• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Rape - ಊಟದ ನೆಪದಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ; ಸಿಸಿಟಿವಿಯಿಂದ ಸಿಕ್ಕಿಬಿದ್ದ ಆರೋಪಿ

Rape - ಊಟದ ನೆಪದಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ; ಸಿಸಿಟಿವಿಯಿಂದ ಸಿಕ್ಕಿಬಿದ್ದ ಆರೋಪಿ

ಹಾವೇರಿಯ ಅತ್ಯಾಚಾರ ಆರೋಪಿ

ಹಾವೇರಿಯ ಅತ್ಯಾಚಾರ ಆರೋಪಿ

ಊಟ ಕೊಡುವಾಗ ತನ್ನನ್ನು ನೋಡಿ ನಗುತ್ತಿದ್ದ ಬುದ್ಧಿಮಾಂದ್ಯೆಯ ಮೇಲೆ ಆಸೆ ಆಯಿತು. ಅದಕ್ಕೆ ಅತ್ಯಾಚಾರ ಮಾಡಿದೆ ಎಂದು ಆರೋಪಿ ಹೇಳಿದ್ದಾರೆ. ಡಿ. 7ರಂದು ಹಾವೇರಿಯಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

  • Share this:

ಹಾವೇರಿ: ಇನ್ನೂ ಸರಿಯಾಗಿ ಮೀಸೆ ಕೂಡ ಚಿಗುರದ ಯುವಕನೊಬ್ಬ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಧ್ಯ ರಾತ್ರಿಯಲ್ಲಿ ಊಟ ಕೊಡುವ ನೆಪದಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಘಟನೆ ನಡೆದ 48 ಗಂಟೆಯೊಳಗೆ ಹಾವೇರಿ ಪೋಲಿಸರು ಕಾಮುಕ ಯುವಕನ ಹೆಡೆಮುರಿ ಕಟ್ಟಿದ್ದಾರೆ.


ಆರೋಪಿ ಹೆಸರು ತಸ್ಮೀಮ್ ಸೆರವಾಡ. ವಯಸ್ಸು 23 ವರ್ಷ. ಹಾವೇರಿ ನಗರದ ಎಪಿಎಂಸಿ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಈ ತಸ್ಮೀಮ್ ಡಿ.7 ರ ಮಧ್ಯರಾತ್ರಿ ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ರಾತ್ರಿ ವೇಳೆ ಹೆಣ್ಮಗಳು ಕಿರುಚುತ್ತಿದ್ದ ಶಬ್ದ ಕೇಳಿಬಂದದ್ದು ತಿಳಿದು ಕಟ್ಟಡ ಮಾಲೀಕ ಸಿಸಿಟಿವಿ ದೃಶ್ಯ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮುಸುಕು ಹಾಕಿಕೊಂಡಿರುವ ಈತ 40 ರಿಂದ 45 ವಯಸ್ಸಿನ ಬುದ್ಧಿಮಾಂಧ್ಯ ಮಹಿಳೆಯನ್ನು ಬಲವಂತವಾಗಿ ರೇಪ್ ಮಾಡಿರುವುದು ಗೊತ್ತಾಗುತ್ತದೆ.


ಆರೋಪಿಯನ್ನು ಪತ್ತೆಹಚ್ಚಲು ಡಿವೈಎಸ್ಪಿ ವಿಜಯಕುಮಾರ್ ಮತ್ತು ಸಿಪಿಐ ಮಂಜಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗುತ್ತದೆ. ಸಿಸಿಟಿವಿಯಲ್ಲಿನ ಈ ದೃಶ್ಯ ಮತ್ತು ಯುವಕನ ಚಹರೆ ಆಧರಿಸಿ ಪೋಲಿಸರು ಕಾರ್ಯಾಚರಣೆ ಮಾಡಿದಾಗ ಕಾಮಾಂಧ ಅರೆಸ್ಟ್ ಆಗಿದ್ದಾನೆ. ಈ ಆರೋಪಿ ಆಟೋ ಓಡಿಸುತ್ತಿದ್ದು ಹಾವೇರಿ ಬಳಿಯ ಯತ್ತಿನಹಳ್ಳಿಯ ನಿವಾಸಿ ಎನ್ನಲಾಗಿದೆ. ನಾನೇ ರೆಪ್ ಮಾಡಿದ್ದು ಎಂದು ಈತ ಒಪ್ಪಿಕೊಂಡಿದ್ದಾನೆ. ಹೀಗಾಗಿ ಇವನನ್ನು ಅರೆಸ್ಟ್ ಮಾಡಿದ್ದೇವೆಂದು ಎಸ್​ಪಿ ಹೇಳಿದ್ದಾರೆ.


ಇದನ್ನೂ ಓದಿ: ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿನಲ್ಲಿ ಮುಳುಗಡೆಯಾದ ಗ್ರಾಮಸ್ಥರಿಂದ ಗ್ರಾ.ಪಂ ಚುನಾವಣಾ ಬಹಿಷ್ಕಾರ


ನಾನು ಊಟ ಕೊಟ್ಟಾಗ ಅವಳು ನನ್ನ ನೋಡಿ ನಗುತ್ತಾ ಇದ್ದಳು. ಆಗ ನನಗೆ ಅವಳ ಮೇಲೆ ಆಸೆ ಆಯಿತು. ಅದಕ್ಕೆ ಹೀಗೆ ಮಾಡಿದೆ ಎಂದು ಪೋಲಿಸರ ಮುಂದೆ ಹೇಳಿದ್ದಾನೆ.


ಕಾಮಕ್ಕೆ ಕಣ್ಣಿಲ್ಲ ಅನ್ನೊದರ ಜೊತೆಗೆ ಕರುಣೆಯೂ ಇಲ್ಲ ಅನ್ನೊದು ಈ ಪ್ರಕರಣ ನೋಡಿದಾಗ ತಿಳಿಯುತ್ತದೆ. ಒಟ್ಟಿನಲ್ಲಿ ಕ್ಷಣಿಕ ಸುಖಕ್ಕಾಗಿ ಮಾನಗೇಡಿ ಕೆಲಸ ಮಾಡಿ ಈ ಕಾಮುಕ ಯುವಕ ಜೈಲು ಸೇರಿದ್ದಾನೆ.


ವರದಿ: ಸಂಕನಗೌಡ ಪಾಟೀಲ

First published: