ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಮಾನಸಿಕ ಅಸ್ವಸ್ಥನ ಹುಚ್ಚಾಟ; ಕೊರೋನಾ ಸೋಂಕಿನ ಭಯದಲ್ಲಿ ಕಂಗೆಟ್ಟ ಜನ

ಸ್ಮಶಾನದಲ್ಲಿ ಯಾರೋ ಬಿಸಾಡಿ ಹೋಗಿದ್ದ ಪಿಪಿಇ ಕಿಟ್, ಫೇಸ್ ಶೀಲ್ಡ್ ಮತ್ತು ಮಾಸ್ಕನ್ನು ಧರಿಸಿದ ಮಾನಸಿಕ ಅಸ್ವಸ್ಥ ವಿಜಯಪುರದ ವಿವಿಧ ಬಡಾವಣೆಗಳಲ್ಲಿ ಓಡಾಟ ನಡೆಸಿ ಜನರಿಗೆ ಆತಂಕ ಸೃಷ್ಟಿಸಿದ್ದಾನೆ.

news18-kannada
Updated:July 12, 2020, 3:50 PM IST
ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಮಾನಸಿಕ ಅಸ್ವಸ್ಥನ ಹುಚ್ಚಾಟ; ಕೊರೋನಾ ಸೋಂಕಿನ ಭಯದಲ್ಲಿ ಕಂಗೆಟ್ಟ ಜನ
ವಿಜಯಪುರದಲ್ಲಿ ಮಾನಸಿಕ ಅಸ್ವಸ್ಥನ ರಂಪಾಟ
  • Share this:
ವಿಜಯಪುರ(ಜು. 12): ವಿಜಯಪುರ ನಗರದ ಮನಗೂಳಿ ಅಗಸಿಯಿಂದ ಜಿ. ಪಂ. ಗೆ ಹೋಗುವ ರಸ್ತೆಯಲ್ಲಿ ವಿಚಿತ್ರ ವಿದ್ಯಮಾನವೊಂದು ನಡೆದಿದ್ದು, ಜನ ಬೆಚ್ಚಿ ಬೀಳುವಂತೆ ಮಾಡಿದೆ. ದಿನನಿತ್ಯ ತಮ್ಮ ಬಡಾವಣೆಗಳ ಬಳಿ ಸುತ್ತಾಡುವ ಯುವಕನ ವೇಷಭೂಷಣ ಕಂಡು ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಬಳಿ ಈ ಮಾನಸಿಕ ಅಸ್ವಸ್ಥ ಮೈಮೇಲೆ ಹರಿದಿದ್ದ ಪಿಪಿಇ ಕಿಟ್, ಮುಖದ ಮೇಲೆ ಫೇಸ್‌ ಶೀಲ್ಡ್ ಮಾಸ್ಕ್ ಮತ್ತು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ. ಇದನ್ನು ಕಂಡಿದ್ದೇ ತಡ ಜನ ಈತನಿಂದ ಸಾಕಷ್ಟು ದೂರ ಓಡಿ ಹೋಗಿದ್ದಾರೆ.

ಇಲ್ಲಿನ ಸ್ಮಶಾನದಲ್ಲಿ ಕೊರೋನಾ ಸೋಂಕಿತರನ್ನು ಅಂತ್ಯಕ್ರಿಯೆ ನಡೆಸಿರುವ ಸಾಧ್ಯತೆಯಿದೆ. ಈ ಸಂರ್ಭದಲ್ಲಿ ಬಳಸಲಾದ ಪಿಪಿಇ ಕಿಟ್​ಗಳನ್ನು ಅಂತ್ಯಕ್ರಿಯೆ ನೆರವೇರಿಸಿದವರು ಇಲ್ಲವೇ ಮೃತರ ಸಂಬಂಧಿಕರು ಅಥವಾ ಕೆಲ ಸಮಾಜ ಘಾತುಕರು ತಂದು ಬೀಸಾಡಿರಬಹುದು ಎಂದು ಶಂಕಿಸಲಾಗಿದೆ. ಇವರು ಬೀಸಾಡಿದ್ದ ಪಿಪಿಇ ಕಿಟ್ ಹಾಕಿಕೊಂಡ ಹುಚ್ಚ ಯುವಕ ರುದ್ರಭೂಮಿಯ ಪಕ್ಕದಲ್ಲಿರುವ ಬೆಂಚ್ ಮೇಲೆ ಕುಳಿತಿದ್ದಾನೆ. ಮೈಮೇಲೆ ಹರಿದ ಪಿಪಿಇ ಕಿಟ್ ಧರಿಸಿದ್ದಾನೆ. ನಂತರ ಫೇಸ್ ಶೀಲ್ಡ್ ಮಾಸ್ಕ್ ಅನ್ನು ಮುಖಕ್ಕೆ ಹಾಕಿಕೊಂಡಿದ್ದಾನೆ. ಬಳಿಕ ಮಾಸ್ಕ್ ಹಾಕಿಕೊಂಡು ಅಲ್ಲಿ ಓಡಾಟ ನಡೆಸಿದ್ದಾನೆ.

ಇವತ್ತು ಲಾಕ್​ಡೌನ್ ಇದ್ದುದರಿಂದ ಈ ರಸ್ತೆಯಲ್ಲಿ ವಾಹನ ಮತ್ತು ಜನರ ಸಂಚಾರ ವಿರಳವಾಗಿದೆ. ಆದರೂ, ಈ ಸ್ಮಾಶನದ ಅಕ್ಕಪಕ್ಕದಲ್ಲಿರುವ ನಿವಾಸಿಗಳು ಈ ಯುವಕನ ಹುಚ್ಚಾಟ ಕಂಡು ದಿಗಿಲು ಬಡಿದವಂತಾಗಿದ್ದಾರೆ.

ಇದನ್ನೂ ಓದಿ: Lockdown - ಬೆಂಗಳೂರೊಂದೇ ಅಲ್ಲ, 10-12 ಜಿಲ್ಲೆಗಳಲ್ಲೂ ಲಾಕ್​ಡೌನ್​ಗೆ ಸರ್ಕಾರ ಗಂಭೀರ ಚಿಂತನೆ

ಈ ಸುದ್ದಿ ತಿಳಿದು ಸ್ಮಶಾನದ ಬಳಿ ಬಂದ ಯುವಕರನ್ನೇ ಈ ಹುಚ್ಚ ನಿಂದಿಸಿದ್ದಾನೆ. ಮೊದಲೇ ಕೊರೋನಾ ಭಯದಲ್ಲಿರುವ ಜನ ಈತನ ಬಳಿ ತೆರಳಲೂ ಹೆದರಿದ್ದಾರೆ.  ಬೀಸಾಕಲಾಗಿದ್ದ ಪಿಪಿಇ ಕಿಟ್ ಧರಿಸಿ ಈ ಹುಚ್ಚ ಸುತ್ತಮುತ್ತ ಓಡಾಟ ನಡೆಸಿದ್ದು, ಪಕ್ಕದ ಪುಲಕೇಶಿ ನಗರ, ಕೀರ್ತಿ ನಗರ ಹಾಗೂ ಇತರ ಬಡಾವಣೆಗಳ ಜನರಲ್ಲಿ ಆತಂಕ ಮೂಡಿಸಿದೆ.

ಈ ವ್ಯಕ್ತಿ ಬೇರೆ ಬೇರೆ ಬಡಾವಣೆಗಳಲ್ಲಿ ತಿರುಗಾಡುವುದರಿಂದ ಆತನ ಬಗ್ಗೆ ಮರುಕಪಡುವವರೇ ಹೆಚ್ಚು. ಆದರೆ, ಈತ ಗೊತ್ತಿಲ್ಲದೆ ಮಾಡಿದ ಕಾರ್ಯದಿಂದ ಎಷ್ಟು ಜನರಿಗೆ ಕೊರೋನಾ ಸೋಂಕು ಹರಡುವುದೋ ದೇವರಿಗೆ ಗೊತ್ತು ಎಂಬಂತಾಗಿದೆ.  ಹೀಗೆ ಪಿಪಿಇ ಕಿಟ್ ಎಸೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಈ ರುದ್ರಭೂಮಿಯ ಪಕ್ಕದಲ್ಲಿರುವ ಬಸಲಿಂಗಪ್ಪ ಮಡಿವಾಳರ, ನಾಗೇಶ ಬಿದರಿ ಮುಂತಾದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ದೇಶದಲ್ಲೇ ಮೊದಲ ರೊಬೋಟಿಕ್ ಸ್ವಾಬ್​​ ಟೆಸ್ಟಿಂಗ್​​ ಲ್ಯಾಬ್ ಶುರು ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಮಾಹನಗರ ಪಾಲಿಕೆ ಸಿಬ್ಬಂದಿ ಆ ಪಿಪಿಇ ಕಿಟ್​ಗಳನ್ನು ಸಟ್ಟು ಹಾಕಿದ್ದಾರೆ.  ಅಲ್ಲದೇ, ಸ್ಮಶಾನದ ಒಳಭಾಗದಲ್ಲಿ ಬಿದ್ದಿದ್ದ ಇತರ ಪಿಪಿಇ ಕಿಟ್​ಗಳನ್ನೂ ಸುಟ್ಟು ಹಾಕಿದ್ದಾರೆ.ಜು. 8 ರಂದು ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಾಂತಿನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಮುಳ್ಳಿನ ಕಂಟಿಯಲ್ಲಿ ಇಂಥದ್ದೆ ಬಳಸಿದ ಪಿಪಿಇ ಕಿಟ್​ಗಳು ಪತ್ತೆಯಾಗಿದ್ದವು. ಇದರಿಂದಾಗಿ ಈ ಭಾಗದ ಜನರಲ್ಲಿ ತೀವ್ರ ಆತಂಕ ಎದುರಾಗಿತ್ತು. ಈಗ ಪುಲಕೇಶಿ ನಗರದ ಬಳಿ ಇರುವ ರುದ್ರಭೂಮಿಯ ಹೊರಗಡೆ ಹೀಗೆ ಪಿಪಿಇ ಕಿಟ್ ಎಸೆದಿರುವುದು ಜನರ ಭೀತಿಯನ್ನು ಇನ್ನಷ್ಟು ಹೆಚ್ಚಾಗಿಸಿದೆ.

ವರದಿ: ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ
Published by: Vijayasarthy SN
First published: July 12, 2020, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading