ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ಆಸ್ತಿ 13 ವರ್ಷದಲ್ಲಿ 5 ಕೋಟಿ ರೂಪಾಯಿ ಹೆಚ್ಚಳ!

ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಬಸನಗೌಡ ತುರ್ವಿಹಾಳ ಬಳಿ ಒಟ್ಟು 1.45 ಕೋಟಿ ಸ್ಥಿರಾಸ್ತಿ ಇದೆ. 19.13 ಎಕರೆ ತಮ್ಮ ಹೆಸರಿನಲ್ಲಿ, 5.34 ಎಕರೆ ಪತ್ನಿ ಹೆಸರಿನಲ್ಲಿ ಭೂಮಿ ಇದೆ. 150 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಇದೆ. 2.75 ಲಕ್ಷ ರೂಪಾಯಿ ತುರ್ವಿಹಾಳ ಯುಕೋ ಬ್ಯಾಂಕಿನಲ್ಲಿ ಸಾಲ, 3.62 ಲಕ್ಷ ರೂಪಾಯಿ ಬೆಳೆ ಸಾಲ, ಮಹೇಂದ್ರ ಫೈನಾನ್ಸ್ ನಲ್ಲಿ 7 ಲಕ್ಷ ರೂಪಾಯಿ ಸಾಲವಿದೆ.

ನಾಮಪತ್ರ ಸಲ್ಲಿಸುತ್ತಿರುವ ಪ್ರತಾಪಗೌಡ

ನಾಮಪತ್ರ ಸಲ್ಲಿಸುತ್ತಿರುವ ಪ್ರತಾಪಗೌಡ

  • Share this:
ರಾಯಚೂರು: ಪ್ರತಾಪಗೌಡ ಪಾಟೀಲರ ರಾಜೀನಾಮೆಯಿಂದ ತೆರವಾದ ಮಸ್ಕಿ ವಿಧಾನಸಭೆ ಉಪಚುನಾವಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಪ್ರತಾಪಗೌಡ ಪಾಟೀಲ ಹಾಗು ಕಾಂಗ್ರೆಸ್ ನ ಬಸನಗೌಡ ಪಾಟೀಲ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಇಬ್ಬರೂ  ಕೋಟ್ಯಧೀಶರಾಗಿದ್ದಾರೆ, ಮಸ್ಕಿಯಿಂದ ಮೂರು ಬಾರಿ ಶಾಸಕರಾಗಿರುವ ಪ್ರತಾಪಗೌಡ ಪಾಟೀಲ ಈಗ 5.92 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು 2008ರಲ್ಲಿ 94 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದರು. ಇಬ್ಬರು ಅಭ್ಯರ್ಥಿಗಳು ಬುಧುವಾರ ಸಾಂಕೇತಿಕ ವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಈ‌ ಸಂದರ್ಭದಲ್ಲಿ ಅವರ ಆಸ್ತಿಯನ್ನು ಚುನಾವಣಾ ಆಯೋಗಕ್ಕೆ ಘೋಷಣೆ ಮಾಡಿ ಅಫಿಡವಿಟ್ ಸಲ್ಲಿಸಿದ್ದಾರೆ.

ಮಸ್ಕಿ ವಿಧಾನಸಭಾ ಕ್ಷೇತ್ರವು 2008ರಲ್ಲಿ ರಚನೆಯಾಗಿದ್ದು, ಪರಿಶಿಷ್ಟ ವರ್ಗಕ್ಕೆ ಮೀಸಲು ಕ್ಷೇತ್ರವಾಗಿದೆ. 2008 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪ್ರತಾಪಗೌಡ ಪಾಟೀಲ, 2013 ಹಾಗೂ 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. 2019 ರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಈಗ ಮತ್ತೆ ಚುನಾವಣೆ ನಡೆಯುತ್ತಿದೆ. ಪ್ರತಾಪಗೌಡ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯ ಅಭ್ಯರ್ಥಿಯಾಗಿ ಬುಧುವಾರ ತಮ್ಮ ಉಮೇದುವಾರಿಕೆಯನ್ನು ಸಾಂಕೇತಿಕ ವಾಗಿ ಸಲ್ಲಿಸಿದ್ದು ಮಾರ್ಚ್ ೨೯ ರಂದು ರಾಜ್ಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಇನ್ನೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಬುಧವಾರ ಸಲ್ಲಿಸಿದ ನಾಮಪತ್ರದೊಂದಿಗೆ ತಮ್ಮ ಹಾಗು ಅವರ ಪತ್ನಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು ಒಟ್ಟು 5.92 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಅವರು 2008 ರಲ್ಲಿ ಸ್ಪರ್ಧಿಸಿದಾಗ 94 ಲಕ್ಷ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಹತ್ತು ವರ್ಷದ ನಂತರ 2018 ರ ಚುನಾವಣೆಯಲ್ಲಿ ಒಟ್ಟು 4.92 ಕೋಟಿ ಆಸ್ತಿ ಇದೆ ಎಂದು ತಿಳಿಸಿದ್ದರು.ಈಗ 33 ಲಕ್ಷ ರೂಪಾಯಿ ಸಾಲವಿದ್ದರೆ 2008ರಲ್ಲಿ 17.56 ಲಕ್ಷ ರೂಪಾಯಿ ಸಾಲವಿತ್ತು. 2018 ರಲ್ಲಿ 38.61 ರಲ್ಲಿ ಲಕ್ಷ ರೂಪಾಯಿ ಸಾಲವಿತ್ತು. ಈಗ ತಮ್ಮ ಹೆಸರಿನಲ್ಲಿ 30.33 ಎಕರೆ ಕೃಷಿ ಭೂಮಿ ಇದೆ, ಪತ್ನಿಯ ಹೆಸರಿನಲ್ಲಿ 26 ಎಕರೆ ಭೂಮಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

2008  ಹಾಗು 2018 ರಲ್ಲಿ ಸಹ ಇಷ್ಟೇ ಭೂಮಿ ಇದೆ. ಆದರೆ ಅವರ ಪತ್ನಿ ಹೆಸರಿನಲ್ಲಿ 2008 ಹಾಗು 2018ರಲ್ಲಿ 6 ಎಕರೆ ಮತ್ತು ಪುತ್ರನ ಹೆಸರಿನಲ್ಲಿ 12 ಎಕರೆ ಭೂಮಿ ಇದೆ ಎಂದು ತೋರಿಸಿದ್ದು, ಈಗ ಮಗನ ಆಸ್ತಿಯನ್ನು ತಮ್ಮ ಅಫಿಡವಿಟ್ ನಲ್ಲಿ ತೋರಿಸಿಲ್ಲ. ಪತ್ನಿ ಹೆಸರಿನಲ್ಲಿ ಹೆಚ್ಚುವರಿಯಾಗಿ 20 ಎಕರೆ ಭೂಮಿ ತೋರಿಸಿದ್ದಾರೆ. ಇನ್ನೂ ಚಿನ್ನದ ವಿಷಯಕ್ಕೆ ಬಂದರೆ ಈಗ 275  ಗ್ರಾಂ ಚಿನ್ನ ಇದೆ. ಆದರೆ 2008 ಹಾಗು 2018 ರಲ್ಲಿ ಅವರ ಬಳಿ 250 ಗ್ರಾಂ ಚಿನ್ನವಿತ್ತು, ಇನ್ನೂ ಪತ್ನಿ ಬಳಿಯಲ್ಲಿ ಈಗ 650 ಗ್ರಾಂ ಚಿನ್ನವಿದೆ. 2008 ರಲ್ಲಿ 500 ಗ್ರಾಂ, 2018 ರಲ್ಲಿ 245 ಗ್ರಾಂ ಚಿನ್ನವಿದೆ. ಪ್ರತಾಪಗೌಡರ ಬಳಿ ಈಗ 67 ಲಕ್ಷ ರೂಪಾಯಿಯ 3 ಕಾರುಗಳಿವೆ, 2008 ರಲ್ಲಿ 1 ಕಾರು, 2018 ರಲ್ಲಿ ಎರಡು ಕಾರುಗಳಿದ್ದವು.

ಇನ್ನೂ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಬಸನಗೌಡ ತುರ್ವಿಹಾಳ ಬಳಿ ಒಟ್ಟು 1.45 ಕೋಟಿ ಸ್ಥಿರಾಸ್ತಿ ಇದೆ. 19.13 ಎಕರೆ ತಮ್ಮ ಹೆಸರಿನಲ್ಲಿ, 5.34 ಎಕರೆ ಪತ್ನಿ ಹೆಸರಿನಲ್ಲಿ ಭೂಮಿ ಇದೆ. 150 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಇದೆ. 2.75 ಲಕ್ಷ ರೂಪಾಯಿ ತುರ್ವಿಹಾಳ ಯುಕೋ ಬ್ಯಾಂಕಿನಲ್ಲಿ ಸಾಲ, 3.62 ಲಕ್ಷ ರೂಪಾಯಿ ಬೆಳೆ ಸಾಲ, ಮಹೇಂದ್ರ ಫೈನಾನ್ಸ್ ನಲ್ಲಿ 7 ಲಕ್ಷ ರೂಪಾಯಿ ಸಾಲವಿದೆ. ಮಸ್ಕಿ ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದು ಇಬ್ಬರು ಕೋಟ್ಯಾಧೀಶರು ಪೈಪೋಟಿ ನೀಡುತ್ತಿದ್ದಾರೆ.
Published by:HR Ramesh
First published: