ವೋಕಲ್ ಫಾರ್ ಲೋಕಲ್​ಗೆ ಬಲ ತಂದ ಮಂಡ್ಯದ ಯುವ ವಿಜ್ಞಾನಿಗಳು; ಉತ್ಪನ್ನ ತಯಾರಿಕೆ ದೇಶ ಗುರುತಿಸಲು ಆ್ಯಪ್ ಅಭಿವೃದ್ಧಿ

ಈ ಆ್ಯಪ್ ಅನ್ನು ಸಿಸ್ಟಂಗೆ ಅಳವಡಿಸಿಕೊಂಡು ಆನ್​ಲೈನ್​ನಲ್ಲಿ ಶಾಪಿಂಗ್ ಮಾಡೋವಾಗ ಆ ವಸ್ತು ಯಾವ ದೇಶದಲ್ಲಿ ತಯಾರಾಗಿದ್ದು ಎಂಬ ಮಾಹಿತಿಯನ್ನು ಈ ಆ್ಯಪ್ ನೀಡಲಿದೆ. ಆ ಮೂಲಕ ದೇಶದ ಗ್ರಾಹಕರು ದೇಶೀಯ ವಸ್ತುಗಳನ್ನು ಖರೀದಿಸಲು ನೆರವಾಗಲಿದೆ. ದೇಶೀಯ ಉತ್ಪನ್ನಗಳ ಖರೀದಿ ಹೆಚ್ಚಾದರೆ ದೇಶದ ಆರ್ಥಿಕತೆಗೆ  ಸಹಾಯಕವಾಗಲಿದೆ.

news18-kannada
Updated:July 18, 2020, 2:42 PM IST
ವೋಕಲ್ ಫಾರ್ ಲೋಕಲ್​ಗೆ ಬಲ ತಂದ ಮಂಡ್ಯದ ಯುವ ವಿಜ್ಞಾನಿಗಳು; ಉತ್ಪನ್ನ ತಯಾರಿಕೆ ದೇಶ ಗುರುತಿಸಲು ಆ್ಯಪ್ ಅಭಿವೃದ್ಧಿ
ಮೂವರು ಯುವ ವಿಜ್ಞಾನಿಗಳು ಪ್ರಶಸ್ತಿ ಪಡೆಯುತ್ತಿರುವ ಸಂದರ್ಭ.
  • Share this:
ಮಂಡ್ಯ: ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಚೀನಾದ 59 ಆ್ಯಪ್​ಗಳನ್ನು ಭಾರತ ಸರ್ಕಾರ‌ ನಿರ್ಬಂಧಿಸಿತ್ತು. ಅಲ್ಲದೇ ಪರ್ಯಾಯವಾಗಿ‌ ಆತ್ಮ ನಿರ್ಭಾರ್ ಮೂಲಕ ಸ್ವದೇಶಿ ಉತ್ಪನ್ನಗಳಿಂದಲೇ‌ ದೇಶದ ಆರ್ಥಿಕತೆ ಹೆಚ್ಚಿಸಲು‌ ವೋಕಲ್ ಫಾರ್ ಲೋಕಲ್ ಚಳವಳಿಗೆ ಪ್ರಧಾನಿ ಮೋದಿ ಕರೆ ನೀಡಿದರು. ಪ್ರಧಾನಿಯ ಈ ಸ್ವದೇಶಿ ವಸ್ತುಗಳ ಬಳಕೆಯ ಕೆರೆ ಬೆಂಬಲಿಸಿ ಮಂಡ್ಯದ ಯುವ ವಿಜ್ಞಾನಿ‌ ಸುಹೇಲ್ ನೇತೃತ್ವದ ತಂಡವೊಂದು ಇದೀಗ ಆನ್​ಲೈನ್ ಶಾಪಿಂಗ್ ಮಾಡುವ ಜನರಲ್ಲಿ ದೇಶೀಯ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು‌ ಮುಂದಾಗಿದೆ. ಆನ್​ಲೈನ್​ನಲ್ಲಿ ಜನರು ಖರೀದಿಸುವ ಉತ್ಪನ್ನಗಳು ಯಾವ ದೇಶದಲ್ಲಿ ತಯಾರಾಗಿದ್ದು ಎಂಬ ಮಾಹಿತಿ ತೋರಿಸುವ ಆ್ಯಪ್ ಅಭಿವೃದ್ಧಿ ಮಾಡಿದ್ದು, ಈ ಮೂಲಕ ಭಾರತ ವಸ್ತುಗಳ‌ ಖರೀದಿಗೆ ಪ್ರೇರೇಪಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಯುವ ವಿಜ್ಞಾನಿಯಾಗಿ ಗುರುತಿಸಿಕೊಂಡು‌ ಕಳೆದ ವರ್ಷ ಕೇಂದ್ರ ಸರ್ಕಾರ ಬಾಲಶಕ್ತಿ ಪುರಸ್ಕಾರ್ ಪ್ರಶಸ್ತಿ ಪಡೆದಿದ್ದ ಮಂಡ್ಯದ ಮಹಮದ್ ಸುಹೇಲ್ ಇದೀಗ ತನ್ನ ಮತ್ತೊಂದು‌ ಸಾಧನೆ ಮೂಲಕ ಸುದ್ದಿಯಾಗಿದ್ದಾರೆ. ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರ ಚಳವಳಿ‌ ಆರಂಭಗೊಂಡಿರುವ‌ ಈ ಸಂಧರ್ಭದಲ್ಲಿ ಯಾವುದೇ ವಸ್ತುಗಳನ್ನು ತಯಾರಿಸುವ ದೇಶವನ್ನು ಗುರುತಿಸುವ ಶೋಚ್ ಹೆಸರಿನ ಸ್ವದೇಶಿ ಆ್ಯಪ್​  ಅನ್ನು ತನ್ನ ಇಬ್ಬರು ಸ್ನೇಹಿತರಾದ ಸ್ವಸ್ತಿಕ್ ಪದ್ಮರಾಜ್ ಮತ್ತು ಪ್ರಣವ್ ಜೊತೆ ಸೇರಿ ಅಭಿವೃದ್ದಿಪಡಿಸಿದ್ದಾರೆ. ಈ ಮೂವರು  ಅಭಿವೃದ್ದಿಪಡಿಸಿರುವ ಈ‌  ಶೋಚ್ ಆ್ಯಪ್ ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ದೇಶದ ಯಾವುದೇ ಗ್ರಾಹಕನಿಗೆ ತಾನು ಕೊಳ್ಳುತ್ತಿರುವ ಉತ್ಪನ್ನ ಯಾವ ದೇಶದ್ದು‌ ಅನ್ನೋ ಮಾಹಿತಿಯನ್ನು ನೀಡಲಿದೆ. ಇದರಿಂದ ಬಹುತೇಕರಿಗೆ ಭಾರತದ ಉತ್ಪನ್ನ‌ವನ್ನು‌ ಖರೀದಿಸಲು ಈ ಆ್ಯಪ್ ಸಹಕಾರಿಯಾಗಲಿದೆ. ಈ ಮೂಲಕ  ಪ್ರಧಾನಿ ಮೋದಿಯ ವೋಕಲ್ ಫಾರ್ ಲೋಕಲ್ ಚಳವಳಿಗೆ ತಾವು ಕೈ ಜೋಡಿಸುವ ಸಣ್ಣ ಪ್ರಯತ್ನ ಅಂತಾರೆ‌ ಈ ಯುವ ವಿಜ್ಞಾನಿಗಳು.

ಇನ್ನು ಈ ಆ್ಯಪ್ ಅನ್ನು ಸಿಸ್ಟಂಗೆ ಅಳವಡಿಸಿಕೊಂಡು ಆನ್​ಲೈನ್​ನಲ್ಲಿ ಶಾಪಿಂಗ್ ಮಾಡೋವಾಗ ಆ ವಸ್ತು ಯಾವ ದೇಶದಲ್ಲಿ ತಯಾರಾಗಿದ್ದು ಎಂಬ ಮಾಹಿತಿಯನ್ನು ಈ ಆ್ಯಪ್ ನೀಡಲಿದೆ. ಆ ಮೂಲಕ ದೇಶದ ಗ್ರಾಹಕರು ದೇಶೀಯ ವಸ್ತುಗಳನ್ನು ಖರೀದಿಸಲು ನೆರವಾಗಲಿದೆ. ದೇಶೀಯ ಉತ್ಪನ್ನಗಳ ಖರೀದಿ ಹೆಚ್ಚಾದರೆ ದೇಶದ ಆರ್ಥಿಕತೆಗೆ  ಸಹಾಯಕವಾಗಲಿದೆ.

ಇದನ್ನು ಓದಿ: BBMP Commissioner: ಬಿಬಿಎಂಪಿ ಕಮಿಷನರ್​ ಅನಿಲ್​ ಕುಮಾರ್​ ವರ್ಗಾವಣೆ; ಮಂಜುನಾಥ್ ಪ್ರಸಾದ್ ನೂತನ ಆಯುಕ್ತ

ಚಿಕ್ಕಂದಿನಿಂದಲೇ ವಿಜ್ಞಾನದ ಕಡೆ ಆಕರ್ಷಿತನಾಗಿ ಈಗಾಗಲೇ ಹಲವಾರು‌ ಸಂಶೋಧನೆ ನಡೆಸಿರುವ ಸುಹೇಲ್​ಗೆ 2018ರ ರಾಷ್ಟ್ರೀಯ ಅಮೆಚೂರ್ ಸೈಂಟಿಸ್ಟ್ ಪ್ರಶಸ್ತಿ, 2017 ಮತ್ತು 2018ರಲ್ಲಿ ಎರಡು ಬಾರಿ ಅಗಸ್ತ್ಯ ಜಿಗ್ನಾಸ್ಯಾ ರಾಷ್ಟ್ರೀಯ ವಿಜ್ಞಾನ ವಿಶೇಷ ಪ್ರಶಸ್ತಿ, ಸೇರಿದಂತೆ ಜಿಲ್ಲಾ ಬಾಲ ವಿಜ್ಞಾನಿ, ಜಿಲ್ಲಾ ಯುವ ವಿಜ್ಞಾನಿ, 2013 ಮತ್ತು 2018ರಲ್ಲಿ ಎರಡು ಬಾರಿ ರಾಜ್ಯ ಯುವ ವಿಜ್ಞಾನಿ,  217ರಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕಲಾಶ್ರೀ, ಜಿಲ್ಲಾ ಅಸಾಧಾರಣ ಪ್ರತಿಭಾ ಪ್ರಶಸ್ತಿಗಳು ಸಂದಿವೆ. ಜೊತೆಗೆ ಐರಿಷ್ ರಾಷ್ಟ್ರೀಯ ಗ್ರಾಂಡ್ ಅವಾರ್ಡ್-2018ರ ಗೌರವ ಕೂಡ  ಸಿಕ್ಕಿದೆ. ಮಗನ‌ ಈ ಸಾಧನೆಗೆ ಚಿಕ್ಕಂದಿನಿಂದ ನೀರೆರೆದು ಪೋಷಿಸಿದ ತಂದೆ ಅನಾರ್ಕಲಿ ಸಲೀಂ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮಗನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿ ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.
Published by: HR Ramesh
First published: July 18, 2020, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading