ಮಳೆಯಿಂದ ರಕ್ಷಣೆ ಪಡೆಯಲು ಬೀದಿ ನಾಯಿಗಳಿಗೆ ಬೆಚ್ಚನೆಯ ಸೂರು ಕಲ್ಪಿಸಿ ಮಾನವೀಯತೆ ಮೆರೆದ ಅನಿಮಲ್ ಕೇರ್ ಟ್ರಸ್ಟ್

ಗೂಡಿನಲ್ಲಿರುವ ಶ್ವಾನಗಳಿಗೆ ಆಹಾರ ನೀಡಲು ಸಮೀಪದ ಮನೆಯವರು ಅಥವಾ ಅಂಗಡಿ ಮಾಲಿಕರು ಸಹಕರಿಸುತ್ತಿದ್ದಾರೆ.

ನಾಯಿಗಳ ಆಶ್ರಯ ಗೂಡು

ನಾಯಿಗಳ ಆಶ್ರಯ ಗೂಡು

  • Share this:
ಮಂಗಳೂರು(ಜೂ.27): ಮಳೆಗಾಲದಲ್ಲಿ ಪ್ರತಿಯೊಬ್ಬರು ಬೆಚ್ಚಗಿನ ಸೂರಲ್ಲಿ ಇರುವುದಕ್ಕೆ ಬಯಸುತ್ತಾರೆ. ಮನುಷ್ಯನಂತೆ ಮೂಕ ಪ್ರಾಣಿಗಳು ಈ ಬೆಚ್ಚಗಿನ ಸ್ಥಳದಲ್ಲಿ ನೆಲೆ ಸಿಕ್ಕಿದಂತಾದರೆ ಖುಷಿಪಡುತ್ತದೆ. ಇದಕ್ಕಾಗಿಯೇ ಮಂಗಳೂರಿನಲ್ಲಿ ಅನಿಮಲ್ ಕೇರ್  ಟ್ರಸ್ಟೊಂದು ಮಹತ್ವದ ಕಾರ್ಯವನ್ನು ನಡೆಸುತ್ತಿದೆ. ಮಳೆಯಿಂದ ರಕ್ಷಿಸಲು ಬೀದಿನಾಯಿಗಳಿಗೆ ಆಶ್ರಯ ಗೂಡನ್ನು ಕಲ್ಪಿಸಿಕೊಟ್ಟಿದೆ.

ಮಳೆಗಾಲದಲ್ಲಿ ಗಾಳಿ ಮಳೆಗೆ ಬೀದಿ ನಾಯಿಗಳ ಒಡಾಟ ಪುಟ್ಟ ಪುಟ್ಟ ನಾಯಿಮರಿಗಳ ಪರದಾಟ. ನೋಡಿದ್ರೆ ಅಯ್ಯೋ ಪಾಪ ಅನ್ನಿಸಿ ಬಿಡುತ್ತೆ ಬಸ್ ನಿಲ್ದಾಣಕ್ಕೆ ಬಂದು ಸ್ವಲ್ಪ ಬೆಚ್ಚಗಿರೋಣ ಅಂದ್ರೆ ಅಲ್ಲೂ ಓಡಿಸುವವರೇ ಹೆಚ್ಚು. ಹೀಗಾಗಿ ಮಳೆಗಾಲದಲ್ಲಿ ಶ್ವಾನ ಮರಿಗಳನ್ನು ಮಳೆ, ಚಳಿಯಿಂದ ರಕ್ಷಿಸಿ ಬೆಚ್ಚನೆಯ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಮಂಗಳೂರಿನಲ್ಲಿ ಅನಿಮಲ್‌ ಕೇರ್‌ ಟ್ರಸ್ಟ್‌ ಮಹತ್ವದ ಕಾರ್ಯವೊಂದಕ್ಕೆ ಮುಂದಾಗಿದೆ. ಪ್ರಾಣಿಗಳ ಸಮುದಾಯ ಆಶ್ರಯ ಯೋಜನೆ ಹೆಸರಿನಲ್ಲಿ ಬೀದಿ ಬದಿಯ ಶ್ವಾನಗಳಿಗೆ ಗೂಡು ಕಟ್ಟಿಕೊಡುತ್ತಿದೆ.

ಈಗಾಗಲೇ ನಗರದ ನಾಲ್ಕು ಕಡೆಗಳಲ್ಲಿ ಈ ಬೆಚ್ಚಗಿನ ಗೂಡನ್ನು ನಿರ್ಮಿಸಲಾಗಿದೆ. ಇದರಲ್ಲಿ ಈಗ ತಾನೇ ಹುಟ್ಟಿರುವ ನಾಯಿ ಮರಿಗಳು, ತಾಯಿ ನಾಯಿ ಆಶ್ರಯ ಪಡೆಯುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸಂಕಷ್ಟಕ್ಕೀಡಾಗಿದ್ದ ಮೂಕಪ್ರಾಣಿಗಳಿಗೆ ನಲೆ ಸಿಕ್ಕಿದೆ. ಈ ಒಂದು ಗೂಡಿಗೆ‌ ಸುಮಾರು 2,500 ರೂ. ವೆಚ್ಚ ತಗಲುತ್ತದೆ. ಈಗಾಗಲೇ ನಾಲ್ಕು ಗೂಡು ರೆಡಿ ಆಗಿದ್ದು, ಇದಕ್ಕಾಗಿ 10 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಗೂಡಿನಲ್ಲಿರುವ ಶ್ವಾನಗಳಿಗೆ ಆಹಾರ ನೀಡಲು ಸಮೀಪದ ಮನೆಯವರು ಅಥವಾ ಅಂಗಡಿ ಮಾಲಿಕರು ಸಹಕರಿಸುತ್ತಿದ್ದಾರೆ. ಅನಿಮಲ್‌ ಕೇರ್‌ ಟ್ರಸ್ಟ್‌ 20 ವರ್ಷದಿಂದ ಇಂತಹ ಸೇವೆ ಮಾಡಿಕೊಂಡು ಬರುತ್ತಿದ್ದು, ಶಕ್ತಿನಗರದಲ್ಲಿರುವ ತನ್ನ ಕೇಂದ್ರದಲ್ಲಿ ಬೀದಿಬದಿಯಲ್ಲಿರುವ ಶ್ವಾನ, ಬೆಕ್ಕು ಮುಂತಾದ ಪ್ರಾಣಿಗಳನ್ನು ರಕ್ಷಿಸುವಲ್ಲಿ ಮಹತ್ ಕಾರ್ಯವನ್ನು ಮಾಡುತ್ತಿದೆ.

ಇದನ್ನೂ ಓದಿ : ಮಲೆಮಹದೇಶ್ವರನ ಆದಾಯಕ್ಕೂ ತಟ್ಟಿದ ಕೊರೋನಾ ಬಿಸಿ : ಹುಂಡಿಯಲ್ಲಿ 96 ಲಕ್ಷ ರೂಪಾಯಿ ಸಂಗ್ರಹ

ಬಿದಿ ಬದಿ ಬಿಟ್ಟು ಹೋದ ಮರಿಗಳನ್ನು ತಂದು ಸಾಕುವ ಕೆಲಸವನ್ನು ನಡೆಸುತ್ತಿದೆ. ಕೇವಲ ಇವುಗಳ ಆರೈಕೆಗಾಗಿಯೇ ತಿಂಗಳಿಗೆ 3 ಲಕ್ಷ ಖರ್ಚು ಮಾಡುತ್ತಿದೆ. ಈ ಆಶ್ರಯ ಗೂಡಿನ ಒಟ್ಟು ಉದ್ದೇಶ ಗರ್ಭಿಣಿ ನಾಯಿ ಮತ್ತು ಅದರ ಮರಿಗಳು ಮಳೆಗಾಲದ ಸಂದರ್ಭ ಬೆಚ್ಚಗಿನ ಗೂಡಿನಲ್ಲಿ ಇರಬೇಕು ಎಂಬುದು. ಹೀಗಾಗಿ ಮರಿಗಳು ದೊಡ್ಡದಾದ ಬಳಿಕ ಈ ಗೂಡನ್ನು ಅಗತ್ಯ ಇರುವಲ್ಲಿ ಶಿಫ್ಟ್ ಮಾಡಲಾಗುತ್ತೆ.

ಒಟ್ಟಾರೆಯಾಗಿ ಮಳೆಗಾಲದಲ್ಲಿ ಬೀದಿ ಬದಿ, ಚರಂಡಿ, ಮೋರಿ ಮುಂತಾದೆಡೆ ಆಶ್ರಯವಿಲ್ಲದೆ ನರಳುತ್ತಿರುವ ಶ್ವಾನ ಮರಿ ಮತ್ತು ಗರ್ಭಿಣಿ ಶ್ವಾನಗಳಿಗೆ ಬೆಚ್ಚನೆಯ ಗೂಡು ಕಟ್ಟಿಕೊಡುವ ಟ್ರಸ್ಟ್‌ ನ ಮಹಾನ್ ಕಾರ್ಯ ಮಾದರಿಯಾಗಿದೆ.
First published: