ಮಂಗಳೂರಿನ ಯುವಕರಿಗೆ ಮೋದಿ ಮಾತುಗಳೇ ಸ್ಫೂರ್ತಿ; ಕಂಡುಹಿಡಿದಿದ್ದಾರೆ ಹ್ಯಾಂಡ್​ ಫ್ರೀ ಸ್ಯಾನಿಟೈಸರ್​ ಸ್ಟ್ಯಾಂಡ್​​​

ತಂತ್ರಜ್ಞಾನದ ಬಳಕೆ, ಹಲವು ಪ್ರಯೋಗಗಳ ನಿಪುಣತೆ ಹೊಂದಿದ ಮಂಗಳೂರಿನ ನಾಗುರಿಯ ಆ ನಾಲ್ಕು ಮಂದಿ ಯುವಕರ ತಂಡ, ಇಲ್ಲಿಯವರೆಗೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ನಿತಿನ್, ನಿಲೇಶ್, ರಾಜೇಶ್, ಜೀತೇಶ್  ಹಲವು ಪ್ರಾಜೆಕ್ಟ್ ಗಳನ್ನು ಮಾಡಿ ಕೆಲಸದ ಚಾಕಚಕ್ಯತೆಯಿಂದಲೇ ಎಲ್ಲರಿಂದಲೂ ಶಹಭಾಸ್ ಗಳಿಸಿಕೊಂಡಿದ್ದರು. ಪ್ರತಿಭೆಯ ಆಗರವೇ ತಮ್ಮಲ್ಲಿದ್ದರೂ ದೊಡ್ಡ  ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೀಗ ಮೋದಿಯ ಲಾಕ್ ಡೌನ್ ಭಾಷಣ ಒಂದು ಹೊಸ ಭಾಷ್ಯಕ್ಕೆ ನಾಂದಿಯಾಗಿದೆ.

news18-kannada
Updated:May 27, 2020, 9:55 PM IST
ಮಂಗಳೂರಿನ ಯುವಕರಿಗೆ ಮೋದಿ ಮಾತುಗಳೇ ಸ್ಫೂರ್ತಿ; ಕಂಡುಹಿಡಿದಿದ್ದಾರೆ ಹ್ಯಾಂಡ್​ ಫ್ರೀ ಸ್ಯಾನಿಟೈಸರ್​ ಸ್ಟ್ಯಾಂಡ್​​​
ಹ್ಯಾಂಡ್​ ಫ್ರೀ ಸ್ಯಾನಿಟೈಸರ್​​ ಸ್ಟ್ಯಾಂಡ್​​
  • Share this:
ಅವರೆಲ್ಲರೂ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರು. ಸಾಕಷ್ಟು ಪ್ರತಿಭೆ ಇದ್ದರು ದೊಡ್ಡ ಸಾಹಸಕ್ಕೆ ಧುಮುಕುವ ಧೈರ್ಯ ಇರಲಿಲ್ಲ. ಆದರೆ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆ ಒಂದು ಮಾತು ಅವರ ಸಾಧನೆಗೆ ಛಲ ನೀಡಿದೆ. ‌ಮೋದಿ ಮಾತು ಅವರ ಬಾಳನ್ನು ಬದಲಾಯಿಸುವ ಗುರಿ ತೋರಿದೆ.

ಭಾರತ ಸ್ವಾವಲಂಬಿಯಾಗಬೇಕು. ಭಾರತದ ಲೋಕಲ್ ವಸ್ತುಗಳು ಗ್ಲೋಬಲ್ ಮನ್ನಣೆ ಪಡೆಯಬೇಕು.ಭಾರತದ ಉದ್ದಿಮೆಗಳನ್ನು ಬೆಳೆಸುವ ಮೂಲಕ ಭಾರತದ ವಸ್ತುಗಳನ್ನೇ ಜಗತ್ ವಿಖ್ಯಾತಿಗೊಳಿಸಬೇಕು. ವೋಕಲ್ ಫಾರ್ ಲೋಕಲ್ ಹೀಗೆಂದು ಹೇಳಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ. ಮೋದಿ ತನ್ನ ಕೊನೆಯ ಲಾಕ್​ಡೌನ್ ಭಾಷಣದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ದೇಶದ ಜನರ ಮುಂದೆ ತೆರೆದಿಟ್ಟರು. ಮೋದಿ ಅವರ ಭಾಷಣಕ್ಕೆ ಪ್ರತಿಪಕ್ಷಗಳು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಆ ಯುವಕ ಬಾಳಲ್ಲಿ ಮಾತ್ರ ಮೋದಿ ಮಾತು ಜೀವನದ ದಾರಿ ತೋರಿಸಿದೆ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಯುವಕರಿಗೆ ಮೋದಿಯ ಆ ಒಂದು ಮಾತು ದೊಡ್ಡ ಗುರಿ ತೋರಿದೆ.

ತಂತ್ರಜ್ಞಾನದ ಬಳಕೆ, ಹಲವು ಪ್ರಯೋಗಗಳ ನಿಪುಣತೆ ಹೊಂದಿದ ಮಂಗಳೂರಿನ ನಾಗುರಿಯ ಆ ನಾಲ್ಕು ಮಂದಿ ಯುವಕರ ತಂಡ, ಇಲ್ಲಿಯವರೆಗೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ನಿತಿನ್, ನಿಲೇಶ್, ರಾಜೇಶ್, ಜೀತೇಶ್  ಹಲವು ಪ್ರಾಜೆಕ್ಟ್ ಗಳನ್ನು ಮಾಡಿ ಕೆಲಸದ ಚಾಕಚಕ್ಯತೆಯಿಂದಲೇ ಎಲ್ಲರಿಂದಲೂ ಶಹಭಾಸ್ ಗಳಿಸಿಕೊಂಡಿದ್ದರು. ಪ್ರತಿಭೆಯ ಆಗರವೇ ತಮ್ಮಲ್ಲಿದ್ದರೂ ದೊಡ್ಡ  ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೀಗ ಮೋದಿಯ ಲಾಕ್ ಡೌನ್ ಭಾಷಣ ಒಂದು ಹೊಸ ಭಾಷ್ಯಕ್ಕೆ ನಾಂದಿಯಾಗಿದೆ.

ಹ್ಯಾಂಡ್​​ ಫ್ರೀ ಸ್ಯಾನಿಟೈಸರ್ ಸ್ಟ್ಯಾಂಡ್


ಮೋದಿಯ ವೋಕಲ್ ಫಾರ್ ಲೋಕಲ್ ಧ್ಯೇಯದಿಂದ ಸ್ಫೂರ್ತಿ ಪಡೆದು ಕೆಲಸ ಆರಂಭಿಸಿದ ತಂಡ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಉಪಕರಣವನ್ನು ಆವಿಷ್ಕಾರ ಮಾಡಿದೆ. ಮನೆಯಲ್ಲೇ ವರ್ಕ್ ಶಾಪ್ ಆರಂಭಿಸಿದ ತಂಡ ಈಗ ಬಹುಬೇಡಿಕೆಯ ಉತ್ಪನ್ನವನ್ನು ತಯಾರಿಸುವ ತಂಡವಾಗಿದೆ‌‌. ಕೊರೋನಾ ಕಾಲಘಟ್ಟದಲ್ಲಿ ಸ್ಯಾನಿಟೈಸರ್ ಬಳಕೆ ಅತೀ ಅಗತ್ಯವಾಗಿದ್ದು, ಜನರ ಅಗತ್ಯಕ್ಕೆ ತಕ್ಕಂತೆ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಮಾಡುವ ಉಪಕರಣವನ್ನು ಈ ತಂಡ ಕಂಡು ಹುಡುಕಿದೆ. ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಈಗಾಗಲೇ ಹಲವು ವಿಧದ ರೂಪದಲ್ಲಿ ಮಾರುಕಟ್ಟೆ ಯಲ್ಲಿ ಚಾಲ್ತಿಯಲ್ಲಿದೆ. ಆದರೆ ಈ ಯುವಕರ ತಂಡ ವಿನೂತನ ಮಾದರಿಯಲ್ಲಿ ಆವಿಷ್ಕಾರ ಮಾಡಿದೆ. UPVC ಪೈಪ್ ಬಳಸಿ ಸ್ಥಳಿಯವಾಗಿ ಸಿಗುವ ವಸ್ತುಗಳಿಂದ ತಯಾರು ಮಾಡಲಾಗಿದ್ದು, ಈ ಉಪಕರಣಕ್ಕೆ ಸ್ಯಾನಿ ಸ್ಟ್ಯಾಂಡ್ ಎಂದು ಹೆಸರಿಡಲಾಗಿದೆ.

ಹ್ಯಾಂಡ್​​ ಫ್ರೀ ಸ್ಯಾನಿಟೈಸರ್ ಸ್ಟ್ಯಾಂಡ್


ಕೆಲಸದ ನೈಪುಣ್ಯತೆ ಗೆ ಸಾಕ್ಷಿಯೆಂಬಂತೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಗರಿಷ್ಠ ಉಪಯೋಗ ಈ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ನಿಂದ ಪಡೆಯಬಹುದಾಗಿದೆ. ಅದಷ್ಟೇ ಅಲ್ಲದೆ 5 ಮಂದಿ ಯುವಕರ ತಂಡ Power 9 Gadgets ಎಂಬ ಕಂಪೆನಿಯನ್ನೂ ಆರಂಭಮಾಡಿದ್ದು, ಮೊದಲ ಉತ್ಪಾದನೆ ಯನ್ನೂ ಮಾಡಿದೆ. ಈ ಯುವಕರ ನೂತನ ಉಪಕರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಾರೀ ಬೇಡಿಕೆ ಬಂದಿದೆ. ಪ್ರಧಾನಿ ಮೋದಿ ಅವರ ಸ್ವಾವಲಂಬಿ ಭಾರತದ ಧ್ಯೇಯದಿಂದ ಯುವಕರು ಹೊಸ ಉದ್ದಿಮೆಗೆ ಮುಂದಾಗಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ಉಪಕರಣದ ಮೂಲಕ ಕಾಲಿನಿಂದ ಪ್ರೆಸ್ ಮಾಡಿ ಸ್ಯಾನಿಟೈಸರನ್ನು ಕೈಗೆ ಬಳಸಬಹುದಾಗಿದೆ. ಇದರಿಂದ ಮಿತವಾಗಿ ಲಿಕ್ವಿಡ್ ಹೊರ ಬರಲಿದೆ. ಯಾವುದೇ ವಿದ್ಯುತ್, ಬ್ಯಾಟರಿ ಸಹಾಯ ಇಲ್ಲದೆ ಉಪಕರಣ ಬಳಸಬಹುದಾಗಿದ್ದು, ಉಪಯೋಗವೂ ಅತ್ಯಂತ ಸರಳವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಈ ಯುವಕರ ನೂತನ ಪ್ರಯತ್ನಕ್ಕೆ ಆರಂಭದಲ್ಲೇ ಜನರಿಂದ ಮನ್ನಣೆ ವ್ಯಕ್ತವಾಗಿದೆ. ಮೋದಿಯ ಸ್ವಾವಲಂಬಿ ಭಾರತದ ಅಂಗವಾಗಿ ಯುವಕರೂ ಹೊಸ ಬಾಳಿನತ್ತ ಹೆಜ್ಜೆ ಹಾಕಿದ್ದು, ಅವರ ಪ್ರಯತ್ನಕ್ಕೆ ನಾವೂ ಬೆಸ್ಟ್ ಆಫ್ ಲಕ್ ಹೇಳೋಣ.
First published: May 27, 2020, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading