ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಭಾರೀ ಪ್ರಮಾಣದ ಸ್ಫೋಟಕ ದಾಸ್ತಾನು: ಸಮಗ್ರ ತನಿಖೆಗೆ ಪಾಪ್ಯುಲರ್ ಫ್ರಂಟ್ ಒತ್ತಾಯ

ಪತ್ತೆ ಹಚ್ಚಲಾದ ಸ್ಫೋಟಕ ಗನ್ ತಯಾರಿಗೆ ಬಳಸುವಂತದ್ದಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿರುವಾಗ ಇದನ್ನು ಯಾವ ದುಷ್ಕ್ರತ್ಯಕ್ಕೆ ಬಳಸಲು ಯೋಜನೆ ಮಾಡಿರಬಹುದು ಎಂಬ ವಿಚಾರ ತನಿಖೆಯಿಂದಷ್ಟೇ ಬಹಿರಂಗವಾಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು (ಆಗಸ್ಟ್​ 16); ಇತ್ತೀಚೆಗೆ ಶಿವಮೊಗ್ಗದ ಕ್ವಾರಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸ್ಫೋಟಕಗಳು ಅಚಾನಕ್ಕಾಗಿ ಸ್ಪೋಟವಾಗಿದ್ದವು. ಈ ಸ್ಪೋಟಕ್ಕೆ ಕನಿಷ್ಠ 10 ಜನ ಮೃತಪಟ್ಟಿದ್ದರೆ, ಸ್ಪೋಟದ ತೀವ್ರತೆಗೆ ಶಿವಮೊಗ್ಗದ ಜನರಿಗೆ ಭೂ ಕಂಪನದ ಅನುಭವವಾಗಿತ್ತು. ಅಲ್ಲದೆ, 60 ಕಿಮೀ ಆಚೆಗೂ ಸ್ಪೋಟದ ಶಬ್ಧ ಕೇಳಿತ್ತು. ಹೀಗಾಗಿ ಅಂದಿನ ಸಿಎಂ ಯಡಿಯೂರಪ್ಪ ಅಕ್ರಮ ಸ್ಪೋಟದ ದಾಸ್ತನು ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಮಂಗಳೂರಿನ ಬಂದರ್ ನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಸ್ಫೋಟಕ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು, ಈ ಪ್ರಕರಣದ ಸಮಗ್ರ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.

  ಜನನಿಬಿಡ ಪ್ರದೇಶದ ಅಂಗಡಿಯೊಂದರಿಂದ 1500 ಕೆ.ಜಿ.ಗೂ ಅಧಿಕ ಸ್ಫೋಟಕ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆನಂದ್ ಗಟ್ಟಿ ಎಂಬ ವ್ಯಕ್ತಿಯ ಬಂಧನದೊಂದಿಗೆ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಈತ ಗನ್ ಮಾರಾಟ ಮಾಡುವ ಪರವಾನಿಗೆ ಪಡೆದು ಅಕ್ರಮವಾಗಿ ಸ್ಫೋಟಕ ಸಾಮಗ್ರಿ ದಾಸ್ತಾನು ಇರಿಸಿರುವುದು ಆತಂಕಕಾರಿಯಾಗಿದೆ.

  ಪತ್ತೆ ಹಚ್ಚಲಾದ ಸ್ಫೋಟಕ ಗನ್ ತಯಾರಿಗೆ ಬಳಸುವಂತದ್ದಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿರುವಾಗ ಇದನ್ನು ಯಾವ ದುಷ್ಕ್ರತ್ಯಕ್ಕೆ ಬಳಸಲು ಯೋಜನೆ ಮಾಡಿರಬಹುದು ಎಂಬ ವಿಚಾರ ತನಿಖೆಯಿಂದಷ್ಟೇ ಬಹಿರಂಗವಾಗಬೇಕು. ಮಡ್ಗಾಂವ್ ಸ್ಫೋಟ‌ದ ಗಂಭೀರ ಆರೋಪ ಹೊತ್ತು ಎನ್.ಐ.ಎ.ಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕಡಬ ನಿವಾಸಿ ಜಯ ಪ್ರಕಾಶ್ ದಕ್ಷಿಣ ಕನ್ನಡ ಜಿಲ್ಲೆಯವನು ಎಂದು ತಿಳಿದುಬಂದಿದೆ.

  ಗೌರಿ ಲಂಕೇಶ್ ಹತ್ಯೆಯಲ್ಲೂ ಇದೇ ಜಿಲ್ಲೆಯ ಮೋಹನ್ ನಾಯಕ್ ಎಂಬಾತ ಆರೋಪಿಯಾಗಿದ್ದಾನೆ. ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಅತುಲ್ ರಾವ್ ನನ್ನು ನಂತರ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿತ್ತು. ಇದೀಗ ಭಾರೀ ಸ್ಫೋಟಕ ದಾಸ್ತಾನು ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

  ಇದನ್ನೂ ಓದಿ: Explained| ಹವಾಮಾನ ವೈಪರೀತ್ಯಗಳಿಗೆ ಮಾನವ ಪರೋಕ್ಷ ಕಾರಣವೇ? ದತ್ತಾಂಶಗಳು ಏನು ಹೇಳುತ್ತವೆ?

  ಸ್ಫೋಟಕ ಸಾಮಗ್ರಿಯೊಂದಿಗೆ ಆರೋಪಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರ ಸಕಾಲಿಕ ಕ್ರಮ ಶ್ಲಾಘನೀಯ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿನ ಪಿತೂರಿಯನ್ನು ಅನಾವರಣಗೊಳಿಸಬೇಕು ಮತ್ತು ಈತನ ಹಿನ್ನೆಲೆಯನ್ನು ಸಮಾಜದ ಮುಂದೆ ಬಹಿರಂಗಪಡಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: