HOME » NEWS » District » MANY PEOPLE WHO GONE TO CHITRADURGA PORT FOR CELEBRATE NEW YEAR RHHSN VTC

ಕಲ್ಲಿನ ಕೋಟೆಗೆ ಯುವಕ- ಯುವತಿಯರ ಲಗ್ಗೆ: ಕೋವಿಡ್ ನಿಯಮ ಉಲ್ಲಂಘಿಸಿ ಹೊಸ ವರ್ಷಾಚರಣೆ

ಕೋವಿಡ್ ಗೆ ಕ್ಯಾರೇ ಎನ್ನದೆ ದುರ್ಗಕ್ಕೆ ಬಂದ ಪ್ರವಾಸಿಗರು, ಸಾಲು ಗಟ್ಟಿ ಕಲ್ಲಿನ ಕೋಟೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ  20-20 ಗೆ ವಿದಾಯ ಹೇಳುವ ಮೂಲಕ 2021ನ್ನ ಸಂಭ್ರಮ -ಸಡಗರದಿಂದ ವೆಲ್ ಕಂ ಮಾಡಿದರು. ವರ್ಷವಿಡೀ ದೇಶದ ಜನರಿಗೆ ಕಹಿ ಘಟನೆಗಳನ್ನ ಮರೆಯುವಂತೆ ಈ ಹೊಸ ವರ್ಷ ಸಿಹಿ ಸಂಭ್ರಮಗಳನ್ನು ನೀಡಲಿ.

news18-kannada
Updated:January 1, 2021, 8:56 PM IST
ಕಲ್ಲಿನ ಕೋಟೆಗೆ ಯುವಕ- ಯುವತಿಯರ ಲಗ್ಗೆ: ಕೋವಿಡ್ ನಿಯಮ ಉಲ್ಲಂಘಿಸಿ ಹೊಸ ವರ್ಷಾಚರಣೆ
ಕೋಟೆಗೆ ಆಗಮಿಸಿರುವ ಪ್ರವಾಸಿಗರು.
  • Share this:
ಚಿತ್ರದುರ್ಗ: ಟ್ವೆಂಟಿ- ಟ್ವೆಂಟಿ ದೇಶದ ಜನ್ರನ್ನ ಬೆಚ್ಚಿ ಬೀಳಿಸಿತ್ತು. ಕೊರೋನಾ ಮಹಾಮಾರಿಯಿಂದ ವರ್ಷವಿಡೀ ಜನರು ರೋಸಿ ಹೋಗಿದ್ದರು. ಇಂದು ಹಳೆ ವರ್ಷ ಮುಗಿದು ಹೊಸ ವರ್ಷ ಹೊಸ ಕನಸುಗಳನ್ನು ಬಿತ್ತಿದ್ದು, ಕೋಟೆನಾಡಿನ ಯುವ ಸಮೂಹಕ್ಕೆ ಹೊಸ ಭರವಸೆ ಮೂಡಿಸಿದೆ. ಇಂದು ಪ್ರತಿ ಬಾರಿಯಂತೆ ನೂರಾರು ಯುವ ಜೋಡಿ ಕಲ್ಲಿನ ಕೋಟೆಗೆ ಲಗ್ಗೆ ಇಟ್ಟು ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತ ಮಾಡಿದರು.

ಕೈ- ಕೈ ಹಿಡಿದು ಕೋಟೆ ಹತ್ತುತ್ತಿರುವ ಯುವ ಜೋಡಿಗಳು. ಸ್ಮೈಲ್ ನೀಡಿ ಸೆಲ್ಪಿ ಕ್ಲಿಕ್ಕಿಸಿಕೊಳ್ತಿರುವ ಯುವತಿಯರು. ಈ ದೃಶ್ಯಗಳು ಕಂಡು ಬಂದಿದ್ದು, ಮದಕರಿ ನಾಯಕನ ಏಳು ಸತ್ತಿನ ಕೋಟೆಯಲ್ಲಿ. ಹೊಸ ವರ್ಷಾಚರಣೆ ಬಂತು ಅಂದ್ರೆ ಸಾಕು ರಾಕ್ ಪೋರ್ಟ್ ಹೌಸ್ ಪುಲ್ ಆಗಿ ಬಿಡುತ್ತೆ. ಈ ಬಾರಿ ಕೊರೋನಾ ಇದ್ದರೂ ಕೂಡಾ ಅದನ್ನು ಲೆಕ್ಕಿಸದೇ ಸಾವಿರಾರು ಮಂದಿ ಯುವ ಜೋಡಿಗಳು,ಕೋಟೆಗೆ ಲಗ್ಗೆ ಇಟ್ಟರು. ಇನ್ನೂ ಕಲ್ಲಿನ ಕೋಟೆಯಲ್ಲಿ ಹೊಸ ವರ್ಷಾಚರಣೆ ಮಾಡುವ ಮೂಲಕ ಯುವ ಸಮೂಹ ಸಂಭ್ರಮಿಸಿತು.

ಇದನ್ನು ಓದಿ: ರಾಜಧಾನಿಯಲ್ಲಿ ಪೊಲೀಸರ ಫ್ಲಾನ್​ನಂತೆ ನಡೆಯಿತು ನ್ಯೂ ಇಯರ್ ಸೆಲೆಬ್ರೆಷನ್!

ರಾಕ್ ಪೋರ್ಟ್ ಕಲ್ಲು ಕಲ್ಲಿನ ಮೇಲೆ ಕುಳಿತಿದ್ದ ಪ್ರವಾಸಿಗರ ದಂಡು 2021 ನವ ವರ್ಷವನ್ನು ಸ್ವಾಗತಿಸಿತು‌. ಇನ್ನೂ ಹೊಸ ವರ್ಷದ ಜೋಷ್ ನಲ್ಲಿದ್ದ ಯುವ ಪ್ರೇಮಿಗಳಂತೋ  ಕೇಕ್ ಕಟ್ ಮಾಡಿದ ಯುವತಿಯರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಿ, ಕೋಟೆಯಲ್ಲಿನ ಕುದುರೆ ಹೆಜ್ಜೆ, ತುಪ್ಪದ ಕೊಳ, ಓಬವ್ವನ ಕಿಂಡಿ, ಸೇರಿ ವಿವಿಧ ಸ್ಥಳ ವೀಕ್ಷಣೆ ಮಾಡಿದ ಪ್ರವಾಸಿಗರು, ಸಡಗರದಿಂದ ನ್ಯೂ ಇಯರ್ ಆಚರಣೆ ಮಾಡಿದರು. ಇನ್ನೂ ಕೊರೋನಾ ವರ್ಷ 2020 ವಿದಾಯಕ್ಕೆ, ಅಣಿಯಾಗಿದ್ದ ಸಾವಿರಾರು ಮಂದಿ ಯುವ ಪ್ರವಾಸಿಗರು, ಕೊರೋನಾ ಭೀತಿ ಬಿಟ್ಟು, ಕಲ್ಲಿನ ಕೋಟೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೇ ಸರ್ಕಾರದ ನಿಯಮ ಗಾಳಿಗೆ ತೂರಿದ್ದ ಯುವ ಪಡೆ,ಕೋಟೆಗೆ ಲಗ್ಗೆ ಇಟ್ಟಿತು.
Youtube Video

ಒಟ್ಟಾರೆ ಕೋವಿಡ್ ಗೆ ಕ್ಯಾರೇ ಎನ್ನದೆ ದುರ್ಗಕ್ಕೆ ಬಂದ ಪ್ರವಾಸಿಗರು, ಸಾಲು ಗಟ್ಟಿ ಕಲ್ಲಿನ ಕೋಟೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ  20-20 ಗೆ ವಿದಾಯ ಹೇಳುವ ಮೂಲಕ 2021ನ್ನ ಸಂಭ್ರಮ -ಸಡಗರದಿಂದ ವೆಲ್ ಕಂ ಮಾಡಿದರು. ವರ್ಷವಿಡೀ ದೇಶದ ಜನರಿಗೆ ಕಹಿ ಘಟನೆಗಳನ್ನ ಮರೆಯುವಂತೆ ಈ ಹೊಸ ವರ್ಷ ಸಿಹಿ ಸಂಭ್ರಮಗಳನ್ನು ನೀಡಲಿ.

ವರದಿ: ವಿನಾಯಕ ತೊಡರನಾಳ್
Published by: HR Ramesh
First published: January 1, 2021, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories