HOME » NEWS » District » MANGALORE CCB POLICE EXPOSED AFTER CAR DEAL CASE KKM SNVS

ಕಾರ್ ಡೀಲ್ ಪ್ರಕರಣದ ನಂತರ ಮಂಗಳೂರು ಪೊಲೀಸರ ಒಂದೊಂದೇ ಕರ್ಮಕಾಂಡ ಹೊರಕ್ಕೆ

ಕಬಾಲ್ ರಾಜ್ ಮಂಗಳೂರು ಸಿಸಿಬಿಯ ಪಿಎಸ್ಐ ಆಗಿದ್ದ ವೇಳೆ ಹಲವು ಅವ್ಯವಹಾರಗಳು ನಡೆದಿದೆ. ಮುಂಬೈ ಮತ್ತು ಮಂಗಳೂರಿನ ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.

news18-kannada
Updated:February 28, 2021, 8:36 AM IST
ಕಾರ್ ಡೀಲ್ ಪ್ರಕರಣದ ನಂತರ ಮಂಗಳೂರು ಪೊಲೀಸರ ಒಂದೊಂದೇ ಕರ್ಮಕಾಂಡ ಹೊರಕ್ಕೆ
ಮಂಗಳೂರು ಪೊಲೀಸರ ಕಾರ್ ಡೀಲ್ ಪ್ರಕರಣ
  • Share this:
ಮಂಗಳೂರು: ಸಿಸಿಬಿ ಪೊಲೀಸರ ಒಂದೊಂದೇ ಅವ್ಯವಹಾರ ಪ್ರಕರಣ ಹೊರಗೆ ಬರುತ್ತಾ ಇದೆ. ಕಾರು ಮಾರಾಟ ಪ್ರಕರಣದ ಬಳಿಕ ಇದೀಗ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಲಕ್ಷ ಲಕ್ಷ ಡೀಲ್ ಮಾಡಿರೋದು ಗೊತ್ತಾಗಿದೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಸಹ ಮಾಡಲಾಗಿದೆ.

ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಕಾರು ಮಾರಾಟ ಮಾಡಿರುವ ಪ್ರಕರಣದ ಬಳಿಕ ಇದೀಗ ಮಂಗಳೂರು ಸಿಸಿಬಿ ಪೊಲೀಸರ ಒಂದೊಂದೇ ಅಕ್ರಮ ವ್ಯವಹಾರಗಳು ಬೆಳಕಿಗೆ ಬರ್ತಿವೆ. ಸಿ.ಸಿ.ಬಿಯ ಪಿ.ಎಸ್.ಐ ಆಗಿ ಕಬ್ಬಾಳ್ ರಾಜ್ ಅಧಿಕಾರದಲ್ಲಿದ್ದ ಸಂದರ್ಭ ಹಲವು ಅವ್ಯವಹಾರಗಳು ನಡೆದಿರೋದು ಗೊತ್ತಾಗಿದೆ. ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಪಡೆದಿರುವುದು ಬೆಳಕಿಗೆ ಬಂದಿದೆ.

ಉದ್ಯಮಿಯಾಗಿದ್ದ ಕರುಣಾಕರ ಭಂಡಾರಿಯ ಮಂಗಳೂರು ಕಚೇರಿಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಿನಲ್ಲಿ 2019 ಜೂನ್ 25ರಂದು ಕಬ್ಬಾಳ್ ರಾಜ್ ದಾಳಿ ಮಾಡಿದ್ದರು. 66 ಲಕ್ಷ ಹಣವನ್ನು ವಶಪಡಿಸಿಕೊಂಡು ದಾಖಲೆಯಲ್ಲಿ 51.74 ಲಕ್ಷ ರೂ ಎಂದು ಉಲ್ಲೇಖ ಮಾಡಿ, 14.26 ಲಕ್ಷ ರೂ ಲಪಟಾಯಿಸಿದ್ದಾರೆ ಎಂದು ಕರುಣಾಕರ ಭಂಡಾರಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಡಾಕ್ಟರ್, ಯಮನಿಗಿಂತ ಮಿಗಿಲಾದವನು ಶಿವ; ಕಾರಜೋಳರ ಮಗನ ವಿಚಾರದಲ್ಲಿ ಇದು ನಿಜವಾಗಿದೆ: ವಿನಯ್ ಗುರೂಜಿ

ಇನ್ನು ಪ್ರಕರಣ ಹೊರ ಬರುವುದಕ್ಕೆ ಪ್ರಮುಖ ಕಾರಣವಾಗಿರುವ ದೂರುದಾರೆ ರಮ್ಯಾ ಸೆಲ್ಫಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ ವಂಚಿಸಿರುವ ಎಲಿಯ ಕಂಪೆನಿಯ ವಿರುದ್ದ ಹಿಂದಿನ ಕಮಿಷನರ್ ವಿಕಾಶ್ ಕುಮಾರ್‌ಗೆ ದೂರು ನೀಡಿದ್ದೆ. ಆರೋಪಿಗಳಿಂದ ವಶಪಡಿಸಿಕೊಂಡ ಜಾಗ್ವಾರ್ ಕಾರು ಮಾರಾಟ ಮಾಡಿದ ಬಳಿಕ ನನ್ನ ಅಕೌಂಟ್‌ಗೆ ಸ್ನೇಹಿತರು 6 ಲಕ್ಷ ರೂ ಹಣ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಕಾರು ಮಾರಾಟ ಮಾಡಿದ ಆ ಸ್ನೇಹಿತರು ಯಾರು ಎಂಬುದನ್ನು ಉಲ್ಲೇಖಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಕಬಾಲ್ ರಾಜ್ ಅಧಿಕಾರಾವಧಿಯ ಒಂದೊಂದೇ ಹಗರಣದ ಆರೋಪ ಸುದ್ದಿಯಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕಾರು ಮಾರಾಟ ಡೀಲ್ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಮಂಗಳೂರು ನಾರ್ಕೋಟಿಕ್ ಠಾಣೆ ಇನ್ಸ್​ಪೆಕ್ಟರ್ ರಾಮಕೃಷ್ಣ ಮತ್ತು ಸಿಸಿಬಿಯ ಹಿಂದಿನ ಎಸ್​ಐ ಕಬ್ಬಾಳ್ ರಾಜ್ ಅವರನ್ನ ಅಮಾನತು ಮಾಡಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದೆ ಬೀಡಿ ಉದ್ಯಮ, ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ ಕಾರ್ಮಿಕರುಮಂಗಳೂರಿನ ಸಿಸಿಬಿ ಪೊಲೀಸರ ಡೀಲಿಂಗ್ ಮಿಸ್ಟರಿ ಇಡೀ ಇಲಾಖೆಯನ್ನೇ ತಲೆ ತಗ್ಗಿಸುವಂತಾಗಿದೆ. ಸಿಸಿಬಿ ಪೊಲೀಸರ ಡೀಲ್ ಮಾಫಿಯಾ ಹಿಂದೆ ಪೊಲೀಸ್ ಉನ್ನತ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ ಉನ್ನತ ಅಧಿಕಾರಿಗಳು ಈ ಡೀಲ್​ನಲ್ಲಿ ಭಾಗವಹಿಸಿರುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಕಾರು ಮಾರಾಟ ಡೀಲ್ ಕೇಸ್‌ನ ತನಿಖೆಯನ್ನು ಸಿಐಡಿ ಟೀಂ ನಡೆಸುತ್ತಿದೆ. ಈ ಮಧ್ಯೆ ಕ್ರಿಕೆಟ್ ಬೆಟ್ಟಿಂಗ್ ದಂದೆ ಹೆಸರಿನಲ್ಲಿಯೂ ಲಕ್ಷ ಲಕ್ಷ ಡೀಲ್ ಮಾಡಿರುವ ವಿಷಯ ಹೊರಬಂದಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆಗೆ ಆದೇಶ ಮಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ: ಕಿಶನ್ ಕುಮಾರ್
Published by: Vijayasarthy SN
First published: February 28, 2021, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories