• Home
 • »
 • News
 • »
 • district
 • »
 • Mandya ರೈತರಿಗೆ ಗಾಯದ ಮೇಲೆ ಬರೆ; ಹಾಲು ಖರೀದಿ ದರದಲ್ಲಿ 2 ರೂ. ಇಳಿಸಿದ MANMUL

Mandya ರೈತರಿಗೆ ಗಾಯದ ಮೇಲೆ ಬರೆ; ಹಾಲು ಖರೀದಿ ದರದಲ್ಲಿ 2 ರೂ. ಇಳಿಸಿದ MANMUL

MANMUL

MANMUL

ರೈತರಿಂದ ಹಾಲು ಖರೀದಿಸುತ್ತಿದ್ದ ಮನ್ಮುಲ್ ಹಾಲಿನ ದರ ಕಡಿಮೆ ಮಾಡಿದೆ. ಒಂದು ಲೀಟರ್ ಹಾಲಿಗೆ 26 ರೂಪಾಯಿ ಇದ್ದ ಬೆಲೆ ಇದೀಗ 24 ರೂಪಾಯಿಯಾಗಿದೆ. ಇದಕ್ಕೆ ಮೂಲ ಕಾರಣ ಕೊರೋನಾ ಎಂದು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ತಿಳಿಸಿದೆ.

 • Share this:

  ಮಂಡ್ಯ: ಮಹಾ ಮಾರಿ ಕೊರೋನಾದಿಂದ (Corona) ಇಡೀ ವಿಶ್ವದ ಆರ್ಥಿಕತೆಗೇ (World Economic)ಹೊಡೆತ ಬಿದ್ದಿದೆ. ಇದೀಗ ಕೊರೋನಾ ಕರಿ ನೆರಳು ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಹೈನುಗಾರಿಕೆಯ ಮೇಲೆ ಬಿದ್ದಿದೆ. ಒಂದು ಲೀಟರ್‌ ಹಾಲಿಗೆ 2 ರೂಪಾಯಿಯನ್ನು(Milk rate) ಇಳಿಕೆ ಮಾಡಿರುವುದಾಗಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ (MANMUL) ಆದೇಶ ಹೊರಡಿಸಿದೆ. ಇದ್ರಿಂದ ರೈತರಲ್ಲಿ ಆತಂಕ ಶುರುವಾಗಿದೆ. ಕೊರೊನಾ ಮಹಾಮಾರಿಯಿಂದ ಬರಿ ದೇಶವಲ್ಲದೆ. ಪ್ರಪಂಚದ ಅನೇಕ ದೇಶಗಳ ಆರ್ಥಿಕತೆ ಬುಡ ಮೇಲಾಗಿತ್ತು. ಇದ್ರಿಂದ ಒಂದಷ್ಟು ರಾಷ್ಟ್ರಗಳಲ್ಲಿ ನಿತ್ಯ ವಸ್ತಗಳ ಬೆಲೆ ಗಗನಕ್ಕೆರಿದ್ವು. ಇದಕ್ಕೆ ನಮ್ಮ ದೇಶ ಕೂಡ ಹೊರತಾಗಿಲ್ಲ. ದೇಶದಲ್ಲಿ ದಿನಸಿ ಪದಾರ್ಥಗಳು ಹಾಗೂ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದ್ವು. ಇದೀಗ ಹಾಲಿನ ಸರದಿಯಾಗಿದೆ.


  24 ರೂಪಾಯಿಗೆ ಇಳಿದ 1 ಲೀ. ಹಾಲಿನ ಬೆಲೆ 


  ಬೆಲೆ ಏರಿಕೆ ಬದಲು ರೈತರಿಂದ ಹಾಲು ಖರೀದಿಸುತ್ತಿದ್ದ ಮನ್ಮುಲ್ ಹಾಲಿನ ದರ ಕಡಿಮೆ ಮಾಡಿದೆ. ಒಂದು ಲೀಟರ್ ಹಾಲಿಗೆ 26 ರೂಪಾಯಿ ಇದ್ದ ಬೆಲೆ ಇದೀಗ 24 ರೂಪಾಯಿಯಾಗಿದೆ. ಇದಕ್ಕೆ ಮೂಲ ಕಾರಣ ಕೊರೋನಾ ಎಂದು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ತಿಳಿಸಿದೆ. ಕೊರೋನಾ ಕಾಲದಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗಿದೆ. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗಿಲ್ಲ. ಇದರಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮನ್‌ಮುಲ್‌ಗೆ 33 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದೆ.


  ಮನ್‌ಮುಲ್‌‌ಗೆ ತೀವ್ರ ಆರ್ಥಿಕ ನಷ್ಟ


  ಇದಲ್ಲದೇ ಕೊರೋನಾದಿಂದ ಹಲವಾರು ಮಂದಿ ಪಟ್ಟಣ ಪ್ರದೇಶದಿಂದ ಹಳ್ಳಿಗಳಿಗೆ ಹೋಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಹಾಲು ಹಾಗೂ ಹಾಲಿ ಉತ್ಪನ್ನಗಳು ಮಾರಾಟವಾಗಿಲ್ಲ. ಇದರಿಂದ ಕೋಟ್ಯಾಂತರ ರೂಪಾಯಿ ಮನ್‌ಮುಲ್‌‌ಗೆ ನಷ್ಟವಾಗಿದೆ. ಹೀಗಾಗಿ ಲೀಟರ್ ಹಾಲಿಗೆ ಎರಡು ರೂಪಾಯಿಯನ್ನು ಕಡಿಮೆ ಮಾಡಲಾಗಿದೆ. ದಯವಿಟ್ಟು ರೈತರು ಮನ್‌ಮುಲ್‌ ಆಡಳಿತ ಮಂಡಳಿಗೆ ಎಂದಿನಂತೆ ಸಹಕಾರ ನೀಡಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.


  ಪಶು ಆಹಾರ ಪದಾರ್ಥಗಳ ಬೆಲೆಯೂ ಇಳಿಸಿ.. 


  ಇತ್ತ ಮನ್‌ಮುಲ್‌ ಒಂದು ಲೀಟರ್ ಹಾಲಿಗೆ ಎರಡು ರೂಪಾಯಿ ಕಡಿಮೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಈ ನಡುವೆ ಎರಡು ರೂಪಾಯಿ ಕಡಿಮೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹಾಲಿನ ಬೆಲೆ ಹೇಗೆ ಕಡಿಮೆ ಮಾಡಿದ್ದಾರೆ. ಹಾಗೆಯೇ ಪಶು ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.


  ಇದನ್ನೂ ಓದಿ: ಪದ್ಮಶ್ರೀ Tulasi Gowda ದೆಹಲಿ ಪ್ರಯಾಣಕ್ಕೆ ಆರ್ಥಿಕ ಸಹಾಯ ಮಾಡದ ಜಿಲ್ಲಾಡಳಿತ; ವ್ಯಾಪಕ ಟೀಕೆ


  ರೈತರಿಗೆ ಗಾಯದ ಮೇಲೆ ಬರೆ


  ಇನ್ನು ಜಿಲ್ಲೆಯ ರೈತ ಸಂಘಟನೆಗಳು ಕೂಡ ಹಾಲಿನ ದರ ಕಡಿಮೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕಿವೆ. ಸರ್ಕಾರ ಪೆಟ್ರೋಲ್, ಡೀಸೆಲ್‌ ಗಳ ಮೇಲೆ ತಮಗೆ ಬೇಕಾದಷ್ಟು ತೆರೆಗೆ ಹಾಕಿ ಜನರಿಂದ ಹಣ ಸುಲಿಗೆ ಮಾಡುತ್ತವೆ. ಅಂತಾದ್ದರಲ್ಲಿ ಹೀಗೆ ರೈತರ ಉತ್ಪನ್ನಗಳಿಗೆ ಮಾತ್ರ ದರ ಕಡಿತ ಮಾಡಿ, ರೈತರನ್ನ ಸಾಲದ ಸುಳಿಗೆ ಸಿಲುಕಿಸುತ್ತಿವೆ. ಇದರ ವಿರುದ್ದ ಉಗ್ರ ಹೋರಾಟ ಮಾಡ್ತಿವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡ್ತಿವೆ.


  (ವರದಿ: ಸುನೀಲ್ ಗೌಡ)

  Published by:Kavya V
  First published: