HOME » NEWS » District » MEDICAL OFFICERS SUFFER FOR SUPPLY OXYGEN IN CHAMARAJANAGARA RHHSN NCHM

ಚಾಮರಾಜನಗರದಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಸಲು ವೈಧ್ಯಾಧಿಕಾರಿಗಳ ನಿತ್ಯ ಹರಸಾಹಸ!

ಮೊದಲನೇ ಅಲೆಯಲ್ಲಿ ಅತಿ ಹೆಚ್ಚಿನ ಸೋಂಕಿತರು ಇದ್ದ ಸಂದರ್ಭದಲ್ಲಿ 250 ಸಿಲಿಂಡರ್ ಸಾಕಾಗುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು ಆರಂಭದಲ್ಲೇ 280 ಸಿಲಿಂಡರ್ ಖರ್ಚಾಗುತ್ತಿದೆ. ಒಂದೆರಡು ದಿನದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕಾರ್ಯಾರಂಭವಾಗಲಿದೆ.

news18-kannada
Updated:April 22, 2021, 7:18 PM IST
ಚಾಮರಾಜನಗರದಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಸಲು ವೈಧ್ಯಾಧಿಕಾರಿಗಳ ನಿತ್ಯ ಹರಸಾಹಸ!
ಆಕ್ಸಿಜನ್ ಸಿಲಿಂಡರ್ ತುಂಬಿಸಲು ಅಧಿಕಾರಿಗಳ ಪರದಾಟ.
  • Share this:
ಚಾಮರಾಜನಗರದಲ್ಲಿ (ಏ.22); ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ವೈಧ್ಯಾಧಿಕಾರಿಗಳು ನಿತ್ಯವೂ ಹರಸಾಹಸ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲಿಯು ಆಕ್ಸಿಜನ್ ಫಿಲ್ಲಿಂಗ್ ಸೆಂಟರ್ ಇಲ್ಲದ ಕಾರಣ  ಪ್ರತಿ ದಿನ ಮೈಸೂರಿಗೆ ಹೋಗಿ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸಿಕೊಂಡು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ 100 ಆಮ್ಲಜನಕಯುಕ್ತ ಬೆಡ್ ಹಾಗೂ 48 ಐ.ಸಿ.ಯು. ಬೆಡ್ ಗಳಿದ್ದು ಇಲ್ಲಿನ ಕೋವಿಡ್ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ನಿತ್ಯ 280 ಜಂಬೋ ಸಿಲಿಂಡರ್ ಅತ್ಯಗತ್ಯವಾಗಿದ್ದು ಪ್ರತಿನಿತ್ಯ ಮೈಸೂರಿಗೆ ಹೋಗಿ ತುಂಬಿಸಿಕೊಂಡು ಬರಬೇಕು. ಹೀಗೆ ತಂದ ಆಕ್ಸಿಜನ್ ಪ್ರತಿ 5 ನಿಮಿಷಕ್ಕೆ ಒಂದು ಸಿಲಿಂಡರ್ ನಂತೆ  ಒಂದು ಗಂಟೆಗೆ 10 ಸಿಲಿಂಡರ್ ಖಾಲಿಯಾಗುತ್ತಿದೆ.

ದಿನಕ್ಕೆ ಮೂರ್ನಾಲ್ಕು ಬಾರಿ ಮೈಸೂರಿಗೆ ಲಾರಿ ಹೋಗಿ ಬರಬೇಕು. ಒಂದು ಬಾರಿ ಆಮ್ಲಜನಕ ತುಂಬಿಸಿಕೊಂಡು ತರಲು ಕನಿಷ್ಠ ಆರು ಗಂಟೆ ಬೇಕು, ಸ್ವಲ್ಪ ತಡವಾದರೂ ಇತ್ತ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.

ಈ ಮೊದಲು ಮೈಸೂರಿನಲ್ಲಿ ಮೂರು ಕಂಪನಿಗಳು ಆಮ್ಲಜನಕ ಪೂರೈಸುತ್ತಿದ್ದವು.  ಆದರೆ ಈಗ ಒಂದು ಕಂಪನಿ ಮಾತ್ರ ಆಮ್ಲಜನಕ ಪೂರೈಕೆ ಮಾಡುತ್ತಿರುವುದರಿಂದ ಚಾಮರಾಜನಗರದಿಂದ ಹೋಗುವ  ಲಾರಿ ಕ್ಯೂನಲ್ಲಿ ನಿಂತು ಬಹಳಷ್ಟು ಹೊತ್ತು ಕಾದು  ಸಿಲಿಂಡರ್ ಗಳನ್ನು ತುಂಬಿಸಿಕೊಂಡು ಬರಬೇಕಾಗಿದೆ. ಹೀಗೆ ಬರುವ ಸಿಲಿಂಡರ್ ಗಳು ಕೆಲವೇ ಗಂಟೆಗಳಲ್ಲಿ ಖಾಲಿಯಾಗುವುದರಿಂದ ಪದೇಪದೇ ಮೈಸೂರಿಗೆ ಹೋಗಿ ಆಮ್ಲಜನಕ ತುಂಬಿಸಿ ತರಲು ವೈದ್ಯಾಧಿಕಾರಿಗಳ ಹೆಣಗಾಟ ನಡೆಸುತ್ತಿದ್ದು ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾದ ದುಸ್ಥಿತಿ ಎದುರಾಗಿದೆ.

ಇದನ್ನು ಓದಿ: Coronavirus | ನಾಳೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ; 2ನೇ ಬಾರಿಗೆ ದೇಶವನ್ನುದ್ದೇಶಿ ಭಾಷಣ ಸಾಧ್ಯತೆ

ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ

ಈ ನಡುವೆ ಆಮ್ಲಜನಕದ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆ ಆವರಣದಲ್ಲಿ  65 ಲಕ್ಷ ರೂಪಾಯಿ ವೆಚ್ಚದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. 6000 ಕಿಲೋ ಲೀಟರ್ ಸಾಮರ್ಥ್ಯದ  ಈ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಘಟಕ ಆರಂಭವಾದ ನಂತರ ಮೈಸೂರಿಗೆ ಓಡಾಟ ತಪ್ಪುತ್ತದೆ. ಯಾವುದೇ ಅಡಚಣೆ ಇಲ್ಲದಂತೆ ಐದಾರು ದಿನಗಳ ಕಾಲ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಬಹುದು ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್. ಆದರೆ ಬಳ್ಳಾರಿಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವಿದ್ದು ಅಲ್ಲಿಂದ ಟ್ಯಾಂಕರ್ ನಲ್ಲಿ  ತಂದು ಇಲ್ಲಿನ ಲಿಕ್ವಿಡ್ ಆಕ್ಸಿಜನ್  ಪ್ಲಾಂಟ್ ಗೆ ತುಂಬಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೊದಲನೇ ಅಲೆಯಲ್ಲಿ ಅತಿ ಹೆಚ್ಚಿನ ಸೋಂಕಿತರು ಇದ್ದ ಸಂದರ್ಭದಲ್ಲಿ 250 ಸಿಲಿಂಡರ್ ಸಾಕಾಗುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು ಆರಂಭದಲ್ಲೇ 280 ಸಿಲಿಂಡರ್ ಖರ್ಚಾಗುತ್ತಿದೆ. ಒಂದೆರಡು ದಿನದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕಾರ್ಯಾರಂಭವಾಗಲಿದೆ. ಈ ಘಟಕದಲ್ಲಿ 680 ಜಂಬೋ ಸಿಲಿಂಡರ್ ಗಳ ಸಾಮರ್ಥದಷ್ಟು ಆಮ್ಲಜನಕ ತುಂಬಿಸಬಹುದಾಗಿದೆ. ಈ ಘಟಕದಿಂದ  ಬಹಳಷ್ಟು ಅನುಕೂಲವಾಗಲಿದ್ದು ಒತ್ತಡ ಕಡಿಮೆಯಾಗಲಿದೆ ಎಂದು ಜಿಲ್ಲಾಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ಮಹೇಶ್ ತಿಳಿಸಿದ್ದಾರೆ.

  • ವರದಿ: ಎಸ್.ಎಂ.ನಂದೀಶ್

Published by: HR Ramesh
First published: April 22, 2021, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories