ಬೀದಿಗೆ ಬಿದ್ದ ಕಾಫಿ ನಂಬಿ ಬದುಕುತ್ತಿದ್ದ ಕುಟುಂಬಗಳು; ರೈತರಿಗೆ ಸೂಕ್ತ ಪರಿಹಾರ ನೀಡದೇ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನ

ಅರಣ್ಯ ಇಲಾಖೆ ಹೀಗೆ ಒಕ್ಕಲೆಬ್ಬಿಸುವ ರೈತರಿಗೆ ಪರಿಹಾರ ನೀಡಬೇಕೆಂಬ ಕಾನೂನಿದೆ. ಆದ್ರೆ, ಅಧಿಕಾರಿಗಳು ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡದೇ ಒಕ್ಕಲೆಬ್ಬಿಸುತ್ತಿದ್ದಾರೆಂದು ನೊಂದವರು ಆರೋಪಿಸಿದ್ದಾರೆ.

ಕಿತ್ತ ಕಾಫಿ ಗಿಡಗಳೊಂದಿಗೆ ಬಡ ಕುಟುಂಬಗಳ ಪ್ರತಿಭಟನೆ.

ಕಿತ್ತ ಕಾಫಿ ಗಿಡಗಳೊಂದಿಗೆ ಬಡ ಕುಟುಂಬಗಳ ಪ್ರತಿಭಟನೆ.

  • Share this:
ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದೇ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನ ಮಾಡಿದ್ದು,  ಕಾಫಿಯನ್ನ ನಂಬಿ ಬದುಕ್ತಿದ್ದ ಕುಟುಂಬಗಳು ಬೀದಿಗೆ ಬಿದ್ದಿರೋ ಘಟನೆ ಚಿಕ್ಕಮಗಳೂರು ಮಸಗಲಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮಸಗಲಿ ಗ್ರಾಮದಲ್ಲಿ ಅರಣ್ಯ ಇಲಾಖೆಯವ್ರು 4 ಎಕರೆ ಕಾಫಿಯನ್ನ ಕಡಿದು ಹಾಕಿದ್ದಾರೆ. ಇರೋದು ಅರ್ಧ-ಒಂದು ಎಕರೆ ಕಾಫಿ, ಬಿಡ್ರಪ್ಪಾ ಅಂದ್ರು ಬಿಡಲಿಲ್ಲ. ಈ ಗಿಡಗಳೇ ನಮ್ಮ ಬದುಕು ಅಂದ್ರು ಅಧಿಕಾರಿಗಳು ನೋ ಕಾಂಪ್ರಮೈಸ್. ಕೈ ಮುಗಿದ್ರು ಕೇಳಲಿಲ್ಲ, ಕಾಲಿಗೆ ಬಿದ್ರು ಬಿಡಲಿಲ್ಲ. ಕಾಫಿಯನ್ನ ನಂಬಿ ಬದುಕ್ತಿದ್ದ ಕುಟುಂಬಗಳು ಬೀಬೀದಿಗೆ ಬಿದ್ದ ಕಾಫಿ ನಂಬಿ ಬದುಕುತ್ತಿದ್ದ ಕುಟುಂಬಗಳು; ರೈತರಿಗೆ ಸೂಕ್ತ ಪರಿಹಾರ ನೀಡದೇ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನದಿಗೆ ಬಿದ್ದಿವೆ. ಹೀಗೆ ಕಾಫಿಯನ್ನ ಕಡಿದು ಹಾಕಿದ್ದು ಇದೇ ಮೊದಲಲ್ಲ. ಕಳೆದ ವರ್ಷವೂ ಇಲಾಖೆ ಕಾಫಿಯನ್ನ ಕಡಿದು 22 ಕುಟುಂಬಗಳ ಬದುಕನ್ನ ಬೀದಿಗೆ ತಂದಿದ್ದ ಆರೋಪವಿದೆ. ಈಗ ಕೊರೋನಾ, ಲಾಕ್‍ಡೌನ್‍ನಿಂದ ಬಡವರು ಬದುಕು ಮೂರಾಬಟ್ಟೆಯಾಗಿದ್ರು ಈ ರೀತಿ ಕಾಫಿಯನ್ನ ಕತ್ತರಿಸಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಅರಣ್ಯ ಇಲಾಖೆಯವ್ರು ಕಡಿದ ಕಾಫಿಯನ್ನ ಡಿಸಿ ಕಚೇರಿ ತಂದು ನ್ಯಾಯ ಕೊಡಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.

ಮಸಗಲಿ ಗ್ರಾಮ ಸೇರಿದಂತೆ 7 ಗ್ರಾಮದ 211 ಕುಟುಂಬಗಳು 375 ಎಕರೆ ಒತ್ತುವರಿ ಮಾಡಿದ್ದು, ತೆರವುಗೊಳಿಸಲು ಕೋರ್ಟ್ ಆದೇಶ ನೀಡಿರೋದ್ರಿಂದ ಅರಣ್ಯ ಇಲಾಖೆ ಈ ರೀತಿ ತೆರವು ಕಾರ್ಯಕ್ಕೆ ಮುಂದಾಗಿದೆ ಅನ್ನೋ ಮಾಹಿತಿ ಇದೆ. ಆದ್ರೆ, ಇಲಾಖೆ ದೊಡ್ಡ-ದೊಡ್ಡವರು ವ್ಯಾಪಾರದ ದೃಷ್ಟಿಯಿಂದ ನೂರಾರು ಎಕರೆ ಪ್ರದೇಶವನ್ನ ಒತ್ತುವರಿ ಮಾಡಿದ್ರು ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗ್ತಿಲ್ಲ. ಆದ್ರೆ, ಬಡವರು ಬದುಕಲು ತಲೆಮಾರುಗಳಿಂದ ಮಾಡಿರೋ ಅರ್ಧ, ಒಂದು ಎಕರೆ ಜಾಗವನ್ನ ಸಾಗುವಳಿ ಮಾಡಿಕೊಂಡು ಬರ್ತಿದ್ದೇವೆ. ನಿಮ್ಮ ಪೌರುಷ ನಮ್ಮಂತಹಾ ಬಡವರ ಮೇಲೆ  ಏಕೆ ಅಂತ ಸಂತ್ರಸ್ಥರು ಪ್ರಶ್ನೆ ಮಾಡಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಗಿಡಗಳನ್ನ ಕಡಿದಂತೆ ದೊಡ್ಡವರು ಮಾಡಿರೋ ನೂರಾರು ಎಕರೆ ಕಾಫಿಯನ್ನೂ ಕಡಿಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಇದನ್ನು ಓದಿ: ಗ್ರಾಮ ಪಂಚಾಯ್ತಿ ಮಾಸ್ಟರ್ ಪ್ಲಾನ್​ನಿಂದಾಗಿ ಉಚಿತವಾಗಿ ಕಷಾಯ ಸೇವಿಸಿದ ಇಡೀ ಊರಿನ ಜನ!

ಒಟ್ಟಾರೆ, ಅರಣ್ಯ ಇಲಾಖೆ ಹೀಗೆ ಒಕ್ಕಲೆಬ್ಬಿಸುವ ರೈತರಿಗೆ ಪರಿಹಾರ ನೀಡಬೇಕೆಂಬ ಕಾನೂನಿದೆ. ಆದ್ರೆ, ಅಧಿಕಾರಿಗಳು ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡದೇ ಒಕ್ಕಲೆಬ್ಬಿಸುತ್ತಿದ್ದಾರೆಂದು ನೊಂದವರು ಆರೋಪಿಸಿದ್ದಾರೆ. ಏಳೆಂಟು ದಶಕಗಳಿಂದ ಒಂದೆಡೆ ಬದುಕು ಕಟ್ಟಿಕೊಂಡವರಿಗೆ ಅರಣ್ಯ ಇಲಾಖೆ ಕಾನೂನಿನ ಪಾಠ ಹೇಳುತ್ತೆ. ಆದ್ರೆ, ಶ್ರೀಮಂತರಿಗೆ ಈ ಕಾನೂನು ಅನ್ವಯ ಆಗಲ್ಲ ಅನ್ನೋದು ನಿಜಕ್ಕೂ ವಿಪರ್ಯಾಸ. ದುರಂತ. ಮಕ್ಕಳಂತೆ ಸಾಕಿ-ಸಲಹಿದ್ದ ಕಾಫಿಯನ್ನ ಕಳೆದುಕೊಂಡು ಕಣ್ಣೀರಿಡ್ತಿರೋರಿಗೆ ಸೂಕ್ತ ಪರಿಹಾರ ಸಿಗಲಿ ಅನ್ನೋದು ನಮ್ಮ ಆಶಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  • ವರದಿ: ವೀರೇಶ್ ಹೆಚ್​.ಜಿ 

Published by:HR Ramesh
First published: