ಯಲಹಂಕ: ಇಷ್ಟು ದಿನ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಾ ಇದ್ದದ್ದು ಹೆಲ್ಮೆಟ್, ಸಿಗ್ನಲ್ ಜಂಪಿಂಗ್, ಡಿಎಲ್, ಇನ್ಷೂರೆನ್ಸ್, ರಾಶ್ ಡ್ರೈವಿಂಗ್, ಓವರ್ ಸ್ಪೀಡ್, ಸೀಟ್ ಬೆಲ್ಟ್ ಇವುಗಳಿಂದಲೇ. ಆದರೆ, ಈಗ ಮಾಸ್ಕ್ ಇಲ್ಲದೆ ಡ್ರೈವ್ ಮಾಡಿದರೆ ಅಥವಾ ಹೊರಗೆ ಬಂದರೆ ದಂಡ ಕಟ್ಟಿಟ್ಟ ಬುತ್ತಿ.
ಪರೋಪಕಾರಿ ಜನರು ಈಗೆಲ್ಲಾ ಕ್ಯಾನ್ಸರ್ ಬಂದರೂ ಹೆದರಲ್ಲ. ಕನಿಷ್ಠ ಸೌಜನ್ಯ ತೋರಿಸಿ ಬ್ರೆಡ್, ಬನ್, ಹಣ್ಣು ನೀಡಿ ಮಾತಾಡಿಸ್ತಾರೆ. ಆದರೆ, ಈ ಮಹಾಮಾರಿ ಕೊರೋನಾ ಅಂದರೆ ಎರಡು ಮೀಟರ್ ಅಂತರ ಇರಲಿ, ಆ ಏರಿಯಾದಲ್ಲೇ ಯಾರೂ ಓಡಾಡಲ್ಲ. ಅದರ ಜೊತೆಗೆ ಕೊರೋನಾ ಸೊಂಕು ತಗುಲಿದೆ ಅಂದ್ರೆ ಮಾನದ ಪ್ರಶ್ನೆ, ಅಸ್ಪೃಶ್ಯರ ರೀತಿ ನೋಡ್ತಾರೆ. ಸಾರ್ವಜನಿಕರ ಮಾನ-ಪ್ರಾಣ ತಕ್ಕಮಟ್ಟಿಗೆ ಕಾಪಾಡುತ್ತಾ ಇರೋದು ಇದೇ ಮಾಸ್ಕ್.
ಇದಕ್ಕಾಗಿ ಝೋನ್ ಪ್ರಮುಖ ತಹಶೀಲ್ದಾರ್, ಜಂಟಿ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದಾರೆ. ಮಾರ್ಷಲ್ಗಳ ತಂಡದೊಂದಿಗೆ ‘ಮಾಸ್ಕ್ ಡ್ರೈವ್’ ಮೂಲಕ ದಂಡ ವಸೂಲಿ ಮಾಡಲಾಗುತ್ತಿದೆ. ಸ್ವೈಪಿಂಗ್ ಯಂತ್ರದ ಮೂಲಕ ಸ್ಥಳದಲ್ಲೇ ರಸೀದಿ ಸಮೇತ ಕ್ಯಾಶ್ಲೆಸ್ ಆಗಿ ದಂಡ ವಸೂಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಮಾತ್ರ ದೇಶದಲ್ಲಿ ಕಷ್ಟಗಳು: ಮಾಜಿ ಸಂಸದ ಕೆ.ಎಚ್. ಮುನಿಯಪ್ಪ
ತಹಶಿಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ಯಲಹಂಕ ತಾಲ್ಲೂಕಿನಲ್ಲಿ ಕಳೆದ 20 ದಿನಗಳಲ್ಲಿ 10 ಮಾಸ್ಕ್ ಡ್ರೈವ್ ಮಾಡಿದ್ದು ಬೇರೊಬ್ಬರಿ 3.80 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಪ್ರತಿದಿನ ಸಂಜೆ ಮಾಸ್ಕ್ ಡ್ರೈವ್ ಮೂಲಕ ಬಿಡಿಕೆ ವೃತ್ತ, ಎನ್.ಇ.ಎಸ್ ವೃತ್ತ, ಓಲ್ಡ್ ಟೌನ್, ನ್ಯೂ ಟೌನ್, ಕೊಗಿಲು ವೃತ್ತ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಹಾಕದೆ ಬೀದಿಗೆ ಬಂದ ಸಾರ್ವಜನಿಕರಿಗೆ ದಂಡ ವಿಧಿಸಲಾಗಿದೆ.
ನ್ಯೂಸ್18 ಜೊತೆ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ, ನಮ್ಮ ಜೀವ ಸದ್ಯ ನಮ್ಮ ಕೈಯಲ್ಲೇ ಇದೆ. ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಮಾಸ್ಕ್ ಧರಿಸಬೇಕು. ನಮ್ಮ ಜೀವದ ಜೊತೆ ಬೇರೆಯವರು ಜೀವದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ