news18-kannada Updated:January 19, 2021, 12:46 PM IST
ಮೆಕ್ಯಾನಿಕ್ ವೆಂಕಟೇಶ್
ಕೊಡಗು: ಬೈಕು ಎನ್ನೋದು ಈಗ ಅಗತ್ಯದ ವಾಹನವಾಗಷ್ಟೇ ಉಳಿದಿಲ್ಲ. ಎಷ್ಟೋ ಯುವಕರಿಗೆ ಬೈಕುಗಳನ್ನು ಮಾಡಿಫೈ ಮಾಡೋದು ಅಂದ್ರೆ ಅದೊಂಥರಾ ಕ್ರೇಜ್. ಆದರೆ ಇಲ್ಲೊಬ್ಬ ಮೆಕ್ಯಾನಿಕ್ ಲಾಕ್ ಡೌನ್ ಸಮಯವನ್ನು ವ್ಯರ್ಥ ಮಾಡದೆ, ಬೈಕುಗಳಿಗೆ ಸೆಲ್ಫ್ ಸ್ಟಾರ್ಟ್ ಮೋಟರ್ ಇಲ್ಲದೆ ಸೆಲ್ಫ್ ಆನ್ ಮಾಡೋದನ್ನ ಕಂಡು ಆವಿಸ್ಕರಿಸಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿಯಾಗಿರುವ ವೆಂಕಟೇಶ್ ಇಂತಹ ವಿನೂತನ ಆವಿಷ್ಕಾರ ಮಾಡಿರುವವರು.
ಆಧುನಿಕತೆ ಹೆಚ್ಚಿದಂತೆ ಜನರು ಈಸಿಯಾಗಿ ಬೈಕುಗಳನ್ನು ಸ್ಟಾರ್ಟ್ ಮಾಡೋದನ್ನು ಇಷ್ಟ ಪಡ್ತಾರೆ. ಕಿಕ್ ಹೊಡೆಯೋದು ಅಂದ್ರೆ ಆದೇನೋ ಆಗೋದೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಎಲ್ಲಾ ಬೈಕುಗಳಿಗೆ ಸಾಮಾನ್ಯವಾಗಿ ಸೆಲ್ಫ್ ಸಾರ್ಟ್ ಇದ್ದೇ ಇರುತ್ತೆ. ಆದರೆ ಕೆಲವು ವರ್ಷಗಳ ಹಿಂದಿನ ಯಾವುದೇ ಬೈಕುಗಳಲ್ಲಿ ಸೆಲ್ಫ್ ಸ್ಟಾರ್ಟ್ ಇಲ್ಲವೇ ಇಲ್ಲ. ಅವುಗಳನ್ನು ಆನ್ ಮಾಡಬೇಕು ಅಂದ್ರೆ ಕಿಕ್ ಹೊಡೆಯಲೇ ಬೇಕು. ಆದರೆ ಹಳೇ ಗಾಡಿಯಾದರೂ ಎಷ್ಟೋ ಜನರಿಗೆ ತಮ್ಮ ಬೈಕುಗಳನ್ನು ಮಾತ್ರ ಮಾರೋದಕ್ಕೆ ಇಷ್ಟವೇ ಇರಲ್ಲ. ಬದಲಾಗಿ ಇರೋ ಗಾಡಿಯನ್ನೇ ಆಲ್ಟರ್ ಮಾಡಿ ಆಧುನಿಕವಾಗಿ ಕಾಣುವಂತೆ ಮಾಡಿ ಅದನ್ನು ಬಳಸುತ್ತಾರೆ. ಇದೆಲ್ಲವನ್ನೂ ಯೋಚಿಸಿದ ಕುಶಾಲನಗರದ ಮೆಕ್ಯಾನಿಕ್ ವೆಂಕಟೇಶ್, ಲಾಕ್ ಡೌನ್ ಸಮಯದಲ್ಲಿ ಹಳೇ ವಾಹನಗಳಿಗೂ ಸೆಲ್ಫ್ ಸ್ಟಾರ್ಟ್ ಕಿಟ್ ಕಂಡು ಹಿಡಿದಿದ್ದಾರೆ. ಅದು ಕೂಡ ಮೋಟರ್ನ ಅಗತ್ಯವಿಲ್ಲದೆ.
ಇದನ್ನೂ ಓದಿ: Kidnap Case - ಮಕ್ಕಳ ಕಿಡ್ನಾಪ್ಗೆ ಯತ್ನಿಸಿದ್ರು; ಸಿಕ್ಕಿಬಿದ್ದಾಗ ಪ್ರಾಂಕ್ ವಿಡಿಯೋ ಅಂದ್ರು
ಎಜಿಎಸ್ ಅಂದರೆ ಆಲ್ಟರ್ನೇಟ್ ಜನ್ರೇಟಿಂಗ್ ಸಿಸ್ಟಮ್ ಕಿಟ್. ವೈಂಡಿಂಗ್ ಕಾಪರ್ ತಂತಿಯನ್ನು ಬಳಸಿಕೊಂಡು ಒಂದು ಕಿಟ್ ಕಂಡು ಹಿಡಿದಿದ್ದಾರೆ. ಸದ್ಯ ಈಗ ಬೈಕು ಅಥವಾ ಯಾವುದೇ ವಾಹನಗಳಲ್ಲಿರುವ ಸೆಲ್ಫ್ ಸ್ಟಾರ್ಟ್ಗೆ ಒಂದು ಮೆಷಿನ್ ಕೂಡ ಇರುತ್ತೆ. ಆದರೆ ವೆಂಕಟೇಶ್ ಕಂಡು ಹಿಡಿದಿರುವ ಸೆಲ್ಫ್ ಸ್ಟಾರ್ಟ್ಗೆ ಯಾವುದೇ ಮಿಷನ್ ಅಗತ್ಯವಿಲ್ಲ. ಕೇವಲ ಕಾಪರ್ ವೈಯರ್ ಮತ್ತು ಮ್ಯಾಗ್ನೆಟ್ ಬಳಸಿ ಈ ಸೆಲ್ಫ್ ಸ್ಟಾರ್ಟ್ ಯಂತ್ರ ತಯಾರಿಸಿದ್ದಾರೆ. ಈ ಮೆಷನ್ನ ಮತ್ತೊಂದು ವಿಶೇಷವೆಂದರೆ ಅದನ್ನು ಬೈಕ್ ಗಳಿಗೆ ಯಾವುದೇ ಡ್ಯಾಮೇಜ್ ಮಾಡದೇ ಸುಲಭವಾಗಿ ಅಳವಡಿಸಬಹುದು. ಈ ಕಿಟ್ ಬೆಲೆ 12 ರಿಂದ 15 ಸಾವಿರ ಆಗಬಹುದು. ಈ ಕಿಟ್ ವರ್ಕ್ ಮಾಡುವುದನ್ನು ವೆಂಕಟೇಶ್ ವಿಡಿಯೋ ಮಾಡಿ, ಯೂಟ್ಯೂಬ್ನಲ್ಲಿ ಹಾಕಿದ್ದಾರೆ. ಅದನ್ನು ನೋಡಿದ ಸಾಕಷ್ಟು ಜನರು ಈ ಕಿಟ್ ಬೇಕೆಂದು ಈಗಾಗಲೇ ಬುಕಿಂಗ್ ಮಾಡಿದ್ದಾರೆ.
ಸದ್ಯ ನಾಲ್ಕು ಕಿಟ್ ಗಳನ್ನು ರೆಡಿಮಾಡಿ ಮಾರಾಟ ಮಾಡಿದ್ದಾರೆ. ವೆಂಕಟೇಶ್ ಅವರ ಈ ಕೆಲಸವನ್ನು ನೋಡಿರುವ ಸ್ಥಳೀಯರು ವೆಂಕಟೇಶ್ ಅವರ ಕೆಲಸಕ್ಕೆ ಬಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೆಕ್ಯಾನಿಕ್ ವೆಂಕಟೇಶ್ ಅವರು ಕೇವಲ ಈ ಕಿಟ್ ಅಷ್ಟೇ ಕಂಡು ಹಿಡಿದಿಲ್ಲ. ಬೈಕ್ಗಳ ಬಗ್ಗೆ ತುಂಬಾ ಕ್ರೇಜ್ ಕೂಡ ಹೊಂದಿರುವ ವೆಂಕಟೇಶ್ ಇದರ ಜೊತೆಗೆ ಕೆಲವು ಬೈಕ್ಗಳಿಗೆ ಡಬಲ್ ಎಂಜಿನ್ ಅಳವಡಿಸಿದ್ದಾರೆ. ಅವು 350 ಸಿಸಿ ಎಂಜಿನಂತೆ ಅಧ್ಬುತ ಪರ್ಫಾರ್ಮೆನ್ಸ್ ನೀಡುತ್ತಿವೆ.
ವರದಿ: ರವಿ ಎಸ್ ಹಳ್ಳಿ
Published by:
Vijayasarthy SN
First published:
January 19, 2021, 12:46 PM IST