ವಿಶ್ವ ಪ್ರಸಿದ್ದ ಮೇಲುಕೋಟೆ ವೈರಮುಡಿ ಉತ್ಸವದ ಮೇಲೆ ಕೊರೋನಾ ಕರಿನೆರಳು; ಈ ಬಾರಿ ಕೂಡ ಸರಳ ಆಚರಣೆಗೆ ನಿರ್ಧಾರ

ವೈರಮುಡಿ ಬ್ರಹ್ಮೋತ್ಸವವು ಬೆಳಗ್ಗಿನ ಜಾವ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಈ ಬಾರಿ ರಾತ್ರಿ 12 ಗಂಟೆಯೊಳಗೆ ಮುಗಿಯುವಂತೆ ಕ್ರಮವಹಿಸಲಾಗಿದೆ. ಸರಳ ಆಚರಣೆಗೆ ಸಾರ್ವಜನಿಕರು ಸಹಕರಿಸಿ, ಸ್ಥಳದಲ್ಲಿ ಮಾಸ್ಕ್ ಧರಿಸಿ, ನಿಯೋಜಿಸಿರುವ ಸ್ಯಾನಿಟೈಸರ್ ಬಳಸಿ ಹಾಗೂ 3.25 ಚದರ ಮೀಟರ್ ದೈಹಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು ಎಂದು ಭಕ್ತರಿಗೆ ಸೂಚಿಸಲಾಗಿದೆ.

ಮೇಲುಕೋಟೆ ವೈರಮುಡಿ ಉತ್ಸವ (ಸಂಗ್ರಹ ಚಿತ್ರ)

ಮೇಲುಕೋಟೆ ವೈರಮುಡಿ ಉತ್ಸವ (ಸಂಗ್ರಹ ಚಿತ್ರ)

  • Share this:
ಮಂಡ್ಯ: ರಾಜ್ಯದಲ್ಲಿ ಮತ್ತೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಈ ಬಾರಿ ಕೂಡ ವಿಶ್ವವಿಖ್ಯಾತ ಮೇಲುಕೋಟೆಯ ವೈರಮುಡಿ  ಉತ್ಸವವನ್ನು ಸರಳವಾಗಿ ಆಚರಿಸಲು ಮಂಡ್ಯ ಜಿಲ್ಲಾಡಳಿತ  ನಿರ್ಧರಿಸಿದೆ. ಇಂದು ಮಂಡ್ಯದ ಡಿ.ಸಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಕಡಿವಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಹೌದು! ರಾಜ್ಯದಲ್ಲಿ  ಕೊರೋನಾ ಮಹಾಮಾರಿ ಮತ್ತೆ ಆರ್ಭಟಿಸುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ವಿಶ್ವವಿಖ್ಯಾ ತ ಮೇಲುಕೋಟೆಯ ವೈರಮುಡಿ ಉತ್ಸವದ ಮೇಲೆ ಕರಿನೆರಳು ಬೀರಿದೆ‌‌. ಕೊರೋನಾ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಬಾರಿಯೂ ಕೂಡ ಮೇಲುಕೋಟೆಯ ವಿಶ್ವಪ್ರಸಿದ್ದ ಮೇಲುಕೋಟೆಯ ವೈರಮುಡಿ ಉ ತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇಂದು ಡಿಸಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಅಂತರ್ ರಾಜ್ಯ, ಅಂತರ್ ಜಿಲ್ಲೆ ಸೇರಿದಂತೆ ಮಂಡ್ಯದ ಇತರೆ ತಾಲ್ಲೂಕುಗಳಿಂದ ಬರುವ ಭಕ್ತರಿಗೆ ಈ ಬಾರಿ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಿಡಿಸಿದೆ.

ಇನ್ನು ಈ ತಿಂಗಳ ಮಾರ್ಚ್ 19 ರಿಂದ ಮಾರ್ಚ್ 31ರವರೆಗೆ ವಿಶ್ವ ವಿಖ್ಯಾತಿಯ  ಮೇಲುಕೋಟೆ ವೈರಮುಡಿ ಉತ್ಸವ ಜರುಗಲಿದ್ದು, ಮಾರ್ಚ್24ರಂದು ಶ್ರೀ ಚಲುವ ನಾರಾಯಣಸ್ವಾಮಿಯವರಿಗೆ ವೈರಮುಡಿ ಕಿರೀಟ ಧಾರಣಾ ಮಹೋತ್ಸವವು ನಡೆಯಲಿದೆ. ಈ ವೈರಮುಡಿ  ಉತ್ಸವದ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸುವುದರಿಂದ ಮಾರ್ಚ್ 12 ರ ಸರ್ಕಾರದ ಆದೇಶದಂತೆ ಕೋವಿಡ್-19 ವೈರಸ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ನಿಯಮಗಳನ್ನು ಕೈಗೊಂಡಿರುವುದಾಗಿ ಡಿ.ಸಿ ಅಶ್ಚಥಿ ತಿಳಿಸಿದ್ದಾರೆ. ಇನ್ನು ಸ್ಥಳೀಯ ಭಕ್ತಾಧಿಗಳ ದರ್ಶನಕ್ಕೆ ದೇವಸ್ಥಾನದ 2 ಪ್ರವೇಶ ದ್ವಾರದಲ್ಲಿ ಅವಕಾಶ ಮಾಡಿಕೊಡಲಾಗಿದೆ.  ಪ್ರವೇಶ ದ್ವಾರದಲ್ಲಿಯೇ ಕೋವಿಡ್-19 ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು ಹಾಗೂ ನೆಗೆಟಿವ್ ವರದಿ ಬಂದವರಿಗೆ ಸೀಲ್ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದ್ದು, ಈ ಆಚರಣೆಯಲ್ಲಿ 2000 ಕ್ಕಿಂತ ಹೆಚ್ಚಿನ ಭಕ್ತಾಧಿಗಳು ಸೇರದಂತೆ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ಪ್ರಾಂಗಣದೊಳಗೆ ಒಂದು ಬಾರಿಗೆ ನೂರಕ್ಕಿಂತ ಹೆಚ್ಚು ಜನರು ಪ್ರವೇಶಿಸದಂತೆ ಸೂಚಿಸಿದ್ದಾರೆ.

ಇನ್ನು ದೇವಸ್ಥಾನದಲ್ಲಿ ನಿಯೋಜಿಸಿರುವ ಅರ್ಚಕರು ಹಾಗೂ ಸರ್ಕಾರಿ ಸಿಬ್ಬಂದಿಗಳನ್ನು ಹೊರತುಪಡಿಸಿ, ಹೆಚ್ಚುವರಿ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ದೇವಸ್ಥಾನ ಪ್ರವೇಶ ಕೂಡ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ದೇವಾಲಯದ ಆವರಣದಲ್ಲಿ ಗುಂಪುಗೂಡುವುದು ರಾತ್ರಿ ವೇಳೆಯಲ್ಲಿ  ದೇವಾಲಯದ ಬಳಿ ತಂಗುವಿಕೆಯನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ ಒಳ ಮತ್ತು ಹೊರ ಆವರಣದಲ್ಲಿ ಯಾವುದೇ ರೀತಿಯ ಸಾಮೂಹಿಕ ಭೋಜನ ವ್ಯವಸ್ಥೆ, ಪ್ರಸಾದ ವಿತರಣೆ ಇರುವುದಿಲ್ಲ ಹಾಗೂ ಸುತ್ತಮುತ್ತಲಿನ ಹೊಟೇಲ್‍ಗಳನ್ನು ತೆರೆಯದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇದನ್ನು ಓದಿ: ಆಪರೇಷನ್ ಕಮಲ ವಿಚಾರವಾಗಿ ವಿಧಾನಸಭೆಯಲ್ಲಿ ಹಾಲಿ, ಮಾಜಿ ಸಿಎಂಗಳ ನಡುವೆ ಬಿಸಿ ಬಿಸಿ ಚರ್ಚೆ!

ಇನ್ನು ವೈರಮುಡಿ ಬ್ರಹ್ಮೋತ್ಸವವು ಬೆಳಗ್ಗಿನ ಜಾವ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಈ ಬಾರಿ ರಾತ್ರಿ 12 ಗಂಟೆಯೊಳಗೆ ಮುಗಿಯುವಂತೆ ಕ್ರಮವಹಿಸಲಾಗಿದೆ. ಸರಳ ಆಚರಣೆಗೆ ಸಾರ್ವಜನಿಕರು ಸಹಕರಿಸಿ, ಸ್ಥಳದಲ್ಲಿ ಮಾಸ್ಕ್ ಧರಿಸಿ, ನಿಯೋಜಿಸಿರುವ ಸ್ಯಾನಿಟೈಸರ್ ಬಳಸಿ ಹಾಗೂ 3.25 ಚದರ ಮೀಟರ್ ದೈಹಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು ಎಂದು ಭಕ್ತರಿಗೆ ಸೂಚಿಸಲಾಗಿದೆ.

ಒಟ್ಟಾರೆ ಇಂದು ವೈರಮುಡಿ ಉತ್ಸವ ಆಚರಣೆ ಅಂಗವಾಗಿ ನಡೆದ ಪೂರ್ವ ಸಭೆಯಲ್ಲಿ ಹಲವು ನಿರ್ಧಾರದ ಮೂಲಕ  ಜಿಲ್ಲಾಡಳಿತ ಕೊರೋನಾ ಕಡಿವಾಣಕ್ಕೆ ಮುಂದಾಗಿದೆ. ಸರಳವಾಗಿ ವೈರಮುಡಿ ಉತ್ಸವ ಆಚರಿಸುವ ಮೂಲಕ ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ದಿಟ್ಟನಿರ್ಧಾರ ಕೈಗೊಂಡಿದೆ. ಇಂದಿನ ಈ ಪೂರ್ವಭಾವಿ ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅಶ್ವಿನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ವಾರ್ತಾಧಿಕಾರಿ ಟಿ.ಕೆ ಹರೀಶ್, ಪಾಂಡವಪುರ ತಾಲ್ಲೂಕಿನ ತಹಸೀಲ್ದಾರ್ ಪ್ರಮೋದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Published by:HR Ramesh
First published: