ರಾಯಚೂರಿನ ಮಾವಿನಕೆರೆ ಭೂ ಒತ್ತುವರಿ: ಭೂಗಳ್ಳರ ಪಾಲಾಗುತ್ತಿದೆ ಕೆರೆ ಭೂಮಿ

ಮಾವನಿಕೆರೆಯನ್ನು ಅಭಿವೃದ್ಧಿ ಪಡಿಸಲು ಶಾಸಕರ ಅನುದಾನದಲ್ಲಿ 10 ಕೋಟಿ ರೂಪಾಯಿಯಲ್ಲಿ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆ ಇಷ್ಟರಲ್ಲಿಯೇ ಮಾವಿನಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಲು ಜಿಲ್ಲಾಡಳಿತ ಹಾಗೂ ಶಾಸಕರು ಯೋಜನೆ ಸಿದ್ದವಾಗಿದೆ.

ಭೂಗಳ್ಳರ ಪಾಲಾಗುತ್ತಿರುವ ರಾಯಚೂರು ಮಾವಿನಕೆರೆ.

ಭೂಗಳ್ಳರ ಪಾಲಾಗುತ್ತಿರುವ ರಾಯಚೂರು ಮಾವಿನಕೆರೆ.

  • Share this:
ರಾಯಚೂರು: ಕೆರೆ ಕಟ್ಟೆಗಳನ್ನು ರಕ್ಷಿಸಬೇಕು, ಕೆರೆಗಳಿರುವದರಿಂದ ನಗರ ಹಾಗೂ ಗ್ರಾಮಗಳಲ್ಲಿ ಕುಡಿವ ನೀರು, ಗ್ರಾಮಗಳಿಗೆ ಬೇಕಾಗುವ ನೀರೊದಗಿಸುವದರೊಂದಿಗೆ ಸೌಂದರ್ಯ ಹೆಚ್ಚಿಸುತ್ತಿದ್ದವು. ಕೆರೆಗಳಿಂದ ಅಂತರ್ಜಲ ಮಟ್ಟ ಸಹ ಹೆಚ್ಚಳ ವಾಗುತ್ತಿದೆ. ಇಂಥ ಕೆರೆಗಳ ರಕ್ಷಣೆ ಎಲ್ಲರ ಕರ್ತವ್ಯ ಆದರೆ ನಗರೀಕರಣ ಹೆಚ್ಚಾದಂತೆ ಕೆರೆ ಕಟ್ಟೆಗಳು ನಾಶವಾಗಿವೆ. ಈಗ ರಾಯಚೂರು ನಗರದಲ್ಲಿರುವ ಪ್ರಮುಖ ಹಾಗು ಐತಿಹಾಸಿಕ ಕೆರೆಯಾಗಿರುವ ಮಾವಿನಕೆರೆಯ ಸರದಿ, ಬರುವ ದಿನಗಳಲ್ಲಿ ಮಾವಿನಕೆರೆ ಇತ್ತು ಎಂಬುವುದು ಹಿಂದಿನ ಫೋಟೊ ನೋಡಿ ಹೇಳಬೇಕಾಗುತ್ತದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರಾಯಚೂರು ನಗರದಲ್ಲಿರುವ ಸುಮಾರು 190 ಎಕರೆ ವಿಸ್ತಾರದ ದೊಡ್ಡ ಕೆರೆಯು ಈಗ ದಿನೇ ದಿನೇ ತನ್ನ ವಿಸ್ತರಣೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತಿದೆ.

13 ನೆಯ ಶತಮಾನದಲ್ಲಿ ರಾಯಚೂರು ಆಳಿದ ಕಾಕತೀಯ ರಾಣಿ ರುದ್ರಮ್ಮದೇವಿಯವರು ಒಂದು ಕಡೆ ಗುಡ್ಡ ಹೊಂದಿರುವ ಪ್ರದೇಶದಲ್ಲಿ ಬೃಹತ್ ಕೆರೆಯನ್ನು ಕಟ್ಟಿಸಿದ್ದಾರೆ. ಈ ಕೆರೆಗೆ ಹಳ್ಳಗಳ ಮುಖಾಂತರ, ಗುಡ್ಡಗಳಿಂದ ನೀರು ಹರಿದುಬಂದು ತುಂಬಿಕೊಳ್ಳುತ್ತಿತ್ತು. ಈ ಕೆರೆಯ ನೀರು ರಾಯಚೂರು ನಗರಕ್ಕೆ ಕುಡಿವ ಹಾಗು ಬಳಕೆಗಾಗಿ ನಿರ್ಮಿಸಲಾಗಿದೆ. ಈ ಕೆರೆಯು ಮಾವಿನ ಹಣ್ಣಿನ ಆಕಾರದಲ್ಲಿರುವದರಿಂದ ಇದಕ್ಕೆ ಮಾವಿನಕೆರೆ ಎಂಬ ಹೆಸರು ಬಂದಿದೆ. ಸುಮಾರು 8 ಶತಮಾನಗಳ ಹಳೆಯದಾದ ಮಾವಿನಕೆರೆಯು ರಾಯಚೂರಿನಲ್ಲಿ ಬಹುತೇಕ ಸಂದರ್ಭದಲ್ಲಿ ನೀರು ತುಂಬಿರುತ್ತದೆ.

ಈ ಕೆರೆಯು ಪಿಕನಿಕ್ ಸ್ಪಾಟ್ ಆಗಿದೆ, ನಗರದಲ್ಲಿಯೇ ಇರುವದರಿಂದ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಈ ಕೆರೆಯು ವಾಯುವಿಹಾರಿಗಳಿಗೆ ಉತ್ತಮವಾದ ಸ್ಥಳವಾಗಿದೆ. ಆಗಾಗ ಕೆರೆಗಾಗಿ ವಿವಿಧ ಯೋಜನೆಗಳಲ್ಲಿ ಹಣ ಖರ್ಚು ಮಾಡಲಾಗಿದೆ. ಆದರೆ ಈ ಕೆರೆಯನ್ನು ಹಂತ ಹಂತವಾಗಿ ಮುಚ್ಚುವ ಕಾರ್ಯವೂ ನಡೆದಿದೆ. ಈ ಮಧ್ಯೆ ಕೆರೆ ಗೆ ನಗರದ ಚರಂಡಿ ನೀರನ್ನು ಸಹ ಬಿಡುತ್ತಿರುವದರಿಂದ ಕೆರೆಯು ಆಗಾಗ ಮಲೀನವಾಗಿ ಜಲಚರಗಳು ಸಾವನ್ನಪ್ಪುತ್ತಿವೆ. ಕೆಲವೊಂದು ಸಮಯ ದುರ್ನಾತ ಬೀರುತ್ತಿದೆ.

ಈ ಕೆರೆಯನ್ನು ಸುಂದರ ಹಾಗೂ ಸ್ವಚ್ಛವಾಗಿಡಬೇಕಾಗಿದೆ. 190 ಎಕರೆಯ ಕೆರೆಯಲ್ಲಿ ಪರವಾನಿಗೆ ಇಲ್ಲದೆ ನಿವೇಶನ ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ದೇವಸ್ಥಾನವನ್ನು ಸಹ ನಿರ್ಮಿಸಲಾಗಿದೆ. ಈ ಮಧ್ಯೆ ಈಗ ಮತ್ತೆ ಒತ್ತುವರಿ ಮಾಡುವ ಕಾರ್ಯ ಆರಂಭವಾಗಿದೆ. ಕೆರೆಯಲ್ಲಿ ಮಣ್ಣುಗಳನ್ನು ಹಾಕಿ ತುಂಬಲಾಗುತ್ತಿದೆ. ಜೆಸಿಬಿ ಹಾಗು ಟ್ರಾಕ್ಟರ್ ಮೂಲಕ ಕೆರೆಯಲ್ಲಿ ಮಣ್ಣು ತುಂಬಿಸಿ ಕೆರೆಯನ್ನು ಮುಚ್ಚಲಾಗುತ್ತಿದೆ.

ಇದನ್ನೂ ಓದಿ: Assembly Election2021: ಪಶ್ಚಿಮ ಬಂಗಾಳ ಚುನಾವಣೆ; ಮಮತಾ ಬ್ಯಾನರ್ಜಿ ಪರ ಶರದ್​ ಪವಾರ್​ ಪ್ರಚಾರ!

ಇಲ್ಲಿ ಪ್ರಭಾವಿಗಳು ಕೆರೆಯನ್ನು ಒತ್ತುವರಿ ಮಾಡುತ್ತಿದ್ದಾರೆ. ಇದಕ್ಕೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ನಗರಸಭೆಯಿಂದಾಗಲಿ ಪರವಾನಿಗೆ ಪಡೆದಿಲ್ಲ. ಕೆರೆಯನ್ನು ಒತ್ತುವರಿ ಮಾಡುವದನ್ನು ನಿಲ್ಲಿಸಬೇಕೆಂದು ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಮಾವನಿಕೆರೆಯನ್ನು ಅಭಿವೃದ್ಧಿ ಪಡಿಸಲು ಶಾಸಕರ ಅನುದಾನದಲ್ಲಿ 10 ಕೋಟಿ ರೂಪಾಯಿಯಲ್ಲಿ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆ ಇಷ್ಟರಲ್ಲಿಯೇ ಮಾವಿನಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಲು ಜಿಲ್ಲಾಡಳಿತ ಹಾಗೂ ಶಾಸಕರು ಯೋಜನೆ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ಕೆರೆಯ ನೀರು ಖಾಲಿ ಮಾಡಲಾಗುತ್ತಿದೆ, ಒಂದು ವೇಳೆ ಒತ್ತುವರಿ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಶಿವರಾಜ ಪಾಟೀಲ ಹಾಗು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
Published by:MAshok Kumar
First published: