By Election 2021: ಮಸ್ಕಿ ಬೈ ಎಲೆಕ್ಷನ್: ಪ್ರಚಾರ ಕಣಕ್ಕೆ ಬಿ.ವೈ. ವಿಜಯೇಂದ್ರ ಎಂಟ್ರಿ!

ಇಂದು ಮುಂಜಾನೆ ಮಟ್ಟೂರಿನಿಂದ ಪ್ರಚಾರ ಆರಂಭಿಸಿದ ವಿಜಯೇಂದ್ರ ಅಲ್ಲಿಯ ಶ್ರೀರಾಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮುಖಾಂತರ ಪ್ರಚಾರ ಆರಂಭಿಸಿದರು.

ಬಿ.ವೈ. ವಿಜಯೇಂದ್ರ.

ಬಿ.ವೈ. ವಿಜಯೇಂದ್ರ.

  • Share this:
ರಾಯಚೂರು: ಪ್ರತಾಪಗೌಡ ಪಾಟೀಲರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಚುನಾವಣೆಯ ಅಬ್ಬರ, ಹೇಗಾದರೂ ಮಾಡಿ ಬಿಜೆಪಿ ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿಗರು ಸಿಎಂ ಪುತ್ರ ವಿಜಯೇಂದ್ರ ಅವರನ್ನು ಮಸ್ಕಿಗೆ ಉಸ್ತುವಾರಿಯಾಗಿ ನೇಮಿಸಿದೆ. ಇಂದಿನಿಂದ ವಿಜಯೇಂದ್ರ ವಿಜಯ ದುಂದುಬಿ ಹೆಸರಿನಲ್ಲಿ ಪ್ರಚಾರ ಆರಂಭಿಸಿದರು. ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟು 10 ಜನ ಅಭ್ಯರ್ಥಿ ಗಳಿಂದ 13 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನ ಗೌಡ ತುರ್ವಿಹಾಳರ ಸಹೋದರ ಸಿದ್ದಲಿಂಗಪ್ಪ ಸಹ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದವರ ಎಲ್ಲಾ ನಾಮಪತ್ರಗಳು ಕ್ರಮ ಬದ್ದವಾಗಿರುವದರಿಂದ ಸಿದ್ದಲಿಂಗಪ್ಪ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದು ಇಂದು ಬಿಜೆಪಿ ಪ್ರಚಾರಕ್ಕೆ ಮಸ್ಕಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಗೇಮ್ ಚೆಂಜರ್ ಎಂದು ಖ್ಯಾತಿ ಪಡೆದಿರುವ, ಕೆ ಆರ್ ಪೇಟೆ ಹಾಗು ಸಿರಾದಲ್ಲಿ ಬಿಜೆಪಿ ಗೆಲುವಿನ ರುವಾರಿಯಾಗಿರುವ ಸಿಎಂ ಪುತ್ರ ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಅವರು ಮುದಗಲ್ ನಲ್ಲಿ ಮನೆ ಮಾಡಿಕೊಂಡಿದ್ದು ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿದ್ದು ಪ್ರಚಾರ ಮಾಡಲಿದ್ದಾರೆ. ಇಂದು ಮುಂಜಾನೆ ಮಟ್ಟೂರಿನಿಂದ ಪ್ರಚಾರ ಆರಂಭಿಸಿದ ವಿಜಯೇಂದ್ರ ಅಲ್ಲಿಯ ಶ್ರೀರಾಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮುಖಾಂತರ ಪ್ರಚಾರ ಆರಂಭಿಸಿದರು. ನಂತರ ಕುಣೆಕೆಲ್ಲೂರು, ಸಂತೆಕೆಲ್ಲೂರು, ಅಂಕುಶದೊಡ್ಡಿಯಲ್ಲಿ ಪ್ರಚಾರ ನಡೆಸಿ ಮಸ್ಕಿಯಲ್ಲಿ ಬೈಕ್ ರ‌್ಯಾಲಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು "ಮಸ್ಕಿಯಲ್ಲಿ ಪ್ರತಾಪಗೌಡ ಗೆಲ್ಲುವುದು ಶತಸಿದ್ದ. ಅವರ ತ್ಯಾಗದಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ಅವರ ತ್ಯಾಗವನ್ನು ಎಂದು ಮರೆಯುವುದಿಲ್ಲ. ರಮೇಶ ಜಾರಕಿಹೊಳಿ‌ ವಿರುದ್ಧದ ಸಿಡಿ ಪ್ರಕರಣ ಈ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದರು.

ಇದೇ ವೇಳೆ ವಿಜಯೇಂದ್ರ ಮಟ್ಟೂರಿನಲ್ಲಿ ಬಸನಗೌಡರೊಂದಿಗೆ ಕಾಂಗ್ರೆಸ್ ಸೇರಿರುವ ಕಾರ್ಯಕರ್ತರ ಬಿಜೆಪಿಗೆ ಬರುವಂತೆ ಮನವೊಲಿಸಲು ಯತ್ನಿಸಿದರು. ಕಾರ್ಯಕರ್ತರು ನಮಗೆ ಯಡಿಯೂರಪ್ಪ ಹಾgU ನಿಮ್ಮ ಬಗ್ಗೆ ಅಭಿಮಾನವಿದೆ, ಆದರೆ ಈ ಚುನಾವಣೆಯಲ್ಲಿ ನಾವು ಪ್ರತಾಪಗೌಡರ ಪರವಾಗಿ ಕೆಲಸ ಮಾಡುವುದಿಲ್ಲ ಎಂದರು. ಶ್ರೀರಾಮುಲು ಪ್ರಚಾರಃ ಒಂದು ಕಡೆ ವಿಜಯೇಂದ್ರ ಪ್ರಚಾರ ಆರಂಭಿಸಿದರೆ ಕಳೆದ ಮೂರು ದಿನಗಳಿಂದ ಸಚಿವ ಶ್ರೀರಾಮುಲು ಮಸ್ಕಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

ಇದನ್ನೂ ಓದಿ: ಚುನಾವಣೆಗಾಗಿ ಬಿಜೆಪಿಯಿಂದ ಆಧಾರ್​ ಮಾಹಿತಿ ಕಳವು; ತನಿಖೆ ನಡೆಸುವಂತೆ ಪ್ರಾಧಿಕಾರಕ್ಕೆ ಆದೇಶಿಸಿದ ಹೈಕೋರ್ಟ್​

ಇಂದು ಬಸಾಪುರ, ಹಾಲಾಪುರ ಸೇರಿದಂತೆ ಹಲವು ಕಡೆ ಪ್ರಚಾರ ಮಾಡಿದ ಅವರು ಪ್ರತಾಪಗೌಡ ಈ ಹಿಂದೆ 10 ವರ್ಷ ಕಾಂಗ್ರೆಸ್ ಶಾಸಕರಾಗಿದ್ದರು. ಆಗ ಸರಕಾರ ನಡೆಸುತ್ತಿದ್ದವರು ಪ್ರತಾಪಗೌಡರಿಗೆ ಸಹಕಾರ ನೀಡಿಲ್ಲ, ಈ ಕಾರಣಕ್ಕಾಗಿಯೇ ಪ್ರತಾಪಗೌಡ ಈಗ ಬಿಜೆಪಿಗೆ ಮರಳಿದ್ದಾರೆ. ಇದರಿಂದಾಗಿ ಈಗ ಅಭಿವೃದ್ದಿ ಪರ್ವ ನಡೆದಿದೆ ಎಂದರು.

ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮುಲು ಈಶ್ವರಪ್ಪ ಯಡಿಯೂರಪ್ಪ ಪತ್ರ ಬರೆದಿದ್ದು ಇದು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡುತ್ತಾರೆ, ಸಿದ್ದರಾಮಯ್ಯ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಿಕೆ ಮಾಡಬೇಕೆಂದು ಹೇಳುತ್ತಿದ್ದಾರೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿದೆ ಎಂದು ಪ್ರಶ್ನಿಸಿದರು. ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಹಾಗು ಮುಖಂಡರು ಕ್ಷೇತ್ರದಾದ್ಯಂತ ತಂಡ ತಂಡವಾಗಿ ಪ್ರಚಾರ ಮಾಡುತ್ತಿದ್ದು, ಮಸ್ಕಿ ಚುನಾವಣೆ ಕಾವು, ರಾಯಚೂರಿನ ಬಿಸಿಲಿನಗಿಂತ ಅಧಿಕವಾಗಿದೆ.
Published by:MAshok Kumar
First published: