HOME » NEWS » District » MEMBER OF MUNICIPALITY IN MADDUR OF MANDYA AND HER HUSBAND ARE CREMATING THE COVID DEAD SKTV

Covid Death: ಕೋವಿಡ್​ನಿಂದ ಮೃತಪಟ್ಟವರಿಗೆ ಅಂತಿಮ ವಿದಾಯ, ಪುರಸಭೆ ಸದಸ್ಯೆ ಮತ್ತವರ ಪತಿಯಿಂದಲೇ ಅಂತ್ಯಸಂಸ್ಕಾರ !

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮದ್ದೂರಿನ ಪುರಸಭೆ ಸದಸ್ಯೆ ಮತ್ತವರ ಪತಿಯೇ ಟೊಂಕಕಟ್ಟಿ ನಿಂತುಬಿಟ್ಟಿದ್ದಾರೆ. ತಮ್ಮ 10 ತಿಂಗಳ ಮಗುವನ್ನು ಪೋಷಕರ ಮನೆಯಲ್ಲಿರಿಸಿ ಈ ಕೆಲಸ ಮಾಡುತ್ತಿದ್ದಾರೆ ಮಾದರಿ ದಂಪತಿ.

news18-kannada
Updated:June 25, 2021, 11:16 AM IST
Covid Death: ಕೋವಿಡ್​ನಿಂದ ಮೃತಪಟ್ಟವರಿಗೆ ಅಂತಿಮ ವಿದಾಯ, ಪುರಸಭೆ ಸದಸ್ಯೆ ಮತ್ತವರ ಪತಿಯಿಂದಲೇ ಅಂತ್ಯಸಂಸ್ಕಾರ !
ಪ್ರಾತಿನಿಧಿಕ ಚಿತ್ರ
  • Share this:
ಮಂಡ್ಯ: ಕೊರೊನಾ ಅಂದ ಕೂಡ್ಲೆ ಹೆತ್ತ ಮಕ್ಕಳೆ ಅಪ್ಪ ಅಮ್ಮನನ್ನ ದೂರ ಮಾಡಿ ನಾವು ಸೇಫ್ ಅಂತ ಅಂದ್ಕೋಳ್ಳೊ ಮೂರ್ಕರನ್ನ ನೋಡಿದ್ದೀವಿ. ಅದೆಷ್ಟೋ ರಕ್ತ ಸಂಬಂಧಗಳು ಕೊರೊನಾ ಅಂದ ಕೂಡ್ಲೇ ಹತ್ತಿರಕ್ಕೂ ಬಾರದೇ ನಾಪತ್ತೆಯಾದ ಘಟನೆಗಳನ್ನ ಕೂಡ ಕೇಳಿದ್ದೀವಿ. ಆದ್ರೆ ಇಲ್ಲೊಂದು ದಂಪತಿ ಕೊರೊನಾಗೆ ತುತ್ತಾಗಿ ಸಾವನ್ನಪ್ಪಿದ ಇಪ್ಪತೈದಕ್ಕೂ ಹೆಚ್ಚು ಮಂದಿಯ ಅಂತ್ಯ ಸಂಸ್ಕಾರ ಮಾಡೋ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ.  ಹೌದು...! ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಅದೆಷ್ಟೋ ಮಕ್ಕಳನ್ನ ನೋಡಿದ್ದೀವಿ. ಕೊರೊನಾ ಅಂದ ಕೂಡ್ಲೇ ಅದೆಷ್ಟೋ ಸಂಬಂಧಿಕರು ಹತ್ತಿರಕ್ಕೂ ಬಾರದೆ ಕಾಲ್ಕಿತ್ತ ವಿಚಾರಗಳನ್ನ ಕೂಡ ಕೇಳಿದ್ದೀವಿ.‌ ಅಷ್ಟೇ ಏಕೆ ಅತ್ಯಂತ ಅಮಾನವೀಯವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆ ಕೂಡ ಇವೆ. ಹಿಗಾಗಿ ಇಂತಹ ಹಲವು ಘಟನೆಗಳನ್ನು ನೋಡಿದ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಈ ದಂಪತಿ ತಮ್ಮ 10 ತಿಂಗಳ ಮಗುವನ್ನ ತಮ್ಮ ತಂದೆ-ತಾಯಿ ಬಳಿ ಬಿಟ್ಟು ಉಚಿತವಾಗಿ, ಶಾಸ್ತ್ರೋಕ್ತವಾಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ..

ಸಕ್ಕರೆನಾಡು ಮಂಡ್ಯದ ಮದ್ದೂರಿನ ಪುರಸಭೆ ಸದಸ್ಯೆ ಹಾಗೂ ಪತಿಯಿಂದ ಮಾನವೀಯ ಕಾರ್ಯ. ಈ ದಂಪತಿಯ ಹೆಸ್ರು ಪ್ರಿಯಾಂಕ ಮತ್ತು ಅಪ್ಪು‌ಗೌಡ . ಈ ದಂಪತಿ ಇದೀಗ ತಾವೇ ಮುಂದೆ ನಿಂತು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡ್ತಿದ್ದಾರೆ. ಮದ್ದೂರು ತಾಲೂಕಿನಲ್ಲಿ ಯಾವುದೇ ಭಾಗದಲ್ಲಿ ಕೊರೊನಾ ಸಾವಾಗಿದೆ ಅಂತ ಕರೆ ಮಾಡಿದ್ರೆ ಈ ಜೋಡಿ ತಟ್ ಅಂತ ಹಾಜರಾಗಿಬಿಡತ್ತೆ. ತಾಲೂಕಿನಲ್ಲಿ ಇದುವರೆಗೂ ಈಗಾಗಲೇ 25ಕ್ಕೂ ಹೆಚ್ಚು ಶವ ಸಂಸ್ಕಾರವನ್ನ ಮಾಡಿದ್ದಾರೆ. ಅಲ್ಲದೆ ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವುದು. ಸೋಂಕಿನಿಂದ ಬಳಲುತ್ತಿರುವವರಿಗೆ ಧರ್ಯ ತುಂಬುವುದು. ಹೀಗೆ ಹಲವು ಸಮಾಜಮುಖಿ ಕಾರ್ಯವನ್ನ ಈ ದಂಪತಿಗಳು ಮಾಡುತ್ತಿದ್ದಾರೆ.

ಇನ್ನೂ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದು ಪುಣ್ಯದ ಕೆಲಸವಾಗಿದೆ. ಮದ್ದೂರು ತಾಲೂಕಿನಲ್ಲಿ ಯಾರೇ ದೂರವಾಣಿ ಕರೆ ಮಾಡಿದರೂ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ನಾವು ಸಿದ್ಧ. ಅಂತಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ನಾವು ಮಾಡುತ್ತೇವೆ' ಎನ್ನುತ್ತಾರೆ ಪ್ರಿಯಾಂಕರ ಪತಿಯಾಗಿರೋ ಸಮಾಜ ಸೇವಕ ಅಪ್ಪುಗೌಡ.
Youtube Video

ದಂಪತಿಗಳು ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ, ಮೆಚ್ಚುಗೆ: ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹಣ ಸುಲಿಗೆ ಮಾಡುತ್ತಿರುವ ಈ ಸಂದರ್ಭದಲ್ಲಿ ಈ ದಂಪತಿ ಸ್ವಯಂ ಪ್ರೇರಣೆಯಿಂದ ಉಚಿತವಾಗಿ ಕೊರೊನಾದಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಬೇರೆಯವರಿಗೂ ಸಹ ಈ ದಂಪತಿ ಮಾದರಿಯಾಗಿದ್ದಾರೆ ಅಂದ್ರೆ ಅದು ಅತಿಶಯೋಕ್ತಿ ಅಲ್ಲ.

(ವರದಿ: ಸುನೀಲ್ ಗೌಡ, ಮಂಡ್ಯ)
Published by: Soumya KN
First published: June 25, 2021, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories