• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Maski By Election | ಮಸ್ಕಿ ವಿಧಾನಸಭೆ ಉಪಚುನಾವಣೆ; ಅಭ್ಯರ್ಥಿಗಳಿಗೆ ಕಾಲುವೆ ಹೋರಾಟದ ಬಿಸಿ

Maski By Election | ಮಸ್ಕಿ ವಿಧಾನಸಭೆ ಉಪಚುನಾವಣೆ; ಅಭ್ಯರ್ಥಿಗಳಿಗೆ ಕಾಲುವೆ ಹೋರಾಟದ ಬಿಸಿ

ನಾರಾಯಣಪುರ ಬಲದಂಡೆ ನಾಲೆ 5ಎ ಕಾಲುವೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ.

ನಾರಾಯಣಪುರ ಬಲದಂಡೆ ನಾಲೆ 5ಎ ಕಾಲುವೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ.

ಈಗ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ, ಏಪ್ರಿಲ್ 17 ರಂದು ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಲುವೆ ವ್ಯಾಪ್ತಿಯಲ್ಲಿ ಸರಿ ಸುಮಾರು 40 ಸಾವಿರ ಜನರು ಮತದಾರರು ಯಾರ ಕಡೆ ಎಂಬುವುದು ಅಭ್ಯರ್ಥಿಗಳಿಗೆ ತಲೆ ಬಿಸಿಯಾಗಿದೆ.

  • Share this:

ರಾಯಚೂರು: ನಮ್ಮಲ್ಲಿ ಬಡತನವಿದೆ, ನಮ್ಮ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿ ಎಂದು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ, ಈ ಮುಷ್ಕರದ ಬಿಸಿ ಮುಂಬರುವ ಮಸ್ಕಿ ಬೈ ಎಲೆಕ್ಷನ್ ಹಾಗೂ ಮತ್ತೆ ಚುನಾವಣೆ ಘೋಷಣೆಯಾಗಿರುವ ಗ್ರಾಮ ಪಂಚಾಯತಿ ಚುನಾವಣೆಯ ಮೇಲೆ ಬೀರಲಿದೆ. ಅಭ್ಯರ್ಥಿಗಳಿಗೆ ಈ ಹೋರಾಟ ತೀವ್ರತೆಯು ತಲೆ ಬಿಸಿ ಮಾಡಿದೆ. ಮಸ್ಕಿ ತಾಲೂಕಿನ 110 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಾರಾಯಣಪುರ ಬಲದಂಡೆ ನಾಲೆಯಿಂದ 5ಎ ಕಾಲುವೆ ನಿರ್ಮಿಸಿ, ನಮ್ಮ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿ. ನಮ್ಮ ಜನ ಹೊಟ್ಟೆಪಾಡಿಗಾಗಿ ಗುಳೇ ಹೋಗುವಂಥ ಸ್ಥಿತಿ ಇದೆ, ಸುಮಾರು 12 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ನಮ್ಮ ಬೇಡಿಕೆ ಈಡೇರಿಕೆಯಾಗಿಲ್ಲ. ಈ ಕಾರಣಕ್ಕಾಗಿ 5ಎ ಕಾಲುವೆಯಾಗುವವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಕಾಲುವೆ ವ್ಯಾಪ್ತಿಯ ರೈತರು ಕಳೆದ 119 (ಮಾರ್ಚ 18ಕ್ಕೆ) ದಿನದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪಾಮನಕಲ್ಲೂರಿನ‌ ಹಾದಿ ಬಸವೇಶ್ವರ ದೇವಸ್ಥಾನದ ಬಳಿ ನಡೆಸುತ್ತಿದ್ದಾರೆ.


ಧರಣಿ ಕೈ ಬಿಡಿ ಎಂದು ಜನಪ್ರತಿನಿಧಿಗಳು ಮನವಿ ಮಾಡಿದರು,  ಬೆಂಗಳೂರಿನಲ್ಲಿ ಸಭೆ ಕರೆದಿದ್ದರು, ಈ ಕಾಲುವೆ ನಿರ್ಮಿಸಲು ವಾಟರ್ ಅಲೋಕೆಷನ್ ಆಗಬೇಕು. ತಾಂತ್ರಿಕ ತೊಂದರೆ ಇದೆ. ಈ ಕಾರಣಕ್ಕಾಗಿ ಇಲ್ಲಿಗೆ ಪರ್ಯಾಯವಾಗಿ ವಟಗಲ್ ಬಸವೇಶ್ವರ ಏತ ನೀರಾವರಿ, ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ ಎರಡನೆಯ ಹಂತದ ಕಾಮಗಾರಿಗಳಿಂದ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಮನವಿ ಮಾಡಿಕೊಂಡರೂ ರೈತರು ಈ ಯೋಜನೆಗಳಿಂದ ನಮ್ಮ ಭಾಗಕ್ಕೆ ನೀರಾವರಿ ಅಸಾಧ್ಯ. ಅದಕ್ಕಾಗಿ ನಮಗೆ 5ಎ ಕಾಲುವೆ ಬೇಕೆಂದು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.


ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿಯೂ ಪ್ರತಾಪಗೌಡ ಪಾಟೀಲ ಶಾಸಕರಾಗಿದ್ದಾರೆ. ಅವರು ಕಾಲುವೆ ನಿರ್ಮಿಸಲು ಕಾಳಜಿ ವಹಿಸಿಲ್ಲ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ. ಈಗ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ, ಏಪ್ರಿಲ್ 17 ರಂದು ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಲುವೆ ವ್ಯಾಪ್ತಿಯಲ್ಲಿ ಸರಿ ಸುಮಾರು 40 ಸಾವಿರ ಜನರು ಮತದಾರರು ಯಾರ ಕಡೆ ಎಂಬುವುದು ಅಭ್ಯರ್ಥಿಗಳಿಗೆ ತಲೆ ಬಿಸಿಯಾಗಿದೆ.


ಇದನ್ನು ಓದಿ: Belagavi By Election | ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಚಿಕ್ಕೋಡಿ ನಾಯಕರ ಕಣ್ಣು; ಟಿಕೆಟ್​ಗಾಗಿ ತೆರೆಮರೆಯ ಕಸರತ್ತು


ಈಗಾಗಲೇ ಹೋರಾಟದಲ್ಲಿ ರಾಜಕೀಯ ಪ್ರವೇಶವಾಗಿ ಕಾಂಗ್ರೆಸ್ ಬೆಂಬಲಿತರು ಪ್ರತಾಪಗೌಡರ ವಿರೋಧಿಸಿದರೆ, ಬಿಜೆಪಿ ಬೆಂಬಲಿತರು ಪ್ರತಾಪಗೌಡರ ಪರವಾಗಿದ್ದಾರೆ. ಕ್ಷೇತ್ರದಲ್ಲಿ ಶೇ 20 ರಷ್ಟು ಮತದಾರರು ಯಾರ ಪರವಾಗಿ, ಯಾರ ವಿರುದ್ದವಾಗಲಿವೆ ಎಂಬುವುದು ಚರ್ಚೆಯಾಗುತ್ತಿದೆ. ಈ ಮಧ್ಯೆ ಇದೇ ನಾಲೆ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೂ ದಿನಾಂಕ ಘೋಷಣೆಯಾಗಿದೆ, ಮಾರ್ಚ್ 29ರಂದು ಚುನಾವಣೆ ನಡೆಯಲಿದೆ, ಡಿಸೆಂಬರ್ 27 ರಂದು ನಡೆಯಬೇಕಾಗಿದ್ದ ಚುನಾವಣೆಗೆ ಪಾಮನಕಲ್ಲೂರು, ಅಂಕುಶದೊಡ್ಡಿ, ವಟಗಲ್ ಹಾಗು ಅಮಿನಗಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ 34 ಗ್ರಾಮಗಳ 72 ಸ್ಥಾನಗಳಿಗೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಈ ಕಾರಣಕ್ಕಾಗಿ ಇಲ್ಲಿ ಚುನಾವಣೆ ನಡೆದಿರಲಿಲ್ಲ, ಆದರೆ ಈಗ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಈ ಬಾರಿ ಗ್ರಾಮಸ್ಥರಲ್ಲಿ ಚುನಾವಣೆ ಸ್ಪರ್ಧಿಸುವ ಬಗ್ಗೆ ಗೊಂದಲ ಉಂಟಾಗಿದೆ, ಕೆಲವರು ಚುನಾವಣೆ ನಡೆಸಲು ಕೆಲವರು ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಈಗ ಗ್ರಾಮ ಪಂಚಾಯತಿ ಚುನಾವಣೆ ನಡೆಯುವುದು ಖಚಿತವಾಗಿದೆ.


ಆದರೆ 5ಎ ಕಾಲುವೆ ಹೋರಾಟಗಾರರು ನಮ್ಮ ಪರವಾಗಿರುವವರು ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ 5ಎ ಕಾಲುವೆಯ ಹೋರಾಟ ಬಿಸಿ ಮಸ್ಕಿ ಬೈ ಎಲೆಕ್ಷನ್ ಹಾಗು ಗ್ರಾಮ ಪಂಚಾಯತಿ ಚುನಾವಣೆಯ ಮೇಲೆ ಎಫೆಕ್ಟ್ ಆಗಲಿದೆ, ಆದರೆ ಯಾವ ರೀತಿ ಎಂಬುವುದನ್ನು ಕಾದು ನೋಡಬೇಕು.

First published: