ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಲಿದೆ; ಸಚಿವ ವಿ.ಸೋಮಣ್ಣ
ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ರಾಮನಗರದ ಜೊತೆಗೆ ಮಂಡ್ಯ ಜಿಲ್ಲೆಗೆ ಅನುಕೂಲವಾಗುತ್ತಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಕನಕಪುರದಿಂದ ಬೇರೆಡೆಗೆ ಶಿಫ್ಟ್ ಮಾಡಿದೆ. ಮುಂದಿನ ದಿನಗಳಲ್ಲಿ ಈ ಕುರಿತಾಗಿ ಹೋರಾಟ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
news18-kannada Updated:November 28, 2020, 7:13 PM IST

ರಾಮನಗರ ಜಿಲ್ಲೆ ಕನಕಪುರದ ರಾಯಸಂದ್ರ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ನಿರ್ಮಾಣವಾಗಿರುವ ನೂತನ ಲೇಔಟ್ ಉದ್ಘಾಟನೆಯನ್ನು ವಸತಿ ಸಚಿವ ವಿ.ಸೋಮಣ್ಣ ನೆರವೇರಿಸಿದರು. ಇದೇ ವೇಳೆ ಭೂಮಾಲೀಕರಿಗೆ ನಿವೇಶನದ ಹಕ್ಕು ಪತ್ರ ವಿತರಿಸಿದರು.
- News18 Kannada
- Last Updated: November 28, 2020, 7:13 PM IST
ರಾಮನಗರ: ಈ ಸರ್ಕಾರದಲ್ಲೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸಿಗಲಿದೆ. ಅದನ್ನು ನಾವು ಸ್ಟಾಪ್ ಮಾಡಿಲ್ಲ ಗುರು, ನಿಮ್ಮವರೇ ನಿಲ್ಲಿಸಿದರು ಎಂದು ಸಚಿವ ವಿ.ಸೋಮಣ್ಣ ಅವರು ಸಂಸದ ಡಿ.ಕೆ.ಸುರೇಶ್ ಅವರ ಮನವಿಗೆ ನಗುತ್ತ ಹೀಗೆ ಹೇಳಿದರು.
ರಾಮನಗರ ಜಿಲ್ಲೆ ಕನಕಪುರದ ರಾಯಸಂದ್ರ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ನಿರ್ಮಾಣವಾಗಿರುವ ನೂತನ ಲೇಔಟ್ ಉದ್ಘಾಟನೆಯನ್ನು ವಸತಿ ಸಚಿವ ವಿ.ಸೋಮಣ್ಣ ನೆರವೇರಿಸಿದರು. ಇದೇ ವೇಳೆ ಭೂಮಾಲೀಕರಿಗೆ ನಿವೇಶನದ ಹಕ್ಕು ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು ಕನಕಪುರಕ್ಕೆ ಮೆಡಿಕಲ್ ಕಾಲೇಜು ಬರಬೇಕಿತ್ತು. ಆದರೆ ಈ ಸರ್ಕಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಕಾಲ ಹಿಂಗೇ ಇರುತ್ತಾ, ಕಾಲ ಹಿಂಗೇ ಇರಲ್ಲ. ಸಚಿವ ಸೋಮಣ್ಣನವರು ನಮ್ಮ ಕನಕಪುರದವರು. ಹಾಗಾಗಿ ಅವರು ಕನಕಪುರದ ಪರವಾಗಿ ಸಚಿವ ಸಂಪುಟ ಸಭೆಯಲ್ಲಿ ಧ್ವನಿ ಎತ್ತಿದ್ದರು. ಆದರೆ ಕೆಲವರು ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡುತ್ತೀಯಾ ಎಂದಿದ್ದರು. ಆದರೆ ಸೋಮಣ್ಣನವರು ಮಾತ್ರ ಅದು ನನ್ನ ತಾಲೂಕು ಎಂದಿದ್ದರು. ಹಾಗಾಗಿ ಸೋಮಣ್ಣನವರೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ತರಬೇಕು. ಕೊನೆ ಹಂತದಲ್ಲಿ ಆ ಯೋಜನೆ ಕೈ ತಪ್ಪಿತ್ತು. ಹಾಗಾಗಿ ಸೋಮಣ್ಣ ಅವರಿಂದಲೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ಬರಬೇಕು ಎಂದುಸಚಿವ ಸೋಮಣ್ಣಗೆ ಮನವಿ ಮಾಡಿದರು.
ಇದನ್ನು ಓದಿ: ಸಲಿಂಗಕಾಮಕ್ಕೆ ಒಲ್ಲೆ ಎಂದ ಸ್ನೇಹಿತನನ್ನೇ ಕೊಲೆಗೈದ ಕಾಮುಕನ ಬಂಧನ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು ಕನಕಪುರಕ್ಕೆ ಈ ಸರ್ಕಾರದಲ್ಲೇ ಮೆಡಿಕಲ್ ಕಾಲೇಜು ಸಿಗಲಿದೆ. ಅದನ್ನು ನಾವು ಸ್ಟಾಪ್ ಮಾಡಿಲ್ಲ ಗುರು, ನಿಮ್ಮವರೇ ನಿಲ್ಲಿಸಿದರು ಎಂದು ನಗುತ್ತ ಹೇಳಿದರು. ನಂತರ ಸಿಎಂ ಗೆ ದ್ವೇಷದ ರಾಜಕಾರಣ ಗೊತ್ತಿಲ್ಲ. ಖಂಡಿತವಾಗಿಯೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸಿಗಲಿದೆ. ಅದಕ್ಕೆ ನಿಗಧಿಯಾಗಿದ್ದ ಭೂಮಿಯನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದರು.
ಹೋರಾಟದ ಎಚ್ಚರಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೈ ತಪ್ಪಿದ್ದ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಕನಕಪುರದಲ್ಲಿಯೇ ಎಚ್ಚರಿಕೆ ನೀಡಿದ್ದರು. ನಮ್ಮ ತಾಲೂಕಿಗೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರದಿಂದ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿದೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ರಾಮನಗರದ ಜೊತೆಗೆ ಮಂಡ್ಯ ಜಿಲ್ಲೆಗೆ ಅನುಕೂಲವಾಗುತ್ತಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಕನಕಪುರದಿಂದ ಬೇರೆಡೆಗೆ ಶಿಫ್ಟ್ ಮಾಡಿದೆ. ಮುಂದಿನ ದಿನಗಳಲ್ಲಿ ಈ ಕುರಿತಾಗಿ ಹೋರಾಟ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
ವರದಿ : ಎಟಿ.ವೆಂಕಟೇಶ್