• Home
  • »
  • News
  • »
  • district
  • »
  • ಮಂಡ್ಯ ಜಿ.ಪಂ.ನಲ್ಲಿ ನಿಲ್ಲದ ಜೆಡಿಎಸ್ ಸದಸ್ಯರ ರಗಳೆ : ಅಧ್ಯಕ್ಷೆಗೆ ಬೆಂಬಲವಾಗಿ ನಿಂತ ಸಿಇಒ ವಿರುದ್ದ ಸದಸ್ಯರ ಆಕ್ರೋಶ

ಮಂಡ್ಯ ಜಿ.ಪಂ.ನಲ್ಲಿ ನಿಲ್ಲದ ಜೆಡಿಎಸ್ ಸದಸ್ಯರ ರಗಳೆ : ಅಧ್ಯಕ್ಷೆಗೆ ಬೆಂಬಲವಾಗಿ ನಿಂತ ಸಿಇಒ ವಿರುದ್ದ ಸದಸ್ಯರ ಆಕ್ರೋಶ

ಪ್ರತಿಭಟನೆ ನಡೆಸಿದ ಜೆಡಿಎಸ್ ಸದಸ್ಯರು

ಪ್ರತಿಭಟನೆ ನಡೆಸಿದ ಜೆಡಿಎಸ್ ಸದಸ್ಯರು

ಅಧ್ಯಕ್ಷೆಯ ಗಂಡ ಬಿಜೆಪಿ ಸೇರಿರುವ ಕಾರಣದಿಂದ ಜಿಲ್ಲೆಯ ಅಭಿವೃದ್ದಿಗಿಂತ ರಾಜಕೀಯ ದ್ವೇಷ ಸಾಧನೆಗಾಗಿ ಜೆಡಿಎಸ್ ಸದಸ್ಯರ ವರ್ತನೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

  • Share this:

ಮಂಡ್ಯ(ಅಕ್ಟೋಬರ್​. 16): ಮಂಡ್ಯ  ಜಿಲ್ಲಾ ಪಂಚಾಯತ್​​ ನಲ್ಲಿ ಜೆಡಿಎಸ್ ಸದಸ್ಯರ ರಗಳೆ ನಿಲ್ಲುವಂತೆ ಕಾಡುತ್ತಿಲ್ಲ. ಎರಡು ದಿನಗಳ ಹಿಂದಷ್ಟೆ ಕೊರಂ ಕೊರತೆಯಿಂದ ಜಿ.ಪಂ. ‌ಅಧ್ಯಕ್ಷೆ ನಾಗರತ್ನ ಸ್ವಾಮಿ ಸಾಮಾನ್ಯ ಸಭೆ ಮುಂದೂಡಿದ್ದರು. ಇದೀಗ ಅಧ್ಯಕ್ಷೆಯ ನಡೆಯನ್ನು ಖಂಡಿಸಿ ಸ್ವಪಕ್ಷದ ಸದಸ್ಯರೇ ಅಧ್ಯಕ್ಷೆಯ ಸರ್ವಾಧಿಕಾರದ ವಿರುದ್ದ ಗರಂ ಆಗಿದ್ದು, ಜಿಲ್ಲಾ ಪಂಚಾಯತ್​ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. ಅಲ್ಲದೇ ಅಧ್ಯಕ್ಷೆಗೆ ಬೆಂಬಲವಾಗಿ ನಿಂತ  ಜಿ.ಪಂ ಸಿಇಒ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮೊನ್ನೆಯಷ್ಟೆ ಜಿ.ಪಂ.ನಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಜೆಡಿಎಸ್ ಸದಸ್ಯರು ಹೋಗದ ಕಾರಣ ಜಿ.ಪಂ.ಅಧ್ಯಕ್ಷೆ ನಾಗರತ್ನ ಸ್ವಾಮಿ ಸಭೆಗೆ ಕೋರಂ ಇಲ್ಲದ ಕಾರಣ ಹೇಳಿ ಕೇವಲ 10 ನಿಮಿಷ ಸಭೆ ಮಾಡಿ ಸಾಮಾನ್ಯ ಸಭೆ ಮುಂದೂಡಿದ್ದರು. ಅಭಿವೃದ್ದಿ ವಿಚಾರ ಮರೆತು ಸಭೆ ಮುಂದೂಡಿಕೆ ಮಾಡುತ್ತಿರುವ ಅಧ್ಯಕ್ಷೆಯ ವಿರುದ್ದ ಜೆಡಿಎಸ್ ಸದಸ್ಯರು ಗರಂ ಆಗಿದ್ದು ಇಂದು ಜಿ.ಪಂ. ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.


ಅಧ್ಯಕ್ಷೆಗೆ ಬೆಂಬಲವಾಗಿ ನಿಂತಿರುವ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿರುದ್ದ ದಿಕ್ಕಾರ ಕೂಗಿ ರಾಜೀನಾಮೆಗೆ ಒತ್ತಾಯಿಸಿದರು. ಇನ್ನು ಜಿಲ್ಲಾ ಪಂಚಾಯತ್​ ಕಚೇರಿ ಮುಂದೆ ಸಿಇಒ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಸಿಇಒ ಮಾತ್ರ ಕ್ಯಾರೆ ಎನ್ನಲಿಲ್ಲ‌.


ಕಚೇರಿ ಮುಂದೆ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದ ಸುದ್ದಿ ತಿಳಿದು ಬೆಳಿಗ್ಗೆ ಹಿಂಬಾಗಿಲ ಮೂಲಕ ಕಚೇರಿ ತೆರಳಿದರು.‌ ಇದರಿಂದ  ಮತ್ತಷ್ಟು ಆಕ್ರೋಶಗೊಂಡ ಸದಸ್ಯರು ಹಿಂಬಾಗಿಲು ಕೂಡ ಬೀಗ ಹಾಕಿ ಮತ್ರಷ್ಟು ಪ್ರತಿಭಟನೆ ಚುರುಕುಗೊಳಿಸಿ ಧಿಕ್ಕಾರ ಕೂಗಲು ಆರಂಭಿಸಿದರು.‌


ಜಿಲ್ಲಾ ಪಂಚಾಯತ್​ ನ ಮಾಜಿ ಅಧ್ಯಕ್ಷೆ ಪ್ರೇಮಾಕುಮಾರಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಮಧ್ಯಾಹ್ನವಾಗುತ್ತಲೆ ಹಿಂಬಾಗಿಲ‌ ಮೂಲಕ ಊಟಕ್ಕೆ ಹೋಗಲು ತೆರಳಿದ ಸಿಇಒ ಹಿಂಬಾಗಲಿನ‌ ಬೀಗ ಹಾಕಿದ ಕಾರಣ ಮುಂಭಾಗ ದಿಂದಲೇ ಹೊರ ಬರುತ್ತಲೆ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಘೇರಾವು ಹಾಕಿ ಪ್ರತಿಭಟನೆ ನಡೆಸಿದರು.


ಇದನ್ನೂ ಓದಿ : ಭೀಮೆಯಲ್ಲಿ ಪ್ರವಾಹ ; ಸೂರಿಗಾಗಿ ಮೇಲ್ಛಾವಣಿ ಏರಿ ಕುಳಿತ ಅಜ್ಜಿ ; ಮೂರು ದಿನಗಳಿಂದಲೂ ಉಪವಾಸ


ಈ ವೇಳೆಯೂ ಜೆಡಿಎಸ್ ಸದಸ್ಯರ ನಡುವೆ ಹೊರಬಂದು ಊಟಕ್ಕೆ ತೆರಳಿದರು. ಈ ವೇಳೆ ಮಾತನಾಡಿದ ಸಿಇಒ, ತನ್ನದೇನು ತಪ್ಪಿಲ್ಲ. ಸರ್ಕಾರದ ಆದೇಶದಂತೆ ಕೆಲಸ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಯಾರ ಕಡೆಯೂ ಇಲ್ಲ‌. ಸರ್ಕಾರಕ್ಕೆ 7 ಸಾಮಾನ್ಯ ಸಭೆ ನಡೆಯದ ಕುರಿತು ವರದಿ ಸಲ್ಲಿಸಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ‌.


ಒಟ್ಟಾರೆ ಮಂಡ್ಯ ಜಿ.ಪಂ.ನಲ್ಲಿ ಜೆಡಿಎಸ್ ಸದಸ್ಯರ ವರ್ತನೆಯಿಂದ 7 ಸಾಮಾನ್ಯ ಸಭೆಗಳು ನಡೆಯದೆ ಜಿಲ್ಲೆಯ ಅಭಿವೃದ್ದಿ ಹಾಳಾಗಿದೆ‌. ಅಧ್ಯಕ್ಷೆಯ ಗಂಡ ಬಿಜೆಪಿ ಸೇರಿರುವ ಕಾರಣದಿಂದ ಜಿಲ್ಲೆಯ ಅಭಿವೃದ್ದಿಗಿಂತ ರಾಜಕೀಯ ದ್ವೇಷ ಸಾಧನೆಗಾಗಿ ಜೆಡಿಎಸ್ ಸದಸ್ಯರ ವರ್ತನೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Published by:G Hareeshkumar
First published: