news18-kannada Updated:August 4, 2020, 5:09 PM IST
ಆನಂದ್ ಕಲಾದಗಿ
ಬಾಗಲಕೋಟೆ(ಆಗಸ್ಟ್ 04): ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪೆಂಡಾಲ್ ಗುತ್ತಿಗೆದಾರನ ಮಗನೊಬ್ಬಯುಪಿಎಸ್ಸಿ ಪರೀಕ್ಷೆ 446 ರ್ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.
ಜಮಖಂಡಿ ನಗರದ ವಿರೇಶ್ ಕಲಾದಗಿ ಎಂಬುವರ ಮಗ ಆನಂದ್ ಕಲಾದಗಿ 2019ದ ಯುಪಿಎಸ್ಸಿ ಪರೀಕ್ಷೆಯಲ್ಲಿ 446 ರ್ಯಾಂಕ್ ಪಡೆದಿದ್ದು, ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ವಿರೇಶ್ ಕಲಾದಗಿ ಎಂಬುವರು ಜಮಖಂಡಿ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಿಗೆ ಪೆಂಡಾಲ್ ಗುತ್ತಿಗೆ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದು, ಸಾಮಾನ್ಯ ಪೆಂಡಾಲ್ ಗುತ್ತಿಗೆದಾರನ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಎಲ್ಲರಿಗೂ ಹೆಮ್ಮೆ ಸ್ಪೂರ್ತಿ ತಂದಿದೆ.
ವಿರೇಶ್ ಅವರಿಗೆ 5 ಜನ ಮಕ್ಕಳಿದ್ದು, ಆನಂದ್ ಓರ್ವ ಪುತ್ರ ಇನ್ನು ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಮಗನನ್ನು ಐಎಎಸ್ ಅಧಿಕಾರಿ ಮಾಡಬೇಕೆನ್ನುವ ಕನಸು ಇದೀಗ ನನಸಾಗಿದೆ. ತಂದೆ ತಾಯಿಗೆ ಸಹಜವಾಗಿ ಕನಸ್ಸಿರುತ್ತೆ. ಅದರಂತೆ ಮಗನ ಪ್ರಯತ್ನದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಹೆಮ್ಮೆ ತಂದಿದೆ ಎಂದು ತಂದೆ ವಿರೇಶ್ ಹೇಳುತ್ತಾರೆ.
ಜಮಖಂಡಿ ನಗರದ ತುಂಗಳ ಸಂಸ್ಥೆಯಲ್ಲಿ ಹೈಸ್ಕೂಲ್, ಕಾಲೇಜು ಓದಿದ್ದು. 2017ರಲ್ಲಿ ಬೆಳಗಾವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪಾಸಾಗಿ ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ಆರಂಭಿಸಿದೆ. ಮೊದಲ ಪ್ರಯತ್ನದಲ್ಲಿ ಪ್ರಿಲಿಮಿನರಿ ಪರೀಕ್ಷೆ ಪಾಸಾಗಲಿಲ್ಲ.ಇದೀಗ 2019ರಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದೆ. 446 ರ್ಯಾಂಕ್ ಬಂದಿದೆ.
ನನ್ನ ರ್ಯಾಂಕ್ಗೆ ಐಎಎಸ್ ಹುದ್ದೆ ಸಿಗಬಹುದು, ಇಲ್ಲವೆ, ಕಂದಾಯ ಇಲಾಖೆಯಲ್ಲಿ ಹುದ್ದೆ ನಿರೀಕ್ಷೆ ಇದೆ. ಓದುವುದಕ್ಕಿಂತ ಬರೆಯುವದರತ್ತ ಹೆಚ್ಚು ಒತ್ತು ಕೊಡುತ್ತಿದ್ದೆ. ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ನಡೆಸಿದೆ. ಫೆಬ್ರುವರಿಯಲ್ಲಿ ಸಂದರ್ಶನ ಮುಗಿದಿದೆ. ಎರಡುವರೆ ವರ್ಷದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಐಚ್ಚಿಕ ಕನ್ನಡ ವಿಷಯ ತೆಗೆದುಕೊಂಡಿದ್ದೆ. ಸಂದರ್ಶನದಲ್ಲಿ ಬೆಳಗಾವಿ ಘಟನಾವಳಿ, ಕನ್ನಡ ಸಾಹಿತ್ಯ, ಡಾ.ರಾಜ್ ಕುಮಾರ್ ಬಗ್ಗೆ ಪ್ರಶ್ನೆ ಕೇಳಿದರು.
ಇನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ ಒಂದೇ ಒಂದು ಪೈಸೆ ತಗೆದುಕೊಳ್ಳೋದಿಲ್ಲ.ಸಾಮಾನ್ಯ ವಿದ್ಯಾರ್ಥಿಗಳು ಐಎಎಸ್ ಆಗಬಹುದು. ಸತತ ಪ್ರಯತ್ನವಿರಬೇಕು, ಗುಂಪಾಗಿರದೇ ವೈಯಕ್ತಿಕ ಓದಿನತ್ತ ಗಮನ ಕೊಡಬೇಕು. ಪಿಯುಸಿ ಮುಗಿಸಿ ನನಗೆ ಐಎಎಸ್ ಬಗ್ಗೆ ಸ್ಪಷ್ಟತೆ ಸಿಕ್ಕಿತು.
ಇದನ್ನೂ ಓದಿ :
UPSC Civil Services Result 2019: ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಪ್ರದೀಪ್ ಸಿಂಗ್ ಟಾಪರ್2017ರಲ್ಲಿ ನಂದಿನಿ ಕೆ ಆರ್ ಐಚ್ಚಿಕ ಕನ್ನಡ ವಿಷಯ ತೆಗೆದುಕೊಂಡು ಮೊದಲ ರ್ಯಾಂಕ್ ಬಂದಿದ್ದರು. ಹಾಗಾಗಿ ನನಗೆ ನಂದಿನಿ ಕೆ ಆರ್ ಸ್ಫೂರ್ತಿಯಾದರು. ನನ್ನ ಸಾಧನೆಯನ್ನು ತಂದೆ ತಾಯಿಗೆ ಅರ್ಪಿಸುತ್ತೇನೆ ಎಂದು ನ್ಯೂಸ್ 18ನೊಂದಿಗೆ ಮಾತನಾಡುತ್ತಾ ಸಂತಸ ಹಂಚಿಕೊಂಡರು.
ಒಟ್ಟಿನಲ್ಲಿ ಸಾಮಾನ್ಯ ಮಗನೊಬ್ಬನು ಮನಸ್ಸಿದ್ದರೆ ಸತತ ಅಧ್ಯಯನ, ಪ್ರಯತ್ನವಿದ್ದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ವಾಗಬಹುದು ಎಂದು ಜಮಖಂಡಿ ಕುವರ ಸಾಧಿಸಿ ತೋರಿಸಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ 446ನೇ ರ್ಯಾಂಕ್ ಬಂದಿದ್ದಕ್ಕೆ ಆನಂದ್ ಕಲಾದಗಿ ಅವರಿಗೆ ಅಭಿನಂದನೆ ಮಹಾಪೂರವೇ ಹರಿದುಬರುತ್ತಿದೆ.
Published by:
G Hareeshkumar
First published:
August 4, 2020, 5:04 PM IST