ಸುಮಲತಾ v/s ಹೆಚ್​ಡಿಕೆ ಗಣಿ ವಾರ್: ಗಣಿಗಾರಿಕೆ ಬಂದ್ ಮಾಡುವುದಾಗಿ ಮಾಲೀಕರ ಎಚ್ಚರಿಕೆ

ಮಂಡ್ಯದಲ್ಲಿ ನಿಲ್ಲದ ಗಣಿ ಸ್ಪೋಟ… ಸಂಸದೆ ಸುಮಲತಾ ವಿರುದ್ದ ಮತ್ತೆ ಗುಡುಗಿದ ಶಾಸಕ ರವೀಂದ್ರ ಶ್ರೀಕಂಠಯ್ಯ…. ಅಕ್ರಮ ಇದ್ದರೆ ಕ್ರಮ ಕೈಗೊಳ್ಳಿ , ಇಲ್ಲವಾದ್ರೆ ಗಣಿಗಾರಿಕೆ ಬಂದ್ ಮಾಡುತ್ತೇವೆ ಎಂದ ಮಾಲಿಕರು….

ಮಂಡ್ಯ ನಗರ

ಮಂಡ್ಯ ನಗರ

 • Share this:
  ಮಂಡ್ಯ: ಜಿಲ್ಲೆಯ ಗಣಿಗಾರಿಕೆ ಸದ್ದು ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ರಾಕ್ ಲೈನ್ ವೆಂಕಟೇಶ್ ಹಾಗೂ ಸಂಸದೆ ಸುಮಲತಾ ಬಗ್ಗೆ ಜೆಡಿಎಸ್ ವರಿಷ್ಠರು ಸೈಲೆಂಟ್ ಆದರೂ, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತ್ರ ಸುಮ್ಮನಾಗುತ್ತಿಲ್ಲ. ಸುಮಲತಾ ಹಾಗೂ ರಾಕ್ ಲೈನ್ ವಿರುದ್ದ ಮತ್ತೆ ಗುಡುಗಿರುವ ರವೀಂದ್ರ ಶ್ರೀಕಂಠಯ್ಯ, ನಿಮ್ಮ ಆಟ ಇನ್ಮುಂದೆ ಜಿಲ್ಲೆಯಲ್ಲಿ ನಡೆಯೋದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಮಧ್ಯೆ ಮಂಡ್ಯದಲ್ಲಿ ಸಭೆ ನಡೆಸಿದ ಗಣಿ ಮಾಲಿಕರು, ಅಕ್ರಮ ಇದ್ದರೆ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಾವೇ ಗಣಿ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

  ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ಸದ್ದು ಮಾಡುತ್ತಿದೆಯೋ ಇಲ್ಲವೋ, ಆದ್ರೆ ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ಟಾಕ್ ವಾರ್ ಮಿತಿ ಮೀರಿ ಸದ್ದಾಗುತ್ತಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತು ಜೆಡಿಎಸ್ ನಾಯಕರು ಸುಮ್ಮನಾದರೂ ಪಕ್ಷದ ಶಾಸಕರು ಮಾತ್ರ ಸುಮ್ಮನಾಗುತ್ತಿಲ್ಲ. ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಹಾಗೂ ನಿರ್ಮಾಪಕ ರಾಕ್ ರೈನ್ ವೆಂಕಟೇಶ್ ನೀಡಿದ ಹೇಳಿಕೆಗೆ ತಮ್ಮ ಹುಟ್ಟೂರು ಅರಕೆರೆಯಲ್ಲಿ ಮಾತನಾಡಿದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ಬಾಣಗಳನ್ನ ಬಿಟ್ಟಿದ್ದಾರೆ. ಸುಮಲತಾ ಅತ್ತು ಕರೆದು ಆಡಿದ ಆಟ ಮಂಡ್ಯ ಜಿಲ್ಲೆಯಲ್ಲಿ ಇನ್ಮುಂದೆ ನಡೆಯುವುದಿಲ್ಲ. ಜಿಲ್ಲೆಯ ಜನರಿಗೆ ಎಲ್ಲವೂ ಅರ್ಥವಾಗಿದೆ. ಕೆ ಆರ್ ಎಸ್ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿರುವುದರಿಂದ ಸುಮಲತಾ ಅವರು ಕೆ ಆರ್ ಎಸ್ ಗೆ ಬಂದು ಜಿಲ್ಲೆ ಜನರ ಕ್ಷಮೆ ಕೇಳಬೇಕು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹ ಮಾಡಿದ್ಧಾರೆ.

  ತಮ್ಮನ್ನು ವಜ್ರಮುನಿಗೆ ಹೋಲಿಸಿ ಟೀಕಿಸಿದ ರಾಕ್​ಲೈನ್​ಗೆ ರವೀಂದ್ರ ಟಾಂಟ್... ವಜ್ರಮುನಿ ಒಕ್ಕಲಿಗ ಎಂಬ ಜಾತಿ ಪ್ಲೇಕಾರ್ಡ್ ಬಳಕೆ...

  ತಮ್ಮನ್ನು ಖಳನಾಯಕ ವಜ್ರಮುನಿಗೆ ಹೋಲಿಸಿ ಟೀಕಿಸಿದ ನಿರ್ಮಾಪಕ ರಾಕ್ ರೈನ್ ವೆಂಕಟೇಶ್ ಅವರಿಗೆ ತಿರುಗೇಟು ನೀಡಿದ ರವೀಂದ್ರ ಶ್ರೀಕಂಠಯ್ಯ, ವಜ್ರಮುನಿ ನಟ ಭಯಂಕರ, ಅತ್ಯುತ್ತಮ ನಟ. ಜೊತೆಗೆ ಒಕ್ಕಲಿಗರು ಎಂದು ಜಾತಿ ಕಾರ್ಡ್ ಬಳಿಸಿದ್ಧಾರೆ.

  ಇದನ್ನೂ ಓದಿ: Vistadome: ಬೆಂಗಳೂರು - ಮಂಗಳೂರು ನಡುವೆ ಐಶಾರಾಮಿ ರೈಲು ಪ್ರಯಾಣ ಇಂದಿನಿಂದ ಶುರು, ವಿಸ್ಟಾಡೋಮ್ ಒಳಗೆ ಏನಿದೆ ?

  ಮಂಡ್ಯದಲ್ಲಿ ಗಣಿಮಾಲಿಕರ ಸಭೆ, ಅಕ್ರಮ ಇದ್ದರೆ ಕ್ರಮ ಕೈಗೊಳ್ಳಿ... ಗಣಿಗಾರಿಕೆ ಬಗ್ಗೆ ಏಕೆ ಅಪಪ್ರಚಾರ ಮಾಡ್ತೀರಿ: ಸಂಸದೆಗೆ ಗಣಿಮಾಲಿಕರ ಒತ್ತಾಯ...

  ಈ ನಡುವೆ ಮಂಡ್ಯದಲ್ಲಿ ಗಣಿ ಮಾಲಿಕರು ಸಭೆ ನಡೆಸಿದ್ದು, ಅಕ್ರಮ ಇದ್ದರೆ ಕ್ರಮ ಕೈಗೊಳ್ಳಿ ಅದನ್ನು ಬಿಟ್ಟು ಅಕ್ರಮ ಅಕ್ರಮ ಎಂದು ಹೇಳಿ ನಮ್ಮ ವೃತ್ತಿ ಬಗ್ಗೆ ಏಕೆ ಅಪ ಪ್ರಚಾರ ಮಾಡುತ್ತಿದ್ದೀರಿ ಎಂದು ಸಂಸದೆ ಸುಮಲತಾರನ್ನು ಪ್ರಶ್ನಿಸಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆದು ಏಳು ದಿನದ ಒಳಗೆ ನಮ್ಮ ಸಮಸ್ಯೆ ಬಗೆ ಹರಿಸದಿದ್ದರೆ ತಾವೇ ಗಣಿಗಾರಿಕೆ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಮಂಡ್ಯದ ಕಲ್ಲುಗಣಿಗಾರಿಕೆ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

  ಒಟ್ಟಾರೆ, ಕೆ ಆರ್ ಎಸ್ ಸೇಫ್ ಎಂದು ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟರೂ, ಈ ರಾಜಕಾರಣಿಗಳ ಗಣಿ ಸದ್ದು ಮಾತ್ರ ದಿನೇ ದಿನೇ ಸ್ಪೋಟಿಸುತ್ತಲೇ ಇದೆ. ಈ ದೊಂಬರಾಟದಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸಂಕಷ್ಟ, ಮೈಷುಗರ್ ಕಾರ್ಖಾನೆ ಕಷ್ಟ ಕಣ್ಮರೆಯಾದಂತಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಸುನೀಲ್ ಗೌಡ
  Published by:Vijayasarthy SN
  First published: