ಮಂಡ್ಯದಲ್ಲಿ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು; ಕೊರೋನಾ ನಡುವೆಯೂ ಪ್ರಭಾವಿ ಖಾಸಗಿ ಶಾಲೆಗಳು ಚಾಲ್ತಿ

ಕೊರೋನಾತಂಕದ ಕಾರಣ ಸರ್ಕಾರ ಯಾವುದೇ ರೀತಿಯ ತರಗತಿ ನಡೆಸದಂತೆ  ಸೂಚಿಸಿದ್ದರೂ ಮಂಡ್ಯ ಜಿಲ್ಲೆಯಲ್ಲಿ  ಕೆಲ ಪ್ರಭಾವಿಗಳ ಒಡೆತನದ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಬಲವಂತವಾಗಿ ಶಾಲೆಗೆ ಕರೆಸಿ ತರಗತಿ ನಡೆಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಅನಧಿಕೃತವಾಗಿ ತರಗತಿ‌ ಮಾಡೋ ಮೂಲಕ ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಆತಂಕವಿದ್ದರೂ ಶಾಲೆಯ ಪ್ರತಿಷ್ಟೆಗೆಗಾಗಿ  ವಿದ್ಯಾರ್ಥಿಗಳ ಜೀವದ ಜೊತೆ ಶಾಲೆಯ‌ ಆಡಳಿತ  ಮಂಡಳಿ ಚೆಲ್ಲಾ ಟವಾಡುತ್ತಿದೆ.

ಕೊರೋನಾ ಆತಂಕದ ನಡುವೆ ರಾಜ್ಯದಲ್ಲಿ ಸರ್ಕಾರ SSLC ಪರೀಕ್ಷೆ ನಡೆಸುವ ತೀರ್ಮಾನ‌ ಮಾಡಿದೆ. ಮಾರ್ಚ್‌‌ನಿಂದ ಇಲ್ಲಿಯವರೆಗೂ ಶಾಲೆ ಮುಚ್ಚಿದ್ದು, ಜೂ-25 ರಿಂದ ಪರೀಕ್ಷೆ ಆರಂಭವಾಗಬೇಕಿದೆ. ಈ ನಡುವೆ ಸರ್ಕಾರ ಯಾವುದೇ ರೀತಿಯ ತರಗತಿ ನಡೆಸದಂತೆ  ಸೂಚಿಸಿದ್ದರೂ ಮಂಡ್ಯ ಜಿಲ್ಲೆಯಲ್ಲಿ  ಕೆಲ ಪ್ರಭಾವಿಗಳ ಒಡೆತನದ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಬಲವಂತವಾಗಿ ಶಾಲೆಗೆ ಕರೆಸಿ ತರಗತಿ ನಡೆಸಲಾಗುತ್ತಿದೆ.

ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾ ಸಂಸ್ಥೆ,ರೋಟರಿ ಎಜುಕೇಶ್ ಟ್ರಸ್ಟ್, ಆದರ್ಶ ವಿದ್ಯಾಶಾಲೆ, ಮಹರ್ಷಿ ಎಜ್ಯುಕೇಷನ್ ಟ್ರಸ್ಟ್ ಸೇರಿದಂತೆ ಬಹುತೇಕ‌ ಖಾಸಗಿ ಶಾಲೆಗಳು ಸರ್ಕಾರದ ಲಾಕ್‌ಡೌನ್ ನಿಯಮ‌ ಉಲ್ಲಂಘಿಸಿ ವಿದ್ಯಾರ್ಥಿ ಗಳನ್ನು ಕೆರೆಸಿಕೊಂಡು ಬಲವಂತದಿಂದ  ತರಗತಿ ನಡೆಸಿದ್ದಾರೆ. ಇದಕ್ಕೆ ಹಲವು ಸಂಘಟನೆಗಳು ಸೇರಿ ಪೋಷಕರು  ಆಕ್ಷೇಪ ವ್ಯಕ್ತಪಡಿಸಿದ್ದಾರೆ..

ಇನ್ನು ಜಿಲ್ಲೆಯ ಖಾಸಗಿ ಶಾಲೆಯಲ್ಲಿ SSLC ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಂಡು ಅವ್ರಿಗೆ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೂ ಪಾಠ ಪ್ರವಚನ‌ ಮಾಡಲಾಗುತ್ತಿದೆ. ಬಹುತೇಕ ಖಾಸಗಿ ಶಾಲೆಗಳು ತಮ್ಮ ಶಾಲೆಯ ಪ್ರತಿಷ್ಟೆ ಗಾಗಿ  ಈ ರೀತಿ ವಿದ್ಯಾರ್ಥಿಗಳನ್ನು ಬಲವಂತ ವಾಗಿ‌ ಕರೆಸಿಕೊಂಡು ಪಾಠ ಮಾಡುತ್ತಿದ್ದರೂ, ಇಲ್ಲಿನ  ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಇದೆಂಥಾ ಮೂಢನಂಬಿಕೆ?; ಹಸುಗೂಸುಗಳ ಪ್ರಾಣಕ್ಕೆ ಸಂಚಕಾರ ತರುವ ಆಚರಣೆಗೆ ಜಿಲ್ಲಾಡಳಿತ ಕಡಿವಾಣ

ಇದರ ಹಿಂದೆ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದ್ದು ಪ್ರಭಾವಿ ನಾಯಕರ ಒಡೆತನದ ಶಾಲೆಗಳ ಪ್ರಭಾವಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆ ಅನ್ನೋ ಮಾತುಗಳು ಜಿಲ್ಲೆಯಲ್ಲಿ ಕೇಳಿ‌ ಬರುತ್ತಿವೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನೆಲ್ಲ ನಿರಾಕರಿಸಿದ್ದು ಕಾನೂನು ಉಲ್ಲಂಘಿಸಿದವರ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಈ ಭರವಸೆ ಕೇವಲ ಆಶ್ವಾಸನೆಯಾಗಿ ಉಳಿಯದೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಲಿ ಎಂಬುದೇ ಎಲ್ಲರ ಆಶಯ.
First published: