ಮಸ್ಕಿ ಉಪಚುನಾವಣೆ; ನೀರಾವರಿಯ ದಾಳ ಉರುಳಿಸುತ್ತಿರುವ ಬಿಜೆಪಿ!

ಬಿಜೆಪಿಯು ಸಹ ನೀರಾವರಿ ಜಪ ಮಾಡುತ್ತಿದೆ. ಇತ್ತೀಚಿನ ಶಿರಾ ಉಪಚುನಾವಣೆಯಲ್ಲಿ ಮದಲೂರು ಕೆರೆ ನೀರು ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಹಕಾರಿಯಾಗಿತ್ತು. ಅದೇ ರೀತಿಯ ನೀರಾವರಿ ವಿಷಯವನ್ನು ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ.

ಮಸ್ಕಿ ತಾಲೂಕು ನೀರಾವರಿಗೆ ಆಗ್ರಹಿಸಿ ರೈತರ ಹೋರಾಟ.

ಮಸ್ಕಿ ತಾಲೂಕು ನೀರಾವರಿಗೆ ಆಗ್ರಹಿಸಿ ರೈತರ ಹೋರಾಟ.

  • Share this:
ರಾಯಚೂರು: ಬಿಜೆಪಿ ನೆಲೆಯೇ ಇಲ್ಲದ ಶಿರಾದಲ್ಲಿ ಅಭ್ಯರ್ಥಿ ಗೆಲ್ಲಲು ಅಲ್ಲಿಯ ಮದಲೂರು ಕೆರೆ ತುಂಬಿಸುವ ಯೋಜನೆಯನ್ನು ಸಿಎಂ ಘೋಷಣೆ ಮಾಡಿದ್ದು ಮುಖ್ಯ ಕಾರಣ ಎನ್ನಲಾಗಿದೆ. ಅದೇ ರೀತಿ ಮಸ್ಕಿ ಬೈ ಎಲೆಕ್ಷನ್ ನಲ್ಲಿಯೂ ಇಲ್ಲಿಯ ನೀರಾವರಿ ಸಮಸ್ಯೆಯನ್ನೇ ದಾಳವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಾಗಿದೆ.

ಮಸ್ಕಿಯಲ್ಲಿ ಮುಖ್ಯವಾಗಿ ನಾರಾಯಣಪುರ ಬಲದಂಡೆ ನಾಲೆಯಿಂದ 5 ಎ ಕಾಲುವೆ ನಿರ್ಮಾಣ, 5 ಎ ಕಾಲುವೆಯಿಂದ ಮಸ್ಕಿ, ಮಾನವಿ ತಾಲೂಕಿನಲ್ಲಿ ಒಟ್ಟು 1.72 ಲಕ್ಷ ಎಕರೆ ಪ್ರದೇಶ ನೀರಾವರಿಯಾಗಲಿದೆ. 110 ಹಳ್ಳಿಗಳ ಭೂಮಿಗೆ ನೀರುಣಿಸುವ ಯೋಜನೆಯಾಗಿದೆ. ಈ ಕಾಲುವೆಗೆ ಈಗಾಗಲೇ ಸಿದ್ದತೆ ನಡೆದಿದೆ. ಈ ಕಾಲುವೆ ಮುಖ್ಯವಾಗಿ 13 ಕಿಮೀ ದೂರ ಗುಡ್ಡ ಕೆಳಗೆ ಟನಲ್ ಮುಖಾಂತರ ಕಾಲುವೆ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ 5 ಎ ಕಾಲುವೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಈ ಕಾಲುವೆಯನ್ನು ನಿರ್ಮಿಸಿ ನೀರಾವರಿ ಇಲ್ಲದ ಮಸ್ಕಿ ತಾಲೂಕಿನಲ್ಲಿ ಒಣಭೂಮಿ‌ ಪ್ರದೇಶದ ಭೂಮಿಗೆ ನೀರಾವರಿ ಕಲ್ಪಿಸಿ ಎಂದು ಈ ಭಾಗದ ರೈತರು ಹೋರಾಟ ಮಾಡುತ್ತಲೆ ಬಂದಿದ್ದಾರೆ. ಈಗ ಮತ್ತೆ ಹೋರಾಟ ಆರಂಭಿಸಿದ್ದಾರೆ.

ಈ ಮಧ್ಯೆ ನಂದವಾಡಗಿ ಏತ ನೀರಾವರಿಯ ಬಿ ಸ್ಕೀಂ ನಲ್ಲಿ ಮಸ್ಕಿ ತಾಲೂಕಿನ 85 ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಾವರಿಯಾಗಲಿದೆ. ಇತ್ತೀಚಿಗೆ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದ್ದಾರೆ. ನಂದವಾಡಗಿ ಏತ ನೀರಾವರಿಯು ಮೈಕ್ರೋ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯಿಂದ 5 ಎ ಕಾಲುವೆ ಬರುವ ವ್ಯಾಪ್ತಿಯ 55 ಹಳ್ಳಿಗಳು ಒಳಪಡುತ್ತವೆ. ಇದರಿಂದ 5 ಎ ಕಾಲುವೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಆದರೆ ಮೈಕ್ರೋ ನೀರಾವರಿಯು ಪಕ್ಕದ ಹುನಗುಂದ ತಾಲೂಕಿನಲ್ಲಿ ಯಶಸ್ವಿಯಾಗಿಲ್ಲ. ಈ ಕಾರಣಕ್ಕಾಗಿ 5 ಎ ಕಾಲುವೆಯ ನೀರಾವರಿ ಮಾಡಬೇಕೆನ್ನುವುದು ರೈತರ ಆಗ್ರಹವಾಗಿದೆ.

ಈ ಮಧ್ಯೆ ಮಸ್ಕಿ ನಾಲಾ ಹಾಗು ಕನಕನಾಲಾ ಯೋಜನೆಗಳ ಕೆರೆಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ತುಂಬಿಸುವ ಯೋಜನೆಯು ಸಹ ನನೆಗುದಿಗೆ ಬಿದ್ದಿದೆ. ಈ ನೀರಾವರಿ ಯೋಜನೆಗಳೆ ಈಗ ಮಸ್ಕಿ ಬೈ ಎಲೆಕ್ಷನ್ ನ ಮುಖ್ಯ ಅಜೆಂಡಾಗಳಾಗಿವೆ. ಪ್ರತಾಪಗೌಡ ಶಾಸಕರಾಗಿ 12 ವರ್ಷಗಳಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಿಲ್ಲ ಎಂದು ರೈತರು ಹಾಗು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಈ ನೀರಾವರಿ ವಿಷಯಗಳನ್ನೇ ಪ್ರಸ್ತಾಪಿಸಲು ಮುಂದಾಗಿದೆ.

ಇದನ್ನು ಓದಿ: ನಿತೀಶ್ ಕುಮಾರ್ ಮತ್ತೆ ಬಿಹಾರ ಸಿಎಂ ಆಗುತ್ತಾರೋ ಇಲ್ಲವೋ; ನವೆಂಬರ್ 15ರಂದು ನಿರ್ಧಾರ

ಬಿಜೆಪಿಯು ಸಹ ನೀರಾವರಿ ಜಪ ಮಾಡುತ್ತಿದೆ. ಇತ್ತೀಚಿನ ಶಿರಾ ಉಪಚುನಾವಣೆಯಲ್ಲಿ ಮದಲೂರು ಕೆರೆ ನೀರು ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಹಕಾರಿಯಾಗಿತ್ತು. ಅದೇ ರೀತಿಯ ನೀರಾವರಿ ವಿಷಯವನ್ನು ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ. ಇಂದು ಮಸ್ಕಿಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಸಹ 5 ಎ ಕಾಲುವೆ ಹಾಗು ಇತರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮಸ್ಕಿಯಿಂದ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಂದ ಮಂಜೂರಾತಿ ಕೊಡಿಸಿ ಬೇಗ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.

ಉಪಚುನಾವಣೆಯಲ್ಲಿ ಮಸ್ಕಿ ಭಾಗದ ನೀರಾವರಿ ಯೋಜನೆಗಳೇ ಮುಖ್ಯ ಅಜೆಂಡಾ ಆಗಿದ್ದು, ಚುನಾವಣೆಯ ನಂತರ ಇಲ್ಲಿಯ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿ ಎಂದು ಜನತೆ ಆಗ್ರಹಿಸಿದ್ದಾರೆ.
Published by:HR Ramesh
First published: