ಬಿಸಾಡುವ ತೆಂಗಿನಕಾಯಿ ಚಿಪ್ಪಿನಲ್ಲಿ ಅರಳಿದ ಹತ್ತಾರು ಕಲಾಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಕಲಾವಿದನ ಸಾಧನೆ
ಚಿಕ್ಕಂದಿನಿಂದಲೂ ಕಲಾಕೃತಿಗಳ ರಚನೆಯಲ್ಲಿ ಅಭಿರುಚಿಯನ್ನ ಬೆಳೆಸಿಕೊಂಡಿರುವ ಶಿವಮೂರ್ತಿ ಅವರಿಗೆ ಅವರ ತಂದೆ ಸೂರ್ಯನಾರಾಯಣ ಭಟ್ ಅವರೇ ಪ್ರೇರಣೆಯಾಗಿದ್ದಾರೆ
news18-kannada Updated:October 15, 2020, 7:20 AM IST

ತೆಂಗಿನಕಾಯಿ ಚಿಪ್ಪಿನಲ್ಲಿ ಅರಳಿದ ಕಲಾಕೃತಿಗಳು
- News18 Kannada
- Last Updated: October 15, 2020, 7:20 AM IST
ಕಾರವಾರ(ಅಕ್ಟೋಬರ್. 15): ಎಳನೀರಿನಿಂದ ಹಿಡಿದು ಅದರ ನಾರಿನ ವರೆಗೂ ಹತ್ತು ಹಲವು ವಿಧಗಳಲ್ಲಿ ಬಳಕೆಯಾಗುವ ತೆಂಗಿನ ಮರವನ್ನ ಕಲ್ಪವೃಕ್ಷ ಅಂತಲೇ ಕರೆಯುತ್ತಾರೆ. ಎಲ್ಲರೂ ತೆಂಗಿನಕಾಯಿ, ಅದರ ಸಿಹಿನೀರನ್ನ ಬಳಸಿ ಉಳಿದ ಚಿಪ್ಪನ್ನ ಒಲೆಗೆ ಉರುವಲಾಗಿ ಬಳಕೆ ಮಾಡುತ್ತಾರೆ. ಆದರೆ, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದ ಶಿವಮೂರ್ತಿ ಭಟ್ ಅವರ ಮನೆಯಲ್ಲಿ ಉಪಯೋಗಕ್ಕೆ ಬಾರದು ಎಂದು ಬಿಸಾಡುವ ತೆಂಗಿನ ಕಾಯಿ ಚಿಪ್ಪಿನಲ್ಲಿ ಅಸಾಮಾನ್ಯ ಕಲೆ ಅರಳಿದೆ. ಯುವಕ ಶಿವಮೂರ್ತಿ ಭಟ್ ತೆಂಗಿನ ಚಿಪ್ಪಿನ ಮೇಲೆ ವೈವಿಧ್ಯಮಯ ಕಲಾಕೃತಿಗಳನ್ನ ರಚನೆ ಮಾಡುವ ಕಲೆಯನ್ನ ಕರಗತ ಮಾಡಿಕೊಂಡಿದ್ದು ಒಂದಕ್ಕಿಂತ ಒಂದು ವಿಭಿನ್ನ ಎನ್ನುವಂತಿದೆ. ತೆಂಗಿನಕಾಯಿ ತೆಗೆದ ಬಳಿಕ ನಿರುಪಯುಕ್ತ ಎನಿಸಿಕೊಳ್ಳುವ ಚಿಪ್ಪನ್ನ ಕೇವಲ ಉರುವಲಾಗಿ ಮಾತ್ರವಲ್ಲದೇ ಅದರಲ್ಲೂ ಕಲಾಕೃತಿಯನ್ನ ಅರಳಿಸಬಹುದು ಎನ್ನುವುದನ್ನ ಶಿವಮೂರ್ತಿ ತೋರಿಸಿಕೊಟ್ಟಿದ್ದಾರೆ.
ತಮ್ಮ ಕಲ್ಪನೆಗಳಿಗೆ ಚಿಪ್ಪಿನ ಮೇಲೆ ಜೀವ ತುಂಬುವ ಮೂಲಕ ಕಣ್ಮನ ಸೆಳೆಯುವ ಕಲಾಕೃತಿಗಳನ್ನ ರಚನೆ ಮಾಡಿದ್ದು, ನೋಡಿದವರು ಮನಸೋಲದೇ ಇರಲು ಸಾಧ್ಯವಿಲ್ಲ ಎನ್ನುವಂತಿವೆ. ಚಿಕ್ಕಂದಿನಿಂದಲೂ ಕಲಾಕೃತಿಗಳ ರಚನೆಯಲ್ಲಿ ಅಭಿರುಚಿಯನ್ನ ಬೆಳೆಸಿಕೊಂಡಿರುವ ಶಿವಮೂರ್ತಿ ಅವರಿಗೆ ಅವರ ತಂದೆ ಸೂರ್ಯನಾರಾಯಣ ಭಟ್ ಅವರೇ ಪ್ರೇರಣೆಯಾಗಿದ್ದಾರೆ. ಇನ್ನು ಶಿವಮೂರ್ತಿ ಅವರ ತಂದೆ ಸೂರ್ಯನಾರಾಯಣ ಭಟ್ ಅವರೂ ಸಹ ಬಗೆ ಬಗೆಯ ಕಲಾಕೃತಿಗಳ ರಚನೆಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನ ಹೊಂದಿದವರಾಗಿದ್ದಾರೆ. ಶಿವಮೂರ್ತಿ ಚಿಕ್ಕಂದಿನಲ್ಲಿರುವಾಗಲೇ ತಂದೆಯವರು ರಚನೆ ಮಾಡುತ್ತಿದ್ದ ದೇವರ ಕಲಾಕೃತಿಗಳನ್ನ ನೋಡುತ್ತಾ ಅಭಿರುಚಿಯನ್ನ ಬೆಳೆಸಿಕೊಂಡಿದ್ದರು.

ಅದಾದ ಬಳಿಕ ಮರದ ಬೇರಿನಲ್ಲಿ ನೈಸರ್ಗಿಕವಾಗಿಯೇ ಕಂಡು ಬರುವ ಆಕೃತಿಗಳನ್ನೇ ಪ್ರಾಣಿ, ಪಕ್ಷಿ, ಮನುಷ್ಯರ ಕಲಾಕೃತಿಗಳನ್ನಾಗಿ ಮಾರ್ಪಡಿಸುತ್ತಾ ತೆಂಗಿನ ಚಿಪ್ಪಿನ ಮೇಲೂ ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ. ಹೀಗೆಯೇ ರಚಿಸಲಾಗಿರುವ 300ಕ್ಕೂ ಅಧಿಕ ವಿವಿಧ ಬಗೆಯ ಕಲಾಕೃತಿಗಳ ಸಂಗ್ರಹ ಮನೆಯಲ್ಲಿದೆ.
ಇದನ್ನೂ ಓದಿ : ಬಿಜೆಪಿಗೆ ಮತಹಾಕಿದ ಕಾರಣಕ್ಕೆ ನಾಲ್ಕು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ತೆಂಗಿನ ಚಿಪ್ಪಿನಿಂದ ಮನೆಯ ಅಲಂಕಾರಿಕಾ ವಸ್ತುಗಳು ಅರಳಿವೆ, ಹಕ್ಕಿ ಪಕ್ಷಿಗಳು ಅರಳಿವೆ. ವಿವಿಧ ಭಂಗಿಯಲ್ಲಿ ಮಾನವನ ಕಲಾಕೃತಿಗಳು ಅರಳಿವೆ ಹೀಗೆ ಹತ್ತು ಹಲವು ಕಲಾಕೃತಿಗಳು ತೆಂಗಿನ ಚಿಪ್ಪಿನ ಮೂಲಕ ಅರಳಿಸಿದ ಕೀರ್ತಿ ಶಿವಮೂರ್ತಿ ಮತ್ತು ನಾರಾಯಣಸ್ವಾಮಿಯವರಿಗೆ ಸಲ್ಲುತ್ತದೆ. ತೆಂಗಿನ ಕಾಯಿ ಅಡುಗೆಗೆ ಉಪಯೋಗ ಮಾಡಿದ ಮೇಲೆ ಉಪಯೋಗಕ್ಕೆ ಇಲ್ಲ ಎಂದು ಬಿಸಾಡುವ ಸಂದರ್ಭದಲ್ಲಿ ಕಸದಿಂದ ರಸ ಎಂಬಂತೆ ಜನತೆ ಹುಬ್ಬೇರಿಸಿ ನೋಡುವಂತೆ ಕಲಾಕೃತಿಗಳನ್ನ ಅರಳಿಸಿದ್ದಾರೆ.
ಈಗಾಗಲೆ ಇವರು ತಯಾರಿಸುವ ಕಲಾಕೃತಿಗಳು ಕೇವಲ ನಾಲ್ಕು ಗೋಡೆ ನಡುವೆ ಮಾತ್ರ ಎಂಬಂತಾಗಿದೆ ಇವರ ಕಲಾಕೃತಿಗಳನ್ನ ಗುರುತಿಸಿ ಮಾರುಕಟ್ಟೆಯಲ್ಲಿ ಬೇಡಿಕೆ ಬರಬೇಕೆಂದ್ರೆ ಪ್ತಚಾರದ ಅವಶ್ಯಕತೆ ಇದೆ ಕಲಾವಿದರ ಪರಿಚಯ ವಾಗಬೇಕಿದೆ. ಎಲೆಮರೆಯ ಕಾಯಿಯಂತೆ ಇವರು ಕಸದಿಂದ ಅದ್ಭುತ ರಸ ಮಾಡಿದ್ದಾರೆ ಈ ಪ್ರತಿಭೆಗಳಿಗೆ ಪ್ರೋತ್ಸಾಹ ಬೇಕು ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಾರೆ.
ತಮ್ಮ ಕಲ್ಪನೆಗಳಿಗೆ ಚಿಪ್ಪಿನ ಮೇಲೆ ಜೀವ ತುಂಬುವ ಮೂಲಕ ಕಣ್ಮನ ಸೆಳೆಯುವ ಕಲಾಕೃತಿಗಳನ್ನ ರಚನೆ ಮಾಡಿದ್ದು, ನೋಡಿದವರು ಮನಸೋಲದೇ ಇರಲು ಸಾಧ್ಯವಿಲ್ಲ ಎನ್ನುವಂತಿವೆ. ಚಿಕ್ಕಂದಿನಿಂದಲೂ ಕಲಾಕೃತಿಗಳ ರಚನೆಯಲ್ಲಿ ಅಭಿರುಚಿಯನ್ನ ಬೆಳೆಸಿಕೊಂಡಿರುವ ಶಿವಮೂರ್ತಿ ಅವರಿಗೆ ಅವರ ತಂದೆ ಸೂರ್ಯನಾರಾಯಣ ಭಟ್ ಅವರೇ ಪ್ರೇರಣೆಯಾಗಿದ್ದಾರೆ.