Drugs Case| ಡ್ರಗ್ಸ್​ ಪ್ರಕರಣದ ಆರೋಪಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ; ಸಚಿವ ಅರಗ ಜ್ಞಾನೇಂದ್ರ ಕಿಡಿ

ಡ್ರಗ್ಸ್ ಸೇವನೆ ವಿಷಯದಲ್ಲಿ ನಟಿಯರ ರಕ್ತದ ಮಾದರಿಯನ್ನು ಸ್ಯಾಂಪಲ್ ಪಾಸಿಟಿವ್ ಬಂದಿದ್ದು. ವರದಿಯನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಆರೋಪಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಸಂಜನಾ ಗಲ್ರಾನಿ-ರಾಗಿಣಿ ದ್ವಿವೇದಿ.

ಸಂಜನಾ ಗಲ್ರಾನಿ-ರಾಗಿಣಿ ದ್ವಿವೇದಿ.

 • Share this:
  ಶಿವಮೊಗ್ಗ (ಆಗಸ್ಟ್​ 24); ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದ (Sandalwood Drugs Case) ಪ್ರಮುಖ ಆರೋಪಿಯರಾದ ನಟಿ ಸಂಜನಾ ಗಲ್ರಾಣಿ (Sanjana Gulrani) ಮತ್ತು ರಾಗಿಣಿ ದ್ವಿವೇದಿ (Ragini Dvivedi) ಅವರ ಕೂದಲ ಸ್ಯಾಂಪಲ್​ನ ಫೋರೆನ್ಸಿಕ್ ಪರೀಕ್ಷೆಯ ವರದಿ ಬರೋಬ್ಬರಿ ಒಂದು ವರ್ಷದ ಬಳಿಕ ಬಂದಿದೆ. ರಾಗಿಣಿ, ಸಂಜನಾ, ಆಳ್ವ ಮೊದಲಾದ ಹಲವು ಆರೋಪಿಗಳಿಗೆ ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಎಫ್​ಎಸ್​ಎಲ್ (IFSL) ವರದಿ ಪ್ರಕಾರ ಈ ಆರೋಪಿಗಳು ಡ್ರಗ್ಸ್ (Drugs) ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಈ ವರದಿ ಬಹಳ ಮುಖ್ಯ ಸಾಕ್ಷ್ಯವಾಗಲಿದೆ. ಸಿಸಿಬಿ ಮುಖ್ಯಸ್ಥ ಸಾಂದೀಪ್ ಪಾಟೀಲ್ (Sandeep Patil) ಅವರು ಈ ವರದಿಯನ್ನು ಸ್ವಾಗತಿಸಿದ್ದು, ಆರೋಪಿಗಳು ಡ್ರಗ್ಸ್ ಸೇವಿಸಿರುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ (araga gnanendra) ಸಹ ಹೇಳಿಕೆ ನೀಡಿದ್ದು, "ಡ್ರಗ್ಸ್ ಸೇವನೆ ವಿಷಯದಲ್ಲಿ ನಟಿಯರ ರಕ್ತದ ಮಾದರಿಯನ್ನು ಸ್ಯಾಂಪಲ್ ಪಾಸಿಟಿವ್ ಬಂದಿದ್ದು. ವರದಿಯನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಆರೋಪಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

  ಈ ಡ್ರಗ್ಸ್​ ಮಾಫಿಯಾದಲ್ಲಿ ಪೊಲೀಸರ ಕೈವಾಡವೂ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಮಾತನಾಡಿರುವ ಆರಗ ಜ್ಞಾನೇಂದ್ರ, "ರಾಜ್ಯದ ಎಫ್ಎಸ್ಎಲ್ ಪ್ರಯೋಗಾಲಯವನ್ನು ಮೇಲ್ದರ್ಜೇಗೇರಿಸುವ ಕೆಲಸ ನಡೆದಿದೆ. ಮಾದಕ ದ್ರವ್ಯ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸರೇ ಈ ವಿಷಯದಲ್ಲಿ ಶಾಮೀಲಾಗಿದ್ದರೆ ಅವರ ವಿರುದ್ಧವೇ ಕ್ರಮ‌ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.

  ಗಣೇಶೋತ್ಸವ ಆಚರಣೆಯ ಬಗ್ಗೆಯೂ ಮಾತನಾಡಿರುವ ಅವರು, "ಗಣೇಶೋತ್ಸವ ಆಚರಣೆ ಕುರಿತಂತೆ ಸಿಎಂ ಈಗಾಗಲೇ ಸೂಚನೆ ನೀಡಿದ್ದು, ಕೊರೋನಾ ನಿಯಮ ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಆಫ್ಘಾನಿಸ್ತಾನದಿಂದ 9 ಜನ ಬಂದಿದ್ದಾರೆ. ಉಳಿದವರೂ ಬರಲಿದ್ದಾರೆ. ನಮ್ಮ ಅಧಿಕಾರಿ ಉಮೇಶ್ ಕುಮಾರ್ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಗುಪ್ತಚರ ವಿಭಾಗವನ್ನು ಬಲಪಡಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸುತ್ತೇನೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Accident| ಯೋಧನ ಮೃತದೇಹವನ್ನು ಹಸ್ತಾಂತರಿಸಿ ಹಿಂದಿರುಗುತ್ತಿದ್ದಾಗ ಅಪಘಾತ; ಆಂಧ್ರಪ್ರದೇಶದ 4 ಪೊಲೀಸರು ಮೃತ

  ಏನಿದು ಡ್ರಗ್ಸ್​ ಮಾಫಿಯಾ?

  ಒಂದು ವರ್ಷದ ಹಿಂದೆ ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಣಿ, ಸಂಜನಾ ಗಲ್ರಾಣಿ ಸೇರಿದಂತೆ ಹಲವು ಜನರನ್ನ ಬಂಧಿಸಿದ್ದರು. ಮಾಮೂಲಿಯ ರಕ್ತ ಮತ್ತು ಮೂತ್ರ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿರಲಿಲ್ಲ. ನಂತರ 13 ಜನರ ಹೇರ್ ಸ್ಯಾಂಪಲ್​ಗಳನ್ನ ಹೈದರಾಬಾದ್​ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಇದು ಆಗಿದ್ದು 2020, ಸೆಪ್ಟೆಂಬರ್ ತಿಂಗಳಲ್ಲಿ. ಡ್ರಗ್ಸ್ ಸೇವನೆ ಪತ್ತೆಗೆ ಹೇರ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು. ಆದರೆ, ಒಂದು ವರ್ಷದ ಬಳಿಕ ವರದಿ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ಸುಳ್ಳಲ್ಲ.

  ಇದನ್ನೂ ಓದಿ: Sweater Scam: ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ; ಮಾನನಷ್ಟ ಮೊಕದ್ಧಮೆ ಹೂಡುತ್ತೇನೆ ಎಂದ ನಟ ಕೋಮಲ್​​

  ಒಂದು ವರ್ಷ ವಿಳಂಬ ದೊಡ್ಡ ವಿಚಾರವಲ್ಲ: ಆದರೆ, ಒಂದು ವರ್ಷದ ಬಳಿಕ ಎಫ್​ಎಸ್​ಎಲ್ ವರದಿ ಬಂದಿರುವುದು ಅಚ್ಚರಿಯೂ ಅಲ್ಲ ಎನ್ನುತ್ತಾರೆ ಕೆಲ ಪೊಲೀಸ್ ಅಧಿಕಾರಿಗಳು. ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ, ದೇಶದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುವುದರಿಂದ ತುಂಬಾ ಓವರ್ ಲೋಡ್ ಇದೆ. ಹೀಗಾಗಿ, ಪರೀಕ್ಷೆ ವರದಿ ವಿಳಂಬವಾಗಿ ಬರುವುದು ಸಹಜ. ಕೆಲವೊಮ್ಮೆ ನಾವು ಐದಾರು ವರ್ಷಗಳವರೆಗೆ ಕಾದಿದ್ದು ಉಂಟು ಎಂದು ಅಭಿಪ್ರಾಯಪಟ್ಟಿದ್ಧಾರೆ.

  ಇದೇ ವೇಳೆ, ಹೇರ್ ಸ್ಯಾಂಪಲ್​ನ ಎಫ್​ಎಸ್​ಎಲ್ ವರದಿ ಒಂದು ವರ್ಷ ವಿಳಂಬವಾಗಿ ಬಂದಿರುವುದು ಆರೋಪಿಗಳು ಬಚಾವಾಗಲು ಅವಕಾಶ ಕೊಡಬಹುದು ಎಂದು ಮಾಲಗತ್ತಿ ಹೇಳುತ್ತಾರೆ. ವಿಧಿವಿಜ್ಞಾನ ತಜ್ಞ ದಿನೇಶ್ ಕೂಡ ಇದನ್ನೇ ಪುನರುಚ್ಚರಿಸುತ್ತಾರೆ. ಕೂದಲ ಸ್ಯಾಂಪಲ್​ನ ಪರೀಕ್ಷೆಗೆ ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಅಗತ್ಯ ಇಲ್ಲ. ಇಷ್ಟು ವಿಳಂಬ ಯಾಕಾಯಿತು ಎಂಬುದು ಗೊತ್ತಿಲ್ಲ. ಇದಕ್ಕೆ ತನಿಖಾಧಿಕಾರಿಗಳು ಉತ್ತರ ನೀಡಬೇಕು ಎಂದು ದಿನೇಶ್ ತಿಳಿಸಿದ್ದಾರೆ.
  Published by:MAshok Kumar
  First published: