• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Coronavirus: ಪಕ್ಕದ ಮನೆಗೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳೋದು ನಿಲ್ಲಿಸಿ: ಕಾಂಗ್ರೆಸ್​​ಗೆ ಸಚಿವ ಶ್ರೀರಾಮುಲು ಟಾಂಟ್

Coronavirus: ಪಕ್ಕದ ಮನೆಗೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳೋದು ನಿಲ್ಲಿಸಿ: ಕಾಂಗ್ರೆಸ್​​ಗೆ ಸಚಿವ ಶ್ರೀರಾಮುಲು ಟಾಂಟ್

ಬಿ ಶ್ರೀರಾಮುಲು

ಬಿ ಶ್ರೀರಾಮುಲು

ಕೊರೋನಾದಿಂದ ಸಂಕಷ್ಟದಲ್ಲಿರುವಂತದ್ದು  ನೋವಿನ ಸಂಗತಿ. ಹೀಗಿರುವಾಗ ರಾಜಕಾರಣ ಮಾಡುವುದು ಬೇಡ, ಕಾಂಗ್ರೇಸ್ನವರು ಪಕ್ಕದ ಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಮನೆಗೆ ಬೆಂಕಿ ಬಿದ್ದರೂ ಆರಿಸುವ ಕೆಲಸ ಮಾಡಬೇಕೇ ವಿನಃ ಪಕ್ಕದ ಮನೆಗೆ ಬಿದ್ದ ಬೆಂಕಿಯಿಂದ ಚಳಿ ಕಾಯಿಸಿಕೊಳ್ಳುವ ಕೆಲಸ ಆಗಬಾರದು.

ಮುಂದೆ ಓದಿ ...
  • Share this:

ಚಿತ್ರದುರ್ಗ: ಕಾಂಗ್ರೆಸ್​ನವರು ಪಕ್ಕದ ಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನನಗೆ ಗೊತ್ತಿರೋ ಪ್ರಕಾರ ಕೊರೋನಾ ತಡೆಯೋಕೆ ಲಾಕ್ ಡೌನ್ ಒಂದೇ ಪರಿಹಾರ ಆಗಿದೆ. ರಾಜ್ಯದಲ್ಲಿ ಲಾಕ್ ಡೌನ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ಎಕ್ಸ್ಫರ್ಟ್ಗಳ ಜೊತೆ ಸಭೆ ಮಾಡಿ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಚಿತ್ರದುರ್ಗದಲ್ಲಿ  ಸಚಿವ ಬಿ. ಶ್ರೀರಾಮುಲು‌ ಹೇಳಿದ್ದಾರೆ. ಕೊರೋನಾ ಸೋಂಕಿನ ಸ್ಥಿತಿಗತಿ ಆಸ್ಪತ್ರೆಗಳ ವ್ಯವಸ್ಥೆ ಕುರಿತು ಪರಿಶೀಲಿಸಲು ಜಿಲ್ಲೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಭೆ ನಡಸಿದ ಸಚಿವ ಬಿ. ಶ್ರಿರಾಮುಲು ಮಾಧ್ಯಮಗಳ ಜೊತೆ ಮಾತನಾಡಿ ಕೊರೋನಾದಿಂದ ಸಂಕಷ್ಟದಲ್ಲಿರುವಂತದ್ದು  ನೋವಿನ ಸಂಗತಿ. ಹೀಗಿರುವಾಗ ರಾಜಕಾರಣ ಮಾಡುವುದು ಬೇಡ, ಕಾಂಗ್ರೇಸ್ನವರು ಪಕ್ಕದ ಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಮನೆಗೆ ಬೆಂಕಿ ಬಿದ್ದರೂ ಆರಿಸುವ ಕೆಲಸ ಮಾಡಬೇಕೇ ವಿನಃ ಪಕ್ಕದ ಮನೆಗೆ ಬಿದ್ದ ಬೆಂಕಿಯಿಂದ ಚಳಿ ಕಾಯಿಸಿಕೊಳ್ಳುವ ಕೆಲಸ ಆಗಬಾರದು. ದೇಶ, ರಾಜ್ಯ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರು ಸಲಹೆ ಕೊಡಬೇಕು, ಅದನ್ನ ಬಿಟ್ಟು ಪ್ರತಿಭಟನೆ ಮಾಡುತ್ತಾ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮಾಡುತ್ತಿರುವ ಕಾಂಗ್ರೇಸ್ ನಾಯಕರ ನಡೆ ಸರಿ ಅಲ್ಲ ಎಂದು ವಿರೋಧ ಪಕ್ಷದ ನಾಯಕರ ವಿರುದ್ದ ಕಿಡಿ ಕಾರಿದ್ದಾರೆ.


ಇನ್ನೂ ರಾಜ್ಯದಲ್ಲಿ ಕೊರೋನಾ ಸೋಂಕು ತಡೆಯೋಕೆ ಲಾಕ್ ಡೌನ್ ಮಾಡಿದ್ದರಿಂದ ಈಗ ಕಂಟ್ರೋಲ್ ಗೆ ಬರುತ್ತಿದೆ. ಲಾಕ್ ಡೌನ್ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಯುತ್ತದೆ. ಅದರಲ್ಲಿ ಪರಿಣಿತರ ಅಭಿಪ್ರಾಯ ಪಡೆದು ಲಾಕ್ ಡೌನ್ ಮುಂದುವರೆಸುವುದೋ ಬೇಡವೋ ಅನ್ನೋ ನಿರ್ಧಾರವನ್ನ ಸಿಎಂ ಮಾಡುತ್ತಾರೆ. ನನಗೆ ಗೊತ್ತಿರೋ ಪ್ರಕಾರ ಕೊರೋನಾ ತಡೆಯೋಕೆ ಲಾಕ್ ಡೌನ್ ಒಂದೇ ಪರಿಹಾರ ಆಗಿದೆ. ಈ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಲಾಕ್ ಡೌನ್ ಆಗಿದ್ದರಿಂದ ಸೋಂಕು ಕಡಿಮೆ ಆಗುತ್ತಿದ್ದು, ಸಾವುಗಳು ಕೂಡಾ ಕಡಿಮೆ ಆಗುತ್ತಿವೆ ಅನ್ನೊ ಮಾಹಿತಿ ಇದೆ ಎಂದಿದ್ದಾರೆ.


ಕೊರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯ 50% ಬೆಡ್ಗಳನ್ನ ನಾವು ಪಡೆಯುತ್ತೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ಗಳು ಫುಲ್ ಆದಾಗ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಿಕೊಡುತ್ತೇವೆ. ಆಗ ಜನರು ಹಣ ಪಾವತಿಸುವುದು ಬೇಕಿಲ್ಲ ಎಂದಿದ್ದಾರೆ. ಅಲ್ಲದೇ ಪ್ರಕರಣಗಳು ಇನ್ನೂ ಕಡಿಮೆ ಆಗುತ್ತವೆ, ಸದ್ಯ ಈಗ ಆಕ್ಸಿಜನ್ ಸಲುವಾಗಿ ಒದ್ದಾಡುತ್ತಿದ್ದೇವೆ, ಹಾಗಾಗಿ ವೇದಾಂತ್ ಮೈನ್ಸ್ ನವರು 100 ಆಕ್ಸಿಜನ್  ಬೆಡ್ಗಳ ವ್ಯವಸ್ತೆ ಮಾಡುತ್ತಿದ್ದಾರೆ. ಅದರ ಜೊತೆಗೆ ನಾವೂ ಕೂಡಾ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದೇವೆ. ನಮಗೆ ಲಭ್ಯ ಆಗೋ ಆಕ್ಸಿಜನ್ ನೋಡಿಕೊಂಡು ಬೆಡ್ಗಳನ್ನ ಹೆಚ್ಚಿಸುತ್ತಾ ಬರುತ್ತೇವೆ, ಇನ್ನೇನು ಎರಡು ಮೂರು ದಿನಗಳಲ್ಲಿ ಈ ಸಮಸ್ಯೆ ತಿಳಿಯಾಗುತ್ತದೆ ಎಂದಿದ್ದಾರೆ.

Published by:Soumya KN
First published: