• Home
  • »
  • News
  • »
  • district
  • »
  • Corona Lockdown: ಲಾಕ್​ಡೌನ್ ನಡುವೆ ಡಿಜೆ ಪಾರ್ಟಿ, ಮದುಮಗನ ಮೇಲೆ ಕೇಸ್ ಜಡಿದ ದ.ಕ. ಪೋಲೀಸ್ !

Corona Lockdown: ಲಾಕ್​ಡೌನ್ ನಡುವೆ ಡಿಜೆ ಪಾರ್ಟಿ, ಮದುಮಗನ ಮೇಲೆ ಕೇಸ್ ಜಡಿದ ದ.ಕ. ಪೋಲೀಸ್ !

ವಾಹನ ತಪಾಸಣೆ

ವಾಹನ ತಪಾಸಣೆ

ನಿಯಮಾನುಸಾರ ಮದುವೆ ಮುಗಿಸಿ ಮನೆಗೆ ಬಂದ ಮೇಲೆ ರಾತ್ರಿ ಡಿಜೆ ಹಾಕಿ ಮದುವೆ ಮನೆಯಲ್ಲಿ ಪಾರ್ಟಿ ಮಾಡಿದ್ದು, ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಡಿಒ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮದುಮಗನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡಿದ್ದಾರೆ. ಕೊರೊನಾ ಸೋಂಕು ಹರಡಲು ಕಾರಣೀಕರ್ತನಾದ ಬಗ್ಗೆ ಗಂಭೀರ ಪ್ರಕರಣವೂ ದಾಖಲಾಗಿದೆ.

ಮುಂದೆ ಓದಿ ...
  • Share this:

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ದಿನದ ಲಾಕ್ ಡೌನ್ ಕೂಡಾ ಯಶಸ್ವಿಯಾಗಿದೆ. ಮಂಗಳೂರು ನಗರ ಸೇರಿದಂತೆ ಇಡಿಯ ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, 9 ಗಂಟೆಯ ಬಳಿಕ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಎರಡನೇ ದಿನವೂ ನಿಯಮ ಮೀರಿ ಬಂದ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದು, ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ದಿನದ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆ ೯ ಗಂಟೆಯವರೆಗೆ ಜನರ ಓಡಾಟಕ್ಕೆ ಅವಕಾಶ ‌ನೀಡಲಾಗಿದ್ದು, ಆ ಬಳಿಕ ಲಾಕ್ ಡೌನ್ ಸಂಪೂರ್ಣವಾಗಿ ಜಾರಿಯಾಗಿದೆ. ಮುಂಜಾನೆ 5 ಗಂಟೆಗೆ ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ವರ್ತಕರು ತೆರೆದಿದ್ದು, ಜನರು ಆಹಾರ ಸಾಮಾಗ್ರಿಗಳನ್ನು ಖರೀದಿಸಿದ್ದಾರೆ. 9 ಗಂಟೆಯ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕರ್ಪ್ಯೂ ಹೇರಲಾಗಿದ್ದು, ನಂತರ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.


ಮಂಗಳೂರು ನಗರ ಭಾಗದಲ್ಲಿ ಅಗತ್ಯ ಸೇವೆಗಾಗಿ ಎಂಬ ಸ್ಟಿಕ್ಕರ್ ಅಳವಡಿಸಿ ಒಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರ ಸೂಚನೆಯಂತೆ ಸ್ಟಿಕ್ಕರ್ ಅಳವಡಿಸಿದ ವಾಹನಗಳನ್ನು ತಡೆದ ಪೊಲೀಸರು ಸ್ಥಳದಲ್ಲೇ ವಾಹನಗಳಿಂದ ಸ್ಟಿಕ್ಕರ್ ಗಳನ್ನು ಕಿತ್ತೆಸೆದಿದ್ದಾರೆ. ಕೇವಲ ಐಡಿ ಕಾರ್ಡ್ ತೋರಿಸಿ ಮಾತ್ರ ಸಂಚರಿಸಿ. ಈ ಸ್ಟಿಕ್ಕರ್ ಗಳೆಲ್ಲಾ ಉಪಯೋಗಕ್ಕೆ ಬರಲ್ಲ ಅಂತಾ ವಾರ್ನಿಂಗ್ ಮಾಡಿದ್ದಾರೆ.


ಇದನ್ನೂ ಓದಿhttps://kannada.news18.com/news/coronavirus-latest-news/indira-canteen-karnataka-government-orders-free-meal-and-food-in-indira-canteen-during-karnataka-lockdown-sct-562939.html


ಇನ್ನು ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಪೊಲೀಸರು ಅಲರ್ಟ್ ಆಗಿದ್ದು, 9 ಗಂಟೆಗೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಜಿಲ್ಲೆಯ ಅಂತರ್ ಜಿಲ್ಲಾ ಗಡಿಭಾಗಗಳಾದ ಚಿಕ್ಕಮಗಳೂರು ಮತ್ತು ಉಡುಪಿ ಗಡಿ ಭಾಗದಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡಿದ್ದಾರೆ. ಕೇರಳ ರಾಜ್ಯ ಗಡಿಭಾಗದಲ್ಲೂ ಪೊಲೀಸರು ನಾಕಾಬಂದಿ ಹಾಕಿದ್ದು, ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ಒಟ್ಟಿನಲ್ಲಿ ಲಾಠಿ ಬಿಟ್ಟು, ಕೇಸ್ ಕೊಟ್ಟು ಪೊಲೀಸರು ಜನರ ಮೇಲೆ ಕಾನೂನಿನ ಪ್ರಯೋಗ ಮಾಡಿದ್ದಾರೆ. ಸರ್ಕಾರದ ಲಾಕ್ ಡೌನ್ ಮತ್ತಷ್ಟು ಬಿಗಿಯಾಗುವ ಸಾಧ್ಯತೆಗಳಿದ್ದು, ಪೊಲೀಸರ ಎಚ್ಚರಿಕೆಯ ನಡುವೆಯೂ ಜನ ಮಾತ್ರ ಉಡಾಳರಾಗಿ ವರ್ತಿಸಿ ಕೇಸ್ ಮೈಗಂಟಿಸಿಕೊಂಡಿದ್ದಾರೆ.


ಈ ನಡುವೆ  ಮದುವೆ ದಿನ ಡಿಜೆ ಪಾರ್ಟಿ ಮಾಡಿ ಕೊರೊನಾ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಮದುಮಗನ ಮೇಲೆ FIR ದಾಖಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರು ನಿವಾಸಿ ದಾಮೋದರ್ ಶೆಟ್ಟಿಗಾರ್ ರವರ ಪುತ್ರ ರಂಜಿತ್ FIR ಗೆ ಒಳಗಾಗಿರುವ ಮದುಮಗ. ರಂಜಿತ್ ಮದುವೆಯು ಮೇ 9 ರಂದು ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನಡೆದಿದೆ. ಮನೆಯವರು 25 ಜನರ ಅವಕಾಶ ಕೋರಿ ಅನುಮತಿಯನ್ನೂ ಅಡ್ಯಾರು ಪಂಚಾಯತ್ ನಿಂದ ಪಡೆದುಕೊಂಡಿದ್ದರು.


ಇದೇ ರೀತಿ ಮದುವೆ ಮುಗಿಸಿ ಮನೆಗೆ ಬಂದಿದ್ದರು. ಆದರೆ ಅದೇ ದಿನ ರಾತ್ರಿ ಡಿಜೆ ಹಾಕಿ ಮದುವೆ ಮನೆಯಲ್ಲಿ ಪಾರ್ಟಿ ಮಾಡಿದ್ದು, ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಡಿಒ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮದುಮಗನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡಿದ್ದಾರೆ. ಕೊರೊನಾ ಸೋಂಕು ಹರಡಲು ಕಾರಣೀಕರ್ತನಾದ ಬಗ್ಗೆ ಗಂಭೀರ ಪ್ರಕರಣವೂ ದಾಖಲಾಗಿದೆ. ಸರ್ಕಾರದ ಕಠಿಣ ನಿಯಮದ ನಡುವೆಯೂ ಮದುವೆ ದಿನ ಡಿಜೆ ಪಾರ್ಟಿ, ಇದೀಗ ಮದುವೆಯಾದ ಎರಡೇ ದಿನದಲ್ಲಿ ಮದುಮಗ ಠಾಣೆ ಮೆಟ್ಟಿಲೇರುವಂತೆ ಆಗಿರೋದು ಮಾತ್ರ ವಿಪರ್ಯಾಸ.

Published by:Soumya KN
First published: