚಿವ ಬಿ. ಸಿ. ಪಾಟೀಲ್
ಸಚಿವ ಬಿ ಸಿ ಪಾಟೀಲ್​​
  • Share this:
ಕೊಪ್ಪಳ(ಜುಲೈ.27): ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಕೆಲಸ ಇಲ್ಲ. ವಿನಾಕಾರಣ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿನ ಅವ್ಯವಹಾರದ ಬಗ್ಗೆ ಕಾಂಗ್ರೆಸ್ ನಾಯಕರ ದೂರಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸರಕಾರದ ಐವರು ಸಚಿವರು ಸಮಗ್ರ ಲೆಕ್ಕ ನೀಡಿದರೂ, ಇನ್ನೂ ಲೆಕ್ಕ ಲೆಕ್ಕ ಅಂತ ಕೇಳುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ, ಬಿಜೆಪಿ ಮತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅದು ಎಂದೂ ಆಗದ ಕೆಲಸ ಎಂದರು.

ಜುಲೈ ‌26ಕ್ಕೆ ಬಿಜೆಪಿ ಒಂದು ವರ್ಷದ ಆಡಳಿತ ಪೂರೈಸಿದೆ. ಈ ಒಂದು ವರ್ಷದಲ್ಲಿ ಎದುರಾದ ಸಂಕಷ್ಟ ಹಿಂದೆಂದೂ ಬಂದಿರಲಿಕ್ಕಿಲ್ಲ. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಬರ ತಾಂಡವವಾಡುತ್ತಿತ್ತು. ಅಧಿಕಾರ ವಹಿಸಿಕೊಂಡ ಕೆಲ ದಿನದಲ್ಲೇ ಅತಿವೃಷ್ಠಿ ಉಂಟಾಯಿತು. ಸಿಎಂ ಒಬ್ಬರೇ ಮುಂದೆ ನಿಂತು ನೆರೆ ಹಾವಳಿ ಸಮಸ್ಯೆಯನ್ನು ಎದುರಿಸಿದರು. ಕೋವಿಡ್ 19 ಸಂದರ್ಭದಲ್ಲೂ ಸಿಎಂ ಸಮಪರ್ಕವಾಗಿ ಕೆಲಸ ಮಾಡಿದ್ದಾರೆ. ಸಿಎಂ ಮುಳ್ಳಿನ ಹಾಸಿಗೆಯನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಿದರು. ಸಿಎಂ ಸಮರ್ಥ ನಾಯಕತ್ವದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಕೋವಿಡ್ 19 ಜಗತ್ತಿಗೆ‌ ಹೊಸದು. ಆರೋಗ್ಯ ಉಪಕರಣದ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಸಮತೋಲನ ಉಂಟಾಗಿದೆ. ಈ ಕಾರಣಕ್ಕೆ ಒಂದಷ್ಟು ಹಣ ಹೆಚ್ಚು ನೀಡಿ ಖರೀದಿ ಮಾಡಲಾಗಿದೆ. ಶೀಘ್ರವೇ ಲೆಕ್ಕ ಕುರಿತು ಬ್ಲ್ಯಾಕ್ ಆ್ಯಂಡ್ ವೈಟ್‌ನಲ್ಲಿ ಕೊಡಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ : ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ; ಭಾರತೀಯ ಷೇರುಪೇಟೆಯಲ್ಲಿ ಗೂಳಿ ನಾಗಾಲೋಟದ ಮುನ್ಸೂಚನೆ

ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶ ನೀಡಲ್ಲ. ನನ್ನ ಹೆಸರಿನಲ್ಲಿ ಯಾರೇ, ಯಾವುದೇ ಅಕ್ರಮ‌ ಚಟುವಟಿಕೆ ನಡೆಸಿದರೂ ಸಹಿಸಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮರಳನ್ನ ನಿಯಮಬದ್ಧವಾಗಿ ತೆಗೆದುಕೊಂಡರೆ ಸಮಸ್ಯೆ ಇಲ್ಲ. ಅಕ್ರಮವಾಗಿ ಮರಳು ಸಾಗಣೆ ಮಾಡಿದರೆ ನಿಶ್ಚಿತವಾಗಿ ಕ್ರಮ ಎಂದರು.
ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲವಾಗಿದ್ದು, ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಪೊಲೀಸ್ ಇಲಾಖೆಯ ಆಂತರಿಕ ವಿಚಾರ. ಈ ಬಗ್ಗೆ ಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.
Published by: G Hareeshkumar
First published: July 27, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading