Maski By Election: ಮಸ್ಕಿ ಉಪಚುನಾವಣೆ ಬಿಜೆಪಿ ಪರ ಪ್ರಚಾರಕ್ಕೆ ಬಿಎಸ್​ವೈ ಎಂಟ್ರಿ; ನಾಳೆ ಬೃಹತ್ ಸಮಾವೇಶ

ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸರಕಾರ ಬಂದರೆ 5ಎ ಕಾಲುವೆ ಮಂಜೂರು ಮಾಡುವುದಾಗಿ ಹೇಳಿಕೆ ಬಿಜೆಪಿ ನೀಡಿದ್ದು, ಈಗ ಈ ಹೇಳಿಕೆಗೆ ಬದ್ದವಾಗಿಲ್ಲ. ಇದರಿಂದಾಗಿ 5ಎ ಕಾಲುವೆ ಹೋರಾಟಗಾರರು ಬಿಜೆಪಿ ವಿರುದ್ದ ಮತ ಚಲಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ.

ಸಿಎಂ ಬಿಎಸ್ ಯಡಿಯೂರಪ್ಪ.

  • Share this:
ರಾಯಚೂರು: ರಾಜ್ಯದಲ್ಲಿ ಮತ್ತೆ ಉಪ ಚುನಾವಣೆಗಳ ಕಹಳೆ ಮೊಳಗಿದೆ. ಈಗಾಗಲೆ ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಂತಿಮವಾಗಿದ್ದು, ಬಿರುಸಿನ ಪ್ರಚಾರ ನಡೆದಿದೆ. ಗೆಲುವಿಗಾಗಿ ಉಭಯ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿವೆ. ನಾಳೆ ಬಿಜೆಪಿ ಬೃಹತ್ ಸಮಾವೇಶ ನಡೆಸಲಿದೆ. ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿ ಪ್ರತಾಪಗೌಡ ಪಾಟೀಲ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಮಸ್ಕಿ ಬೈ ಎಲೆಕ್ಷನ್ ಗೆ ಬಕ ಪಕ್ಷಿಗಳಂತೆ ಕಾಯ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆ ದಿನಾಂಕ ಘೋಷಣೆ ಆಗ್ತಿದ್ದಂತೆ ಕಾಲಿಗೆ ಚಕ್ರ ಕಟ್ಕೊಂಡು ಕ್ಷೇತ್ರ ಪ್ರವಾಸ ಮಾಡಿ, ಮತ ಬೇಟೆಗೆ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಬಸನಗೌಡ ತುರ್ವಿಹಾಳಗೆ ಟಿಕೆಟ್ ಕನ್ಫರ್ಮ್ ಮಾಡಿದ್ದು, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸ್ಪರ್ಧೆ ಮಾಡೋದು ಪಕ್ಕಾ ಆಗಿದೆ. ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 213 ಮತಗಳ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡ್ತಿದ್ದು, ಕ್ಷೇತ್ರದಾದ್ಯಂತ ಜನರೇ ಅವರಿಗೆ ಚುನಾವಣೆ ಖರ್ಚಿಗಾಗಿ ದೇಣಿಗೆ ನೀಡೋಕೆ ಮುಂದಾಗಿದ್ದಾರೆ. ಅಲ್ಲದೇ ಉತ್ತಮ ರೆಸ್ಪಾನ್ಸ್ ಕೂಡಾ ಸಿಗ್ತಿದ್ದು, ಇತ್ತ ಬಿಜೆಪಿ ಅಭ್ಯರ್ಥಿಯಾಗಲಿರೋ ಪ್ರತಾಪ್ ಗೌಡ ಪಾಟೀಲ್ ಕೂಡಾ ಭರ್ಜರಿ ಪ್ರಚಾರಾಂದೋಲನ ನಡೆಸ್ತಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವಿನ ಮಾಲೆ ಹಾಕಿದ್ದ ಪ್ರತಾಪ್ ಗೌಡ ಪಾಟೀಲ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆ ಆಗ್ತಿದ್ದಂತೆ ಬೃಹತ್ ಸಮಾವೇಶ ಮಾಡೋದಕ್ಕೆ ಕಮಲ ಪಾಳಯ ಮುಂದಾಗಿದೆ. ಕೊರೋನಾ ಹಾವಳಿಯ ನಡುವೆಯೇ ಮುಂಜಾಗ್ರತಾ ಕ್ರಮಗಳೊಂದಿಗೆ ನಾಳೆ ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಸ್ಕಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ಹತ್ತಾರು ಸಚಿವರು, ಶಾಸಕರು, ಸಂಸದರು ಸೇರಿದಂತೆ ಮೂವತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ‌. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಈ ಚುನಾವಣೆಯನ್ನ ಸಾಕಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿರೋದ್ರಿಂದ ನಾವೇ ಗೆಲುವು ಸಾಧಿಸ್ತೇವೆ ಅನ್ನೋ ಉತ್ಸಾಹದಲ್ಲಿದ್ದಾರೆ.

ಈಗ ರಾಜ್ಯದಲ್ಲಿ‌ ಮತ್ತೆ ಕೊರೋನಾ ಎರಡನೆಯ ಅಲೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ತಡೆಗಾಗಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆ ಬಹಿರಂಗ ಸಭೆಗೆ 500 ಜನರಿಗೆ ಮಾತ್ರ ಅವಕಾಶವಿದೆ. ಆದರೆ ನಾಳೆಯ ಸಭೆಗೆ 30 ಸಾವಿರಕ್ಕೂ ಅಧಿಕ ಜನ ಸೇರಲಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಪಾಲನೆ ಮಾಡುವುದೇ ಕಷ್ಟವಾಗಲಿದೆ. ಈಗಾಗಲೇ ಜಿಲ್ಲಾಡಳಿತವು ಜನರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಏನು ಕ್ರಮ ಕೈಗೊಳ್ಳುತ್ತಾರೊ ಕಾದು ನೋಡಬೇಕು. ಚುನಾವಣೆಯಲ್ಲಿ ನೀತಿ ಸಂಹಿತೆ ಹಾಗೂ ಕೋವಿಡ್ ಉಲ್ಲಂಘನೆಯಾಗುವುದು ಬಹುತೇಕ ಸಾಧ್ಯತೆ ಇದೆ. ಕಾರ್ಯಕ್ರಮ ಆಯೋಜಕರ ಮೇಲೆ ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನು‌ ನೋಡಬೇಕು.

ಇದನ್ನು ಓದಿ: Maski By Election | ಮಸ್ಕಿ ವಿಧಾನಸಭೆ ಉಪಚುನಾವಣೆ; ಅಭ್ಯರ್ಥಿಗಳಿಗೆ ಕಾಲುವೆ ಹೋರಾಟದ ಬಿಸಿ

ಇದೇ ವೇಳೆ ರಾಯಚೂರು ಜಿಲ್ಲೆಯ ಬಗ್ಗೆ ಬಿಜೆಪಿ ಸರಕಾರ ನಿರ್ಲಕ್ಷ್ಯ ಮಾಡಿದೆ. ನೂತನ ವಿಶ್ವವಿದ್ಯಾಲಯಕ್ಕೆ 600 ಕೋಟಿ ರೂಪಾಯಿ ಅನುದಾನ ಬೇಕಾಗಿದೆ. ಆರಂಭಿಕವಾಗಿ 150 ಕೋಟಿಯನ್ನು ಈ‌ ಬಜೆಟ್ ನಲ್ಲಿ ನೀಡುತ್ತಾರೆ ಎನ್ನುವ ಭರವಸೆ ಇತ್ತು. ಆದರೆ ನೀಡಿಲ್ಲ, ರಾಯಚೂರು ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನಿಯಮಬಾಹಿರ‌ ಬಳಕೆ‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ರಾಯಚೂರಿಗೆ ಬರಬೇಕಾದ ಐಐಟಿಯು ತಪ್ಪಿದಾಗ ಮುಂದೆ ಏಮ್ಸ್ ನೀಡುವುದಾಗಿ ಹೇಳಿ ಈಗ ಮತ್ತೆ ಹುಬ್ಬಳ್ಳಿಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ವಿ ನಾಯಕ ಹಾಗೂ ಮಾಜಿ ಎಂಎಲ್​ಸಿ ಎನ್ ಎಸ್ ಬೋಸರಾಜ್ ಆರೋಪಿಸಿದ್ದಾರೆ.

ಈ ಮಧ್ಯೆ ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸರಕಾರ ಬಂದರೆ 5ಎ ಕಾಲುವೆ ಮಂಜೂರು ಮಾಡುವುದಾಗಿ ಹೇಳಿಕೆ ಬಿಜೆಪಿ ನೀಡಿದ್ದು, ಈಗ ಈ ಹೇಳಿಕೆಗೆ ಬದ್ದವಾಗಿಲ್ಲ. ಇದರಿಂದಾಗಿ 5ಎ ಕಾಲುವೆ ಹೋರಾಟಗಾರರು ಬಿಜೆಪಿ ವಿರುದ್ದ ಮತ ಚಲಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
Published by:HR Ramesh
First published: