ಮಂಡ್ಯದ ‘ಯುವ ವಿಜ್ಞಾನಿ’ ಡ್ರೋನ್ ಪ್ರತಾಪನ ಮುಖವಾಡ ಬಯಲು

ಪ್ರಧಾನಿ ಮೋದಿ ಅವರೇ ಮಂಡ್ಯದ ಈ ಹುಡುಗನನ್ನ ಪ್ರಶಂಸಿಸಿ ಈತನ ಸೇವೆ ಬಳಸಿಕೊಳ್ಳುವಂತೆ ಡಿಆರ್​ಡಿಒಗೆ ಸೂಚಿಸಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಈಗ ಇದೇ ಹುಡುಗ ಬರೀ ಬೋಗಸ್ ಎಂಬ ವಾಸ್ತವ ಬೆಳಕಿಗೆ ಬಂದಿದೆ.

news18-kannada
Updated:July 11, 2020, 8:03 PM IST
ಮಂಡ್ಯದ ‘ಯುವ ವಿಜ್ಞಾನಿ’ ಡ್ರೋನ್ ಪ್ರತಾಪನ ಮುಖವಾಡ ಬಯಲು
ಡ್ರೋನ್ ಪ್ರತಾಪ್
  • Share this:
ಮಂಡ್ಯ: ಇ-ತ್ಯಾಜ್ಯಗಳಿಂದ ತಾನು 600 ಡ್ರೋನ್​ಗಳನ್ನ ತಯಾರಿಸಿದ್ದೇನೆ. ಬಡಸ್ತನದಿಂದ ಬೆಳೆದು ಮೇಲೆ ಬಂದಿದ್ದೇನೆ. ಅನೇಕ ಅಂತಾರಾಷ್ಟ್ರೀಯ ಡ್ರೋನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. 87 ದೇಶಗಳಲ್ಲಿ ಕೆಲಸ ಆಫರ್ ಇದ್ದರೂ ತಾಯಿಗೋಸ್ಕರ ದೇಶದಲ್ಲೇ ಉಳಿದುಕೊಂಡಿದ್ದೇನೆ ಎಂದು ಸಖತ್ತಾಗಿ ಬಿಂಬಿಸಿಕೊಂಡಿದ್ದ ಮಂಡ್ಯದ ‘ಡ್ರೋನ್ ಸ್ಪೆಷಲಿಸ್ಟ್’ನ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ. ಸುದ್ದಿ ಜಾಲತಾಣವೊಂದು ಈತನದ್ದು ಬರೇ ಸುಳ್ಳಿನ ಕಂತೆಗಳು ಎಂದು ತನಿಖಾ ವರದಿಯಲ್ಲಿ ಬಟಾಬಯಲು ಮಾಡಿದೆ.

ಈತನ ಹೆಸರು ಪ್ರತಾಪ್. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಯುವಕ. ‌ಈ ಯುವಕ ಎಲೆಕ್ಟ್ರಾನಿಕ್ ಇ- ತ್ಯಾಜ್ಯ ಗಳಿಂದ ದ್ರೋಣ್ ಅನ್ವೇಷಣೆ ಮಾಡಿದ್ದು, ಇದನ್ನು ಭಾರತ ದೇಶದ ಸೇವೆಗೆ ಸಮರ್ಪಿಸುವುದಾಗಿ ಹೇಳಿದ್ದ. ಆ ದಿನಗಳ ಈತನ‌ ಸಾಧನೆಯನ್ನು ದೇಶದ ಎಲೆಕ್ಟ್ರಾನಿಕ್ ಮೀಡಿಯಾಗಳು ಸೇರಿದಂತೆ ಸೋಷಿಯಲ್ ಮೀಡಿಯಾಗಳು ಕೊಂಡಾಡಿದ್ದವು. ಅಲ್ಲದೆ, ಈತನನ್ನು‌ ದೇಶದ  ಯುವ ವಿಜ್ಞಾನಿ ಅಂತಲೇ ಬಿಂಬಿಸಿದ್ದವು. ಈತ 600ಕ್ಕು ಹೆಚ್ಚು‌ ದ್ರೋಣ್​ಗಳನ್ನು ಎಲೆಕ್ಟ್ರಾನಿಕ್ ಈ=ತ್ಯಾಜ್ಯಗಳಿಂದಲೇ ನಿರ್ಮಿಸಿದ್ದಾನೆ ಎಂದು ಸುದ್ದಿ ಹಬ್ಬಿಸಿ  ಹೀರೋ ಎಂದು ಬಿಂಬಸಲಾಗಿತ್ತು. ಅಲ್ಲದೆ, ಈತ ಕೂಡ ತಾನು ‌ಬಡ ವರ್ಗದಿಂದ ಮೇಲೆ ಬಂದವನು. ತನ್ನ ಈ ಸಾಧನೆ‌ ದೇಶಕ್ಕೆ ಮೀಸಲು ಎಂದು ಮಾತನಾಡಿ ಇಡೀ ದೇಶದ ಜನರ ಬಾಯಲ್ಲಿ ಯುವ ವಿಜ್ಞಾನಿ ದ್ರೋಣ್ ಪ್ರತಾಪ್ ಎಂದೇ ಪ್ರಸಿದ್ದಿ‌ ಪಡೆದಿದ್ದ‌.

ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಹತ್ಯೆ; ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ನಾಲ್ವರ ಕೊಲೆ

ಈತ 2018ರಲ್ಲಿ ಜರ್ಮನಿಯಲ್ಲಿ ನಡೆದ ಆಲ್ಬರ್ಟ್ ಐನ್​ಸ್ಟೀನ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗೋಲ್ಡ್ ಮೆಡಲ್ ಸಿಕ್ಕಿದೆ. ಸಿ ಬಿಡ್​ನಲ್ಲಿ ಮೊದಲ ಬಹುಮಾನ ಲಭಿಸಿದೆ. 2017 ರಲ್ಲಿ ಜಪಾನ್​ನಲ್ಲಿ ನಡೆದ ರೋಬೊಟಿಕ್ ಎಕ್ಸಿಬಿಷನ್​ನಲ್ಲಿ ಚಿನ್ನದ ಪದಕ ಪಡೆದಿದ್ದೇನೆ. ಇ-ವೇಸ್ಟ್‍ಗಳನ್ನು ಬಳಸಿ ದೇಶದ ರಕ್ಷಣಾ ಪಡೆಗೆ ಸಹಕಾರಿಯಾಗುವ ಡ್ರೋನ್ ಕಂಡುಹಿಡಿದ್ದೀನಿ. 600 ಡ್ರೋನ್‍ಗಳ ಅನ್ವೇಷಣೆಯಾಗಿದೆ ಎಂದಿದ್ದ. ಜೊತೆಗೆ ಯಾವುದೋ ಎಕ್ಸಿಬಿಷನ್​ನಲ್ಲಿ ಜಪಾನ್ ಕಂಪನಿಯೊಂದು ತಯಾರಿಸಿದ ಡ್ರೋನ್​ವೊಂದರ ಮುಂದೆ ಫೊಟೋ ತೆಗೆಸಿಕೊಂಡು ಇದು ನಾನು ತಯಾರಿಸಿದ್ದು ಅಂತೆಲ್ಲಾ ಹೇಳಿಕೊಂಡಿದ್ದ. ಅಲ್ಲದೆ, ಇತ್ತೀಚೆಗೆ ದೇಶದ ರಕ್ಷಣಾ ಸಂಶೋಧನ‌ ಸಂಸ್ಥೆ DRDOದಲ್ಲಿ ಕೆಲಸ ಸಿಕ್ಕಿದ್ದೆ. ‌ಮಹತ್ವದ ಪ್ರಾಜೆಕ್ಟ್​ವೊಂದರಲ್ಲಿ ಕೆಲಸ ಮಾಡುತ್ತಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲಾಗಿತ್ತು.

‌ಈ ವಿಷಯದ ಕುರಿತು opindia ಎಂಬ ಸುದ್ದಿವಿಶ್ಲೇಷಣಾ ಜಾಲತಾಣವೊಂದು ನಡೆಸಿದ ತನಿಖಾ ವರದಿಯಲ್ಲಿ ಈ ಯುವ ವಿಜ್ಞಾನಿಯ ಸಾಚಾತನ ಬಯಲಿಗೆ ಬಂದಿದೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದೇನೆ ಎಂದಿದ್ದ ಪ್ರತಾಪನ ಹೆಸರಲ್ಲಿ ಯಾವುದೇ ಪ್ರಶಸ್ತಿಗಳು ದಾಖಲಾಗಿಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಈ ಹಿಂದೆ ಪ್ರತಾಪನ ಅಸಲಿಯತ್ತು ತಿಳಿಯದೆ ಕೊಂಡಾಡಿದ್ದ ನಟ ಜಗ್ಗೇಶ್ ಪ್ರತಾಪನ ಬಗ್ಗೆ ಸತ್ಯ ತಿಳಿಯುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುತ್ತು ತಿಂದರೂ ಪ್ರಾಮಾಣಿಕವಾಗಿ ಗಳಿಸಬೇಕು. ಇನ್ಮುಂದೆ ಅನಾಮಿಕರನ್ನ ನಂಬಲ್ಲ ಎಂದು ತಮ್ಮ ಟಿಟ್ಟರ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Lockdown - ಮಂಗಳವಾರದಿಂದ ಒಂದು ವಾರ ಕಾಲ ಲಾಕ್​ಡೌನ್?

ಇನ್ನು, ಈ ನಕಲಿ ವಿಜ್ಞಾನಿ ಅನ್ವೇಷನೆ ಮಾಡಿದ್ದು ಯಾವ ಡ್ರೋನೂ ಅಲ್ಲ, ಗಳಿಸಿದ್ದು ಯಾವ ಪ್ರಶಸ್ತಿಗಳನ್ನೂ ಅಲ್ಲ. ಪ್ರತಾಪ ಹೇಳಿದ್ದು ಬರೀ ಸುಳ್ಳು. ಕಳೆದೆರಡು ವರ್ಷಗಳಿಂದ ಕಟ್ಟು ಕಥೆ ಹೇಳಿ ನಂಬಿಸಿದ್ದ ಪ್ರತಾಪ್ ನಾನು ಮಳವಳ್ಳಿಯೊಂದರ ಸಣ್ಣ ಹಳ್ಳಿಯವನು. ಬಡಕುಟಂಬದ ಹಿನ್ನೆಲೆಯಿಂದ ಬಂದು ಡ್ರೋನ್ ತಯಾರಿಸಿ ದೊಡ್ಡ ಸಾಧನೆ ಮಾಡಿದ್ದೀನಿ ಎಂದಿದ್ದ.  ಈತನ ಬೊಗಳೆ ಮಾತಿಗೆ ಮರುಳಾಗಿ ದೊಡ್ಡ ದೊಡ್ಡ ರಾಜಕಾರಣಿಗಳು, ಸ್ವಾಮೀಜಿಗಳು, ನಟರು, ಗಣ್ಯರು ಈತನ ಬುರುಡೆ ಸಾಧನೆಯನ್ನೇ ನಿಜವೆಂದು ಭಾವಿಸಿ ಹ್ಯಾಟ್ಸಾಫ್ ಹೇಳಿದ್ದರು. ಪ್ರತಾಪನ ತಳ-ಬುಡ ತಿಳಯದೆ ಕರ್ನಾಟಕದ ಮಾಧ್ಯಮಗಳಂತೂ ಡ್ರೋನಾಚಾರ್ಯ, ಮಹಾನ್ ವಿಜ್ಞಾನಿ ಅಂತೆಲ್ಲಾ ಕಾರ್ಯಕ್ರಮಗಳನ್ನ ಬಿತ್ತರಿಸಿದ್ದವು. ಸಿಎಂ, ಪಿಎಂ, ದೊಡ್ಡ ಮಠಾಧೀಶರು, ಸಂಘಸಂಸ್ಥೆಗಳು ಪ್ರತಾಪನನ್ನ ಸನ್ಮಾನಿಸಿದ್ದವು. ಕಾಲೇಜು ಕಾರ್ಯಕ್ರಮಗಳಲ್ಲಿ ಈತನ ಭಾಷಣದ ಬೂಟಾಟಿಕೆ ಅದ್ದೂರಿಯಾಗಿತ್ತು. ನಾನು 600 ಡ್ರೋನ್‍ಗಳನ್ನ ತಯಾರಿಸಿದ್ದೀನಿ. 87 ದೇಶಗಳು ನನಗೆ ಕೆಲಸದ ಆಫರ್ ನೀಡಿವೆ. ಆದರೆ ತಾಯಿ ಸೆಂಟಿಮೆಂಟ್​ನಿಂದ ನಾನು ಬೇರೆ ದೇಶಗಳಿಗೆ ಹೋಗ್ತಿಲ್ಲ ಎಂದಿದ್ದು ಬರೀ ಬೂಟಾಟಿಕೆ ಅನ್ನಿಸ್ತಿದೆ.

ಒಟ್ಟಾರೆ ಈ ನಕಲಿ ಯುವ ವಿಜ್ಞಾನಿ ಪ್ರತಾಪನ ನಿಜಬಣ್ಣ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈತನಿಗೆ ತೀವ್ರ ವಿರೋಧ ಕೇಳಿಬರುತ್ತಿದೆ. ಆದರೆ, ಡ್ರೋನ್ ಪ್ರತಾಪ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಯಾರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದಾನೆ.
Published by: Vijayasarthy SN
First published: July 11, 2020, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading